ಸಮಾಜಕ್ಕೆ ಧರ್ಮಸ್ಥಳ ಸಂಸ್ಥೆಯ ಕೊಡುಗೆ ಅಪಾರ: ಬಾಪುಗೌಡ ತಿಮ್ಮನಗೌಡ್ರ

| Published : Jan 10 2024, 01:45 AM IST / Updated: Jan 10 2024, 02:44 PM IST

ಸಮಾಜಕ್ಕೆ ಧರ್ಮಸ್ಥಳ ಸಂಸ್ಥೆಯ ಕೊಡುಗೆ ಅಪಾರ: ಬಾಪುಗೌಡ ತಿಮ್ಮನಗೌಡ್ರ
Share this Article
  • FB
  • TW
  • Linkdin
  • Email

ಸಾರಾಂಶ

ನಾಡಿನಲ್ಲಿ ಧರ್ಮಸ್ಥಳ ಸಂಸ್ಥೆಯು ಜಾತಿ ಭೇದ ಮಾಡದೇ ಎಲ್ಲಾ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದು, ಈ ಸಮಾಜಕ್ಕೆ ಸಂಸ್ಥೆಯ ಕೂಡುಗೆ ಅಪಾರ ಎಂದು ಆಧ್ಯಾತ್ಮಿಕ ಚಿಂತಕ ಬಾಪುಗೌಡ ತಿಮ್ಮನಗೌಡ್ರ ಹೇಳಿದರು.

ನರಗುಂದ: ನಾಡಿನಲ್ಲಿ ಧರ್ಮಸ್ಥಳ ಸಂಸ್ಥೆಯು ಜಾತಿ ಭೇದ ಮಾಡದೇ ಎಲ್ಲಾ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದು, ಈ ಸಮಾಜಕ್ಕೆ ಸಂಸ್ಥೆಯ ಕೂಡುಗೆ ಅಪಾರ ಎಂದು ಆಧ್ಯಾತ್ಮಿಕ ಚಿಂತಕ ಬಾಪುಗೌಡ ತಿಮ್ಮನಗೌಡ್ರ ಹೇಳಿದರು.

ಅವರು ತಾಲೂಕಿನ ಶಿರೋಳ ಗ್ರಾಮದಲ್ಲಿ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಒಂದು ಸರ್ಕಾರ ಮಾಡುವ ಕಾರ್ಯಗಳನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ. ಅವುಗಳ ಸದುಪಯೋಗ ಪಡೆದುಕೊಳ್ಳಿಬೇಕು ಎಂದರು.

ಸಾನಿಧ್ಯ ವಹಿಸಿದ ಗವಿಮಠದ ಜ.ಅಭಿನವ ಯಚ್ಚರ ಶ್ರೀಗಳು ಮಾತನಾಡಿ,ಪರಮಪೂಜ್ಯ ಖಾವಂದರು ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು ಸಮಾಜಮುಖಿ ಯೋಜನೆಗಳನ್ನು ಸಮಾಜಕ್ಕೆ ಒದಗಿಸುತ್ತಿದ್ದಾರೆ. 

ಯೋಜನೆಯ ಸಕಲ ಕಾರ್ಯಕ್ರಮಗಳನ್ನು ಜನತೆಗೆ ಅನುಕೂಲವಾಗುತ್ತಿದೆ ಎಂದರು.ಈ ವೇಳೆ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿದರು. 

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಯೋಗೀಶ.ಎ ಅವರು ಒಕ್ಕೂಟ ಪದಗ್ರಹಣ ನೆರವೇರಿಸಿ ನೂತನ ಒಕ್ಕೂಟ ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಹನುಮವ್ವ ಹಿರೇಮನಿ, ಪ್ರಕಾಶಗೌಡ ತೀರಕನಗೌಡ್ರ, ತಾಲೂಕಿನ ಯೋಜನಾಧಿಕಾರಿ ಜಗದೀಶ ಬಂಡಾರಿ ಸೇರಿದಂತೆ ಇತರರು ಇದ್ದರು.