ಧರ್ಮಸ್ಥಳ ಮಂಜುನಾಥನ ಶಾಪದಿಂದ ಸರ್ಕಾರ ಸರ್ವನಾಶ

| Published : Aug 16 2025, 12:00 AM IST

ಧರ್ಮಸ್ಥಳ ಮಂಜುನಾಥನ ಶಾಪದಿಂದ ಸರ್ಕಾರ ಸರ್ವನಾಶ
Share this Article
  • FB
  • TW
  • Linkdin
  • Email

ಸಾರಾಂಶ

ಮಂಜುನಾಥನ ಶಾಪದಿಂದ ಸರ್ಕಾರ ಸರ್ವನಾಶ ಆಗುವುದರಲ್ಲಿ ಅನುಮಾನವಿಲ್ಲ. ನೂರಕ್ಕೆ ನೂರು ಮಂಜುನಾಥನ ಶಾಪದಿಂದ ಸರ್ವನಾಶ ಆಗುತ್ತಾರೆ. ಯುಟ್ಯೂಬರ್‌ ಸಮೀರ್ ಜತೆ ಕೆಲವರು ಸೇರಿ ಗೊಂದಲ ಸೃಷ್ಟಿಸಿದ್ದಾರೆ.

ಕೊಪ್ಪಳ:

ಧರ್ಮಸ್ಥಳ ಮಂಜುನಾಥ ಸ್ವಾಮಿ ಶಾಪದಿಂದ ಸರ್ಕಾರ ಸರ್ವನಾಶ ಆಗಲಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಭವಿಷ್ಯ ನುಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಜುನಾಥನ ಶಾಪದಿಂದ ಸರ್ಕಾರ ಸರ್ವನಾಶ ಆಗುವುದರಲ್ಲಿ ಅನುಮಾನವಿಲ್ಲ. ನೂರಕ್ಕೆ ನೂರು ಮಂಜುನಾಥನ ಶಾಪದಿಂದ ಸರ್ವನಾಶ ಆಗುತ್ತಾರೆ. ಯುಟ್ಯೂಬರ್‌ ಸಮೀರ್ ಜತೆ ಕೆಲವರು ಸೇರಿ ಗೊಂದಲ ಸೃಷ್ಟಿಸಿದ್ದಾರೆ. ಮುಸುಕುಧಾರಿ ಎನ್ನುವ ಹೊಸ ನಾಟಕ ಶುರು ಮಾಡಿದ್ದಾರೆ. ಬಾಹುಬಲಿ ತಪ್ಪಲಿಗೆ ಕೈ ಹಾಕಿರೋ ಕಾರಣ ಸರ್ಕಾರ ಸರ್ವನಾಶ ಆಗಲಿದೆ ಎಂದು ಹೇಳಿದರು.

ಮಂಜುನಾಥ ಸ್ವಾಮಿಯ ಮೇಲೆ ಆಣೆ ಮಾಡಲು ಭಯ ಪಡುತ್ತಾರೆ ಎಂದು ಕಿಡಿಕಾರಿದ ಅವರು, ಹಿಂದೂ ದೇವಾಲಯದ ಮೇಲೆ ಗೂಬೆ ಕೂರಿಸಲು ಧರ್ಮಸ್ಥಳಕ್ಕೆ ಕೈ ಹಾಕಿದ್ದಾರೆ. ಅವರಿಗೆಲ್ಲ ಮಂಜುನಾಥನ ಶಾಪ ತಟ್ಟುತ್ತದೆ ಎಂದಿದ್ದಾರೆ.

ಗೃಹ ಸಚಿವರು ಅಪವಾದ ತಪ್ಪಿಸಲು ಎಸ್‌ಐಟಿ ರಚಿಸಿದ್ದೇವೆ ಎಂದು ಹೇಳುತ್ತಾರೆ. ಇದು ಅರ್ಥಹೀನ ಹೇಳಿಕೆ. ಈಗಲೂ ಕೈಮೀರಿಲ್ಲ ಎಸ್‌ಐಟಿ ತನಿಖೆ ಸ್ಥಗಿತಗೊಳಿಸಿ ಸರ್ಕಾರ ಮಂಜುನಾಥನ ಸನ್ನಿಧಿಗೆ ಹೋಗಿ ಸಾಷ್ಟಾಂಗ ನಮಸ್ಕಾರ ಮಾಡಿ, ನಾವು ತಪ್ಪೆಸಗಿದ್ದೇವೆ ಎಂದರೆ ರಾಜ್ಯಕ್ಕೆ ಒಳ್ಳೆಯದು ಆಗುತ್ತದೆ. ಇಲ್ಲದಿದ್ದರೆ ಸರ್ಕಾರಕ್ಕೆ ಶಾಪ ತಟ್ಟದೆ ಬಿಡುವುದಿಲ್ಲ ಎಂದರು.

ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೆ ದೈವದ ಮೇಲೆ ಅಪಾರ ನಂಬಿಕೆ ಇದೆ. ಹಿಂದೂ ಧರ್ಮದ ಆಚರಣೆ ಮೇಲೂ ನಂಬಿಕೆ ಇದೆ. ಇದೀಗ ಧರ್ಮಸ್ಥಳ ವಿಷಯದಲ್ಲಿ ಅವರ ಸರ್ಕಾರ ನಡೆದುಕೊಂಡಿರುವ ರೀತಿ ಅರಿವಾಗಿದೆ ಎಂದಿದ್ದಾರೆ.