ಸಾರಾಂಶ
ಹೊಸಕೋಟೆ: ಧಾರ್ಮಿಕ ಕೇಂದ್ರಗಳ ಉಳಿವಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆದ್ಯತೆ ಮೇರೆಗೆ ಆರ್ಥಿಕ ನೆರವು ನೀಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಭೋಜಾ ತಿಳಿಸಿದರು.
ಹೊಸಕೋಟೆ: ಧಾರ್ಮಿಕ ಕೇಂದ್ರಗಳ ಉಳಿವಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆದ್ಯತೆ ಮೇರೆಗೆ ಆರ್ಥಿಕ ನೆರವು ನೀಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಭೋಜಾ ತಿಳಿಸಿದರು.
ಚೋಳಪ್ಪನಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಬರಿ ಮಲೈ ಅಯ್ಯಪ್ಪಸ್ವಾಮಿ ದೇವಾಲಯ ಕಾಮಗಾರಿಗೆ ೨ ಲಕ್ಷ ಮೊತ್ತದ ಚೆಕ್ ವಿತರಿಸಿ ಮಾತನಾಡಿದ ಅವರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ವಿಶೇಷವಾಗಿ ಮಹಿಳಾ ಸ್ವಾವಲಂಬನೆ, ಸ್ವಚ್ಚ ಗ್ರಾಮ, ನಮ್ಮ ಊರು ನಮ್ಮ ಕೆರೆ, ಪರಿಸರ ಸಂರಕ್ಷಣೆ, ಶೈಕ್ಷಣಿಕ, ಸ್ವ ಉದ್ಯೋಗ ವ್ಯಾಪಾರ, ಗುಡಿ ಕೈಗಾರಿಕೆ, ವಿಧವಾ ವೇತನ, ವಿಶೇಷ ಚೇತನರ ಸಬಲೀಕರಣ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆಂದು ಹೇಳಿದರು.ಗ್ರಾಪಂ ಮಾಜಿ ಅಧ್ಯಕ್ಷ ರವಿ ಮಾತನಾಡಿ, 30 ವರ್ಷಗಳಿಂದ ಚೋಳಪ್ಪನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಅಯ್ಯಪ್ಪ ಮಾಲಾಧಾರಿಗಳು ವ್ರತ ಮಾಡಲು ಸ್ಥಳದ ಸಮಸ್ಯೆಯಿದ್ದು ಗ್ರಾಮಸ್ಥರ ಸಹಕಾರದಿಂದ ದೇವಾಲಯ ನಿರ್ಮಾಣಕ್ಕೆ ಸ್ಥಳ ನೀಡಿದ್ದು 60 ಲಕ್ಷ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಇಂದು ಧರ್ಮಸ್ಥಳ ಸಂಸ್ಥೆಯಿಂದ 2 ಲಕ್ಷ ಸಹಾಯಧನ ದೊರೆತಿದ್ದು ದಾನಿಗಳು ನೆರವು ನೀಡಬಹುದು ಎಂದು ಹೇಳಿದರು.
ಈ ಸಂಧರ್ಭದಲ್ಲಿ ವಲಯ ಮೇಲ್ವಿಚಾರಕರಾದ ಚಂದನ್, ಗ್ರಾಮಸ್ಥರು ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಇತರರಿದ್ದರು.ಪೋಟೋ : 24 ಹೆಚ್‌ಎಸ್‌ಕೆ 1ಹೊಸಕೋಟೆ ತಾಲೂಕಿನ ಚೋಳಪ್ಪನಹಳ್ಳಿಯಲ್ಲಿ ಅಯ್ಯಪ್ಪಸ್ವಾಮಿ ದೇವಾಲಯ ನಿರ್ಮಾಣಕ್ಕೆ 2 ಲಕ್ಷ ಮೊತ್ತದ ಚೆಕ್‌ನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಭೋಜಾ ವಿತರಿಸಿದರು.