ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹೋಬಳಿಯ ಗಡಿಭಾಗದ ಆನೆಗೊಳ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾಗಿ ಅಂಚೆಬೀರನಹಳ್ಳಿ ಧನಲಕ್ಷ್ಮೀ ಮಂಜೇಗೌಡ ಅವಿರೋಧವಾಗಿ ಸೋಮವಾರ ಆಯ್ಕೆಯಾದರು.ಹಿಂದಿನ ಉಪಾಧ್ಯಕ್ಷ ಎ.ಪಿ.ನಂಜೇಶ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಧನಲಕ್ಷ್ಮೀ ಮಂಜೇಗೌಡ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಘೋಷಣೆ ಮಾಡಿದರು.
ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್‌ಕುಮಾರ್, ಸಹಚುನಾವಣಾಧಿಕಾರಿ ಅನಿಲ್‌ಬಾಬು, ಪಿಡಿಒ ರವಿಕುಮಾರ್, ಲೆಕ್ಕಸಹಾಯಕ ನವೀನ್‌ಕುಮಾರ್ ಕರ್ತವ್ಯ ನಿರ್ವಹಿಸಿದರು.ನೂತನ ಉಪಾಧ್ಯಕ್ಷರನ್ನು ಅಭಿಮಾನಿಗಳು, ಕಾರ್ಯಕರ್ತರು ಪುಷ್ಪಮಾಲೆ ಅರ್ಪಿಸಿ, ಸಿಹಿ ತಿನಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಜೆಡಿಎಸ್ ಮುಖಂಡರಾದ ಸಿ.ಎನ್. ಪುಟ್ಟಸ್ವಾಮಿಗೌಡ, ಬಿ.ಎಂ.ಕಿರಣ್, ಐಕನಹಳ್ಳಿ ಕೃಷ್ಣೇಗೌಡ, ಬಿ.ಎಸ್. ಮಂಜುನಾಥ್, ಗ್ರಾಪಂ ಸದಸ್ಯರಾದ ಎ.ಪಿ.ನಂಜೇಶ್, ಕಡಹೆಮ್ಮಿಗೆ ರಮೇಶ್, ಭಾಗ್ಯಮ್ಮ ಶಿಶುಪಾಲ್, ಎಲ್.ಪಿ.ಮಹಾಲಕ್ಷಿ ವಿಶ್ವನಾಥ್, ಬಿ.ಎನ್. ಯೋಗೇಶ್, ಪಿ.ಪ್ರಕಾಶ, ಸಿ.ಆರ್.ಗಂಗಾಧರ್, ಮಂಜಶೆಟ್ಟಿ, ಮಂಜೇಗೌಡ, ವೈ.ಎಲ್‌ರುಕ್ಮಿಣಿ ನಾರಾಯಣ್, ನಾಗಮ್ಮ ಮಂಜೇಗೌಡ, ಲಕ್ಷ್ಮೀ ರಮೇಶಬಾಬು, ರಂಜಿತಾ ಸುರೇಶ್‌ಇದ್ದರು.ಮಕ್ಕಳ ದಿನಾಚರಣೆ: 6 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ವಿವಿಧ ಸ್ಪರ್ಧೆಮಂಡ್ಯ:2024-25ನೇ ಸಾಲಿನ ಮಕ್ಕಳ ದಿನಾಚರಣೆ ಪ್ರಯುಕ್ತ 06 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ನ.9 ರಂದು ಬೆಳಗ್ಗೆ 10 ಗಂಟೆಗೆ ಮಂಡ್ಯ ಜಿಲ್ಲಾ ಬಾಲಾಭವನದಲ್ಲಿ ಸೃಜನಾತ್ಮಕ ಪ್ರದರ್ಶನ ಕಲೆ, ವಾದ್ಯ ಸಂಗೀತ, ವಿಜ್ಞಾನದಲ್ಲಿ ನೂತನ ಆವಿಷ್ಕಾರ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸುವುದರ ಜೊತೆಗೆ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಕರೆದೊಯ್ಯಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ:- 9036801065 ಅನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸಿ.ರಾಜಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.