ಸಾರಾಂಶ
ನರಸಿಂಹಾಜಪುರ, ಧರ್ಮಸ್ಥಳದಿಂದ ರಾಜ್ಯಾದ್ಯಂತ 11 ಸಾವಿರ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಧನ ಸಹಾಯ ಮಾಡಲಾಗಿದೆ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕೊಪ್ಪ, ಎನ್.ಆರ್.ಪುರ ತಾಲೂಕಿನ ಯೋಜನಾಧಿಕಾರಿ ನಿರಂಜನ್ ಹೇಳಿದರು.
ಕಣಿಗೆರೆ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ 50 ಸಾವಿರ ರುಪಾಯಿ ಸಹಾಯ ಧನದ ಚೆಕ್ ವಿತರಣೆ
ಕನ್ನಡಪ್ರಭ ವಾರ್ತೆ, ನರಸಿಂಹಾಜಪುರಧರ್ಮಸ್ಥಳದಿಂದ ರಾಜ್ಯಾದ್ಯಂತ 11 ಸಾವಿರ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಧನ ಸಹಾಯ ಮಾಡಲಾಗಿದೆ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕೊಪ್ಪ, ಎನ್.ಆರ್.ಪುರ ತಾಲೂಕಿನ ಯೋಜನಾಧಿಕಾರಿ ನಿರಂಜನ್ ಹೇಳಿದರು.
ಗುರುವಾರ ತಾಲೂಕಿನ ಶೆಟ್ಟಿಕೊಪ್ಪ ವಲಯದ ಕಳ್ಳಿಕೊಪ್ಪ ಕಾರ್ಯಕ್ಷೇತ್ರದ ಬಡಗಬೈಲು ಗ್ರಾಮದ ಕಣಿಗೆರೆ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಧರ್ಮಸ್ಥಳ ಡಾ.ವೀರೇಂದ್ರ ಹೆಗ್ಡೆಯವರು ನೀಡಿದ ₹50 ಸಾವಿರ ಸಹಾಯ ಧನದ ಚೆಕ್ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇವಲ ಸಾಲ ನೀಡಿ, ವಸೂಲಿ ಮಾಡುವುದಕ್ಕೆ ಮಾತ್ರ ಮೀಸಲಾಗಿಲ್ಲ. ಅದಕ್ಕೂ ಮೀರಿ ಸಮಾಜ ಸೇವೆಯಲ್ಲೂ ಮುಂಚೂಣಿಯಲ್ಲಿದೆ. ಗ್ರಾಮಗಳಲ್ಲಿರುವ ಪುರಾತನ ಹಾಗೂ ಶಿಥಿಲಾವಸ್ಥೆ ತಲುಪಿದ ದೇವಾಲಯಗಳ ಜೀರ್ಣೋದ್ಧಾರಕ್ಕೂ ಸಹಾಯ ನೀಡುತ್ತಾ ಹಿಂದೂ ದೇವಾಲಯಗಳ ಅಭಿವೃದ್ಧಿ ಕಾರ್ಯವನ್ನು ಶ್ರೀ ಕ್ಷೇತ್ರ ಮಾಡುತ್ತಿದೆ ಎಂದರು.ಮೆಣಸೂರು ಗ್ರಾಪಂ ಸದಸ್ಯ ಡಿ.ಆರ್.ಶ್ರೀನಾಥ್ ಮಾತನಾಡಿ, ದೇವಸ್ಥಾನ ಸಮಿತಿ ಮನವಿಗೆ ಡಾ.ವೀರೇಂದ್ರ ಹೆಗ್ಡೆಯವರು ಸ್ಪಂದಿಸಿ ಸಣ್ಣ ಗ್ರಾಮದ ದೇವಸ್ಥಾನಕ್ಕೂ ಸಹಾಯ ಧನ ನೀಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಗಳು ಸಮಾಜಕ್ಕೆ ನೀಡುವ ವಿಶೇಷ ಕೊಡುಗೆಗಳನ್ನು ಜನರು ಎಂದಿಗೂ ಮರೆಯುವಂತಿಲ್ಲ. ನಮ್ಮ ಈ ಸಣ್ಣ ಊರಿನ ದೇವಸ್ಥಾನ ಕಾರ್ಯಕ್ಕೆ, ಪೂಜ್ಯರು ಮಂಜೂರು ಮಾಡಿದ ಸಹಾಯಧನಕ್ಕೆ ದೇವಸ್ಥಾನ ಸಮಿತಿಯವರು ಊರಿನ ಗ್ರಾಮಸ್ಥರು ಚಿರ ಋಣಿಯಾಗಿದ್ದಾರೆ. ಸಮಾಜಕ್ಕೆ ಧ.ಗ್ರಾ.ಯೋಜನೆಯಿಂದ ಇನ್ನೂ ಹೆಚ್ಚಿನ ಉತ್ತಮ ಕೆಲಸ ಮಾಡುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ಅರುಣಕುಮಾರ್, ಮಾಜಿ ಅಧ್ಯಕ್ಷ ಎಲ್ದೋ, ಮೇಲ್ವಿಚಾರಕ ಸತೀಶ್, ಶ್ರೀ ರಂಗನಾಥೇಶ್ವರ ದೇವಸ್ಥಾನದ ಸಮಿತಿಯ ಉಪಾಧ್ಯಕ್ಷ ಎನ್.ಆರ್.ನಾಗರಾಜ್, ಕಾರ್ಯದರ್ಶಿ ಕೆ.ಆರ್.ಮಂಜುನಾಥ, ಖಜಾಂಚಿ ಕೆ.ಎಸ್.ಚಂದ್ರಶೇಖರ್, ಸದಸ್ಯರಾದ ಚೇತನ್, ಕುಮಾರನಾಯಕ್,ಸಿ.ಪಿ.ಮಂಜುನಾಥ್,ಪುರುಷೋತ್ತಮ, ವೆಂಕಟೇಶ್,ಸಂತೋಷ್,ಸಂಜಯ್, ಅಳಲಗೆರೆರಮೇಶ್, ಸೀತಮ್ಮ, ಸುಕುಮಾರ್, ಸೇವಾ ಪ್ರತಿನಿಧಿಗಳು ಇದ್ದರು.