ಸಾರಾಂಶ
ತುರುವೇಕೆರೆತಾಲೂಕು ಒಕ್ಕಲಿಗರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ವಕೀಲ ಪಿ.ಎಚ್.ಧನಪಾಲ್ ನೇತೃತ್ದದ ತಂಡ ಭರ್ಜರಿ ಜಯ ಗಳಿಸಿದೆ
ಕನ್ನಡಪ್ರಭವಾರ್ತೆ ತುರುವೇಕೆರೆ
ತಾಲೂಕು ಒಕ್ಕಲಿಗರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ವಕೀಲ ಪಿ.ಎಚ್.ಧನಪಾಲ್ ನೇತೃತ್ದದ ತಂಡ ಭರ್ಜರಿ ಜಯ ಗಳಿಸಿದೆ. ೧೫ ಸ್ಥಾನಗಳ ಪೈಕಿ ೧೩ ಸ್ಥಾನವನ್ನು ಗೆಲ್ಲುವ ಮೂಲಕ ನಿಚ್ಚಳ ಬಹುಮತವನ್ನು ಸಂಪಾದಿಸಿದೆ. ತಾಲೂಕು ಒಕ್ಕಲಿಗರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಜೈ ಶ್ರೀ ಗುರುದೇವ್ ತಂಡದಿಂದ ಸ್ಪರ್ಧಿಸಿದ್ದ ವಕೀಲ ಪಿ.ಎಚ್.ಧನಪಾಲ್ ನವರ ನೇತೃತ್ವದ ವಿಜಯೇಂದ್ರಕುಮಾರ್-೧೧೪೮, ತ್ಯಾಗರಾಜು-೧೦೧೬, ಎನ್.ಆರ್.ಸುರೇಶ್-೯೩೭, ಹೆಚ್.ಆರ್.ರಾಮೇಗೌಡ-೯೩೧, ವಕೀಲ ಟಿ.ಎನ್.ಧನಪಾಲ್-೮೯೧, ಟಿ.ಎನ್.ಮಂಜಣ್ಣ-೮೮೨, ಎ.ಬಿ.ಜಗದೀಶ್-೮೬೯, ಲಕ್ಷ್ಮಿಕಾಂತರಾಜು-೮೪೬, ಶ್ರೀನಿವಾಸಗೌಡ-೮೪೩, ಎಂ.ಕೆ.ಗಿರೀಶ್-೭೯೯, ಮಾಯಣ್ಣಗೌಡ-೭೮೭, ಬಿ.ಗಂಗಣ್ಣ-೭೬೦, ಚೂಡಾರತ್ನ-೭೯೬, ಮತಗಳನ್ನು ಪಡೆದು ಆಡಳಿತ ಮಂಡಳಿಗೆ ಚುನಾಯಿತರಾಗಿದ್ದರೆ, ನಾಡಪ್ರಭು ಶ್ರೀ ಕೆಂಪೇಗೌಡರ ಹೋರಾಟಗಾರರ ವೇದಿಕೆಯಿಂದ ಸ್ಪರ್ಧಿಸಿದ್ದ ರಂಗಸ್ವಾಮಿ-೭೨೩, ಶೃತಿ.ಕೆ.ಬಿ-೭೦೪ ಮತಗಳನ್ನು ಪಡೆದು ಜಯಶೀಲರಾಗಿದ್ದಾರೆಂದು ಸಂಘದ ಚುನಾವಣಾಧಿಕಾರಿ ಎಲ್.ಮಂಜಯ್ಯಗೌಡ ತಿಳಿಸಿದ್ದಾರೆ. ಸತತ ೩೫ ವರ್ಷಗಳಿಂದ ಅವಿರೋಧ ಆಯ್ಕೆಯಾಗುತ್ತಿತ್ತು. ಸಂಘಕ್ಕೆ ಇದೇ ಮೊದಲ ಬಾರಿಗೆ ಚುನಾವಣೆ ನಡೆಯಿತು. ೧೮೯೦ ಸದಸ್ಯರಿಂದ ಕೂಡಿದ್ದ ಸಂಘದ ಚುನಾವಣೆಗೆ ೩೫ ಆಕಾಂಕ್ಷಿಗಳು ಸ್ಪರ್ಧೆ ಮಾಡಿದ್ದರು. ೧೩ ಪುರುಷ ಹಾಗೂ ೨ ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಬೇಕಿತ್ತು. ಭಾನುವಾರ ಬೆಳಿಗ್ಗೆ ೮ ರಿಂದ ಸಂಜೆ ೪ ಗಂಟೆವರೆಗೆ ಮತದಾನ ನಡೆದು ತಡರಾತ್ರಿವರೆಗೆ ಎಣಿಕೆ ಕಾರ್ಯ ನಡೆಯಿತು. ವಕೀಲ ಟಿ.ಎನ್.ಧನಪಾಲ್ ನೇತೃತ್ವದ ತಂಡ ೧೩ ಸ್ಥಾನ ಜಯಗಳಿಸಿದರೆ, ಕೆಂಪೇಗೌಡ ವೇದಿಕೆಯಿಂದ ಇಬ್ಬರು ಆಯ್ಕೆಯಾದರು. ಚುನಾವಣೆ ಶಾಂತ ರೀತಿಯಲ್ಲಿ ನಡೆಸಲು ಸಹಕರಿಸಿದ ಎಲ್ಲರಿಗೆ ಚುನಾವಣಾಧಿಕಾರಿ ಎಲ್.ಮಂಜಯ್ಯಗೌಡ ಕೃತಜ್ಞತೆ ಸಲ್ಲಿಸಿದ್ದಾರೆ. ಸಂಘದಲ್ಲಿ ೧೮೯೦ ಸದಸ್ಯರಲ್ಲಿ ೧೫೬೫ ಸದಸ್ಯರು ಮತ ಚಲಾಯಿಸಿದ್ದರು. ೧೨ ಮತಗಳು ತಿರಸ್ಕೃತವಾದವು. ಭರವಸೆ : ತಾವು ಈ ಹಿಂದೆ ಚುನಾವಣೆಗೆ ಸ್ಪರ್ಧಿಸುವ ವೇಳೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಕಳೆದ ೩೫ ವರ್ಷಗಳಿಂದ ಚುನಾವಣೆ ನಡೆದಿರಲಿಲ್ಲ. ಹಾಗಾಗಿ ಸಮುದಾಯದಲ್ಲಿ ಸಂಘಕ್ಕೆ ಸದಸ್ಯತ್ವ ಪಡೆಯಬೇಕೆಂಬ ಉತ್ಸಾಹ ಇರಲಿಲ್ಲ. ಆದರೆ ಈ ಬಾರಿ ಪ್ರಪ್ರಥಮವಾಗಿ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದ ಯುವಕರಲ್ಲಿ ತಾವೂ ಸಹ ಸಂಘಕ್ಕೆ ಸದಸ್ಯರಾಗಬೇಕು ಎಂಬ ಹಂಬಲವಿದೆ. ಆದ್ದರಿಂದ ಪ್ರಥಮ ಆದ್ಯತೆಯಾಗಿ ಸದಸ್ಯತ್ವ ಆಂದೋಲನಕ್ಕೆ ಚಾಲನೆ ನೀಡಲಾಗುವುದು. ಉತ್ಸಾಹವನ್ನು ಗಮನಿಸಿ ಮತ್ತಷ್ಟು ದಿನಗಳ ಕಾಲ ಗಡುವನ್ನು ವಿಸ್ತರಿಸಿ ಸದಸ್ಯತ್ವವನ್ನು ಹೆಚ್ಚು ಮಾಡುವುದಾಗಿ ಪಿ.ಹೆಚ್.ಧನಪಾಲ್ ಹೇಳಿದ ಅವರು, ತಮ್ಮ ತಂಡದ ಬಗ್ಗೆ ಆತ್ಮವಿಶ್ವಾಸವಿಟ್ಟು ಗೆಲುವು ತಂದುಕೊಟ್ಟ ಎಲ್ಲಾ ಮತದಾರರಿಗೆ ನೂತನ ಪದಾದಿಕಾರಿಗಳು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ನೂತನ ಸದಸ್ಯರಾದ ಎಂ.ಕೆ.ಗಿರೀಶ್, ಹೆಚ್.ಎಸ್.ಚೂಡಾರತ್ನ, ಎ.ಬಿ.ಜಗದೀಶ್, ಬಿ.ಎಸ್.ತ್ಯಾಗರಾಜ್, ಎಂ.ಡಿ.ಮಾಯಣ್ಣಗೌಡ, ಟಿ.ಎಂ.ಮಂಜಣ್ಣ, ಹೆಚ್.ಆರ್.ರಾಮೇಗೌಡ, ಎಂ.ಪಿ.ಲಕ್ಷ್ಮೀಕಾತರಾಜು, ಆರ್.ವಿಜಯೇಂದ್ರ ಕುಮಾರ್, ಡಿ.ಟಿ.ಶ್ರೀನಿವಾಸ್, ಎನ್.ಆರ್.ಸುರೇಶ್, ಮುಖಂಡರಾದ ಶಿವಣ್ಣ ನವರು ಉಪಸ್ಥಿತರಿದ್ದರು.