ಧನ್ನೂರ ಪೊಲೀಸರಿಂದ ಮೂವರು ಬೈಕ್ ಕಳ್ಳರ ಬಂಧನ

| Published : Aug 19 2024, 12:53 AM IST / Updated: Aug 19 2024, 12:54 AM IST

ಸಾರಾಂಶ

ಭಾಲ್ಕಿ ತಾಲೂಕಿನ ಧನ್ನೂರ (ಹೆಚ್) ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳರನ್ನು ಬಂಧಿಸಿ, ಕಳ್ಳರಿಂದ ವಶಪಡಿಸಿಕೊಂಡ ಬೈಕ್‌ಗಳೊಂದಿಗೆ ಪೊಲೀಸ್ ಅಧಿಕಾರಿಗಳು.

ಕನ್ನಡಪ್ರಭ ವಾರ್ತ ಭಾಲ್ಕಿ

ನೆರೆಯ ಮಹಾರಾಷ್ಟ್ರ ರಾಜ್ಯದ ಶಾಹಜಾನಿ ಔರಾದ್ ಪಟ್ಟಣದಲ್ಲಿ 4 ಹಾಗೂ ಬೀದರ್ ಜಿಲ್ಲೆಯ ವಿವಿಧೆಡೆ 11 ಮೋಟರ್ ಸೈಕಲ್‌ಗಳನ್ನು ಕಳವು ಮಾಡಿರುವ ಮೂವರು ಕಳ್ಳರನ್ನು ಧನ್ನೂರ ಪೊಲೀಸು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಧನ್ನೂರ(ಎಚ್) ಪೊಲೀಸ ಠಾಣೆಯ ಪಿಎಸ್‌ಐ ವಿಶ್ವಾರಾಧ್ಯ ನೇತೃತ್ವದಲ್ಲಿ ಧನ್ನುರ(ಎಚ್) ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಿತುಗಾಂವ ಗ್ರಾಮದಲ್ಲಿ ಕಳೆದ ಎಪ್ರಿಲ್‌ನಲ್ಲಿ ಮನೆಯ ಮುಂದೆ ನಿಲ್ಲಿಸಿದ ಮೋಟಾರ್ ಸೈಕಲ್ ಕಳವು ಮಾಡಿರುವ ಬಗ್ಗೆ ಕಟಿತುಗಾಂವ ಗ್ರಾಮದ ಸಂತೋಷ ಮಹಾಂತಪ್ಪ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಯಿತು. ತನಿಖೆಯ ನಂತರ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಳವು ಮಾಡಿದ ಮೋಟಾರ್ ಬೈಕ್‌ಗಳನ್ನು ಆರೋಪಿಗಳು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಬಂಧಿತ ಅರೋಪಿಗಳು ಭಾಲ್ಕಿಯ ಲೆಕ್ಚರರ್ ಕಾಲೋನಿ ಹಾಗೂ ಔರಾದ್ ತಾಲೂಕಿನ ಡೋಣಗಾಪೂರ ಮತ್ತು ಬಳತ(ಬಿ) ಗ್ರಾಮದವರಾಗಿದ್ದಾರೆ.

ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಧನ್ನೂರ(ಎಚ್) ಪೊಲೀಸ್ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಇನ್ನು ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಅವರ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡ: ಪಿಎಸ್‌ಐ ವಿಶ್ವಾರಾಧ್ಯ, ವಿರಶೆಟ್ಟಿ ಪಾಟೀಲ, ಎಎಸ್‌ಐ ವಿಠಲರಾವ, ಸಿಎಚ್‌ಸಿ ಉಮಾಕಾಂತ ದಾನಾ, ನಾಗಪ್ಪ, ಬಕ್ಕಯ್ಯಾ, ಭಗವಾನ, ಸಂಜೀವ ಸಿರ್ಸೆ, ಸಿಪಿಸಿ ಹರ್ಷವರ್ಧನ, ನಾಗರಾಜ, ಸಿದ್ದಲಿಂಗಪ್ಪ, ಪ್ರಶಾಂತ ರೆಡ್ಡಿ, ರಿವಕುಮಾರ, ನಾಗರಾಜ, ಗುರುರಾಜ, ಬಸಪ್ಪ, ಮಹಾದೇವ. ಎಪಿಸಿ ಜಗದೀಶ ಮಾನಶೆಟ್ಟಿ, ತಾನಾಜಿ ತಂಡ ಯಶಸ್ವಿಯಾಗಿದೆ.

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣನವರ, ಚಂದ್ರಕಾಂತ ಪೂಜಾರಿ ಹಾಗೂ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ಶ್ಲಾಘಿಸಿದ್ದಾರೆ.