ಸಾರಾಂಶ
ಸರ್ಕಾರಗಳು ಜಾರಿಗೆ ತರುವ ಎಷ್ಟೋ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಫಲಾನುಭವಿಗಳನ್ನು ತಲುಪುವುದು ಕಷ್ಟ. ಆದರೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆಯವರ ನಿರ್ದೆಶನದ ಗ್ರಾಮಾಭಿವೃದ್ಧಿಯ ಜನಪರ ಯೋಜನೆಗಳು ಯಥಾವತ್ತಾಗಿ ಜಾರಿಗೆ ಬರುತ್ತಿರುವುದು ಪ್ರಶಂಸನೀಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿ: ಸರ್ಕಾರಗಳು ಜಾರಿಗೆ ತರುವ ಎಷ್ಟೋ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಫಲಾನುಭವಿಗಳನ್ನು ತಲುಪುವುದು ಕಷ್ಟ. ಆದರೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆಯವರ ನಿರ್ದೆಶನದ ಗ್ರಾಮಾಭಿವೃದ್ಧಿಯ ಜನಪರ ಯೋಜನೆಗಳು ಯಥಾವತ್ತಾಗಿ ಜಾರಿಗೆ ಬರುತ್ತಿರುವುದು ಪ್ರಶಂಸನೀಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕಿನ ರಂಜದಕಟ್ಟೆಯಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನೆಯ ನೂತನ ಒಕ್ಕೂಟ ಪದಗ್ರಹಣ ಮತ್ತು ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಸಾಮಾಜಿಕ, ಕೃಷಿ, ಪರಿಸರ, ಆರ್ಥಿಕ ನಿರ್ವಹಣೆಯ ಮೂಲಕ ಪ್ರಜ್ಞಾವಂತಿಕೆಯನ್ನು ಮೂಡಿಸಲು ಕಾರಣವಾಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನೆಗಳು ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ರಾಷ್ಟ್ರ ಮಟ್ಟಕ್ಕೂ ವಿಸ್ತಾರಗೊಳ್ಳಬೇಕಿದೆ ಎಂದರು.
ಯೋಜನೆಯ ಜಿಲ್ಲಾ ನಿರ್ದೆಶಕರಾದ ಮುರುಳಿಧರ ಶೆಟ್ಟಿ ಮಾತನಾಡಿ, ಗ್ರಾಮಾಭಿವೃದ್ಧಿಯ ಯೋಜನೆ ಕೇವಲ ಸಾಲ ಕೊಡುವ ಯೋಜನೆಯಲ್ಲಾ. ಆರ್ಥಿಕ ವ್ಯವಸ್ಥೆ ಸುಧಾರಣೆ, ನಿರ್ಗತಿಕರಿಗೆ ಮಾಶಾಸನ, ಧಾರ್ಮಿಕ ಕೇಂದ್ರಗಳು ಮತ್ತು ಸಮುದಾಯ ಅಭಿವೃದ್ಧಿ, ರುದ್ರಭೂಮಿ ಹಾಗೂ ಡೈರಿಗಳಿಗೆ ಅನುದಾನ, ಸುಜ್ಞಾನನಿಧಿ ಶಿಷ್ಯವೇತನ ಸೇರಿದಂತೆ ಮುಂತಾದ ಸಮಾಜಮುಖಿ ಕಾರ್ಯಗಳನ್ನೂ ಹೊಂದಿದೆ ಎಂದರು.
ವೇದಿಕೆಯಲ್ಲಿ ಡಾ.ಜೀವಂಧರ ಜೈನ್, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ಮುಳುಬಾಗಿಲು ಗ್ರಾಪಂ ಮಾಜಿ ಅಧ್ಯಕ್ಷ ಮೋಹನ್, ಯೋಜನಾಧಿಕಾರಿ ಮಾಲತಿ ದಿನೇಶ್, ಶ್ರೀಧರ್, ರೇಖಾ ದಿನೇಶ್ ಇದ್ದರು.