ಸಾರಾಂಶ
ಚಿನಕುರಳಿ ಗ್ರಾಪಂ ಹಿಂದಿನ ಅಧ್ಯಕ್ಷೆ ಗಾಯಿತ್ರಿ ಕುಮಾರ್ ಹಾಗೂ ಉಪಾಧ್ಯಕ್ಷ ಬಿ.ಶ್ರೀನಿವಾಸ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆದು ಧನಲಕ್ಷ್ಮಿ ಹಾಗೂ ನರಸಿಂಹಶೆಟ್ಟಿ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿನಕುರಳಿ ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಧನಲಕ್ಷ್ಮಿ ವಸಂತಕುಮಾರ್, ನರಸಿಂಹಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.ಗ್ರಾಪಂ ಹಿಂದಿನ ಅಧ್ಯಕ್ಷೆ ಗಾಯಿತ್ರಿ ಕುಮಾರ್ ಹಾಗೂ ಉಪಾಧ್ಯಕ್ಷ ಬಿ.ಶ್ರೀನಿವಾಸ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆದು ಧನಲಕ್ಷ್ಮಿ ಹಾಗೂ ನರಸಿಂಹಶೆಟ್ಟಿ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಪುಟ್ಟಮಾಯಿಗೌಡ ಘೋಷಿಸಿದರು.
ನೂತನ ಅಧ್ಯಕ್ಷೆ ಧನಲಕ್ಷ್ಮಿ ಹಾಗೂ ಉಪಾಧ್ಯಕ್ಷ ನರಸಿಂಹಶೆಟ್ಟಿ ಅವರನ್ನು ಎಲ್ಲಾ ಸದಸ್ಯರು, ಮುಖಂಡರು ಅಭಿನಂದಿಸಿದರು.ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ನಮ್ಮ ನಾಯಕರು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಸಲಹೆ, ಸೂಚನೆಯಂತೆ ಧನಲಕ್ಷ್ಮಿಹಾಗೂ ನರಸಿಂಹಶೆಟ್ಟಿ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರು ಜತೆಗೂಡಿ ಗ್ರಾಪಂ ಅಭಿವೃದ್ದಿಗೆ ಒಟ್ಟಾಗಿ ಶ್ರಮಿಸಬೇಕು ಎಂದರು.
ಈ ವೇಳೆ ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ವಿಎಸ್‌ಎಸ್‌ಎನ್‌ಬಿ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ, ಟಿಎಪಿಸಿಎಂಎಸ್ ನಿರ್ದೇಶಕ ರಾಮಕೃಷ್ಣೇಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪ್ರಕಾಶ್, ಶಿಂಡಭೋಗನಹಳ್ಳಿ ನಾಗಣ್ಣ, ಎ.ಎಸ್.ರಮೇಶ್, ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಸ್ವಾಮೀಗೌಡ, ಎಂ.ಎಲ್.ರಮೇಶ್, ಸದಸ್ಯರಾದ ಮಹಮದ್ ಇಮ್ತಿಯಾಜ್ ಪಾಷ, ಕೆ.ಎಸ್.ಪುಟ್ಟಸ್ವಾಮಿ (ಪಾಪಣ್ಣ), ಸಿ.ಎ.ಲೋಕೇಶ್, ಸಿ.ಎಸ್.ಪರಮೇಶ್, ಕೃಷ್ಣೇಗೌಡ, ಮಂಜುಳ ಸಿ.ಡಿ.ಮಹದೇವು, ಗಾಯಿತ್ರಿಕುಮಾರ್, ಬಿ.ಶ್ರೀನಿವಾಸ್, ಡಿ.ಎ.ಇಂದ್ರಾಣಿ, ಕಮಲಮ್ಮ, ಸತೀಶ್, ಸುಶೀಲ, ದಿವ್ಯ, ಎ.ಜೆ.ನಾಗೇಗೌಡ, ದೇವರಾಜು, ಶ್ವೇತಾ, ಶಿವಮ್ಮ, ಸುಮ ಜಿ.ಆರ್., ವಿಎಸ್‌ಎಸ್‌ಎನ್‌ಬಿ ಮಾಜಿ ಅಧ್ಯಕ್ಷ ಮಂಜುನಾಥ್, ಡೇರಿ ಮಾಜಿ ಅಧ್ಯಕ್ಷ ರಮೇಶ್, ಗ್ರಾಪಂ ಮಾಜಿ ಸದಸ್ಯ ಸಿ.ಡಿ.ಮಹದೇವು, ಪಿಡಿಓ ಆರತಿಕುಮಾರಿ ಸೇರಿದಂತೆ ಹಲವರು ಹಾಜರಿದ್ದರು.ಇಂದು ವಿಶ್ವ ಜೀವ ವೈವಿಧ್ಯ ದಿನ ಆಚರಣೆ
ಮಂಡ್ಯ: ಕೃಷಿಕ ಅಲಯನ್ ಸಂಸ್ಥೆ ವತಿಯಿಂದ ನಗರದ ಮರೀಗೌಡ ಬಡಾವಣೆ 3ನೇ ಕ್ರಾಸ್ ನ ಉದ್ಯಾನವನದಲ್ಲಿ ಮೇ 22 ರಂದು ಬೆಳಗ್ಗೆ 8 ಗಂಟೆಗೆ ಪ್ರಕೃತಿಯೊಂದಿಗೆ ಸಾಮರಸ್ಯ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತ ಘೋಷ ವಾಕ್ಯದೊಂದಿಗೆ ವಿಶ್ವ ಜೀವ ವೈವಿಧ್ಯ ದಿನ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ.