ದಾರಿ ಸಮಸ್ಯೆ ಪರಿಹಾರಕ್ಕಾಗಿ ಧರಣಿ

| Published : Jun 26 2024, 12:41 AM IST

ಸಾರಾಂಶ

ತಾಲೂಕಿನ ಗೊಟಗುಣಕಿ ಗ್ರಾಮದ ಸರ್ವೆ ನಂಬರ್ ೫೫/೧, ೫೫/೨ ಈ ಜಮೀನಿಗೆ ಹೋಗಲು ದಾರಿ ಬಂದ್ ಮಾಡಿದ್ದರಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದ್ದು, ದಾರಿ ಮದ್ಯದಲ್ಲಿ ಮಣ್ಣಿನ ದಿಬ್ಬು ಹಾಕಿದ್ದಾರೆ. ಕೂಡಲೇ ತೆರವುಗೊಳಿಸಿ ದಾರಿ ಮಾಡಿ ಕೊಡಬೇಕೆಂದು ಆಗ್ರಹಿಸಿ ಗೊಟಗುಣಕಿ ಗ್ರಾಮದ ಸಾಹೇಬಗೌಡ ಬಿರಾದಾರ ಕುಟುಂಬಸ್ಥರು ಮಂಗಳವಾರ ತಹಸೀಲ್ದಾರ್ ಕಚೇರಿ ಎದುರು ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಆದರೆ, ಸ್ಥಳಕ್ಕೆ ತಹಸೀಲ್ದಾರ್ ಆಗಮಿಸಿ ಸಮಸ್ಯೆ ಪರಿಹಾರದ ಭರವಸೆ ನೀಡಿದ್ದರಿಂದ ಧರಣಿ ಕೈಬಿಟ್ಟರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ತಾಲೂಕಿನ ಗೊಟಗುಣಕಿ ಗ್ರಾಮದ ಸರ್ವೆ ನಂಬರ್‌ ೫೫/೧, ೫೫/೨ ಈ ಜಮೀನಿಗೆ ಹೋಗಲು ದಾರಿ ಬಂದ್‌ ಮಾಡಿದ್ದರಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದ್ದು, ದಾರಿ ಮದ್ಯದಲ್ಲಿ ಮಣ್ಣಿನ ದಿಬ್ಬು ಹಾಕಿದ್ದಾರೆ. ಕೂಡಲೇ ತೆರವುಗೊಳಿಸಿ ದಾರಿ ಮಾಡಿ ಕೊಡಬೇಕೆಂದು ಆಗ್ರಹಿಸಿ ಗೊಟಗುಣಕಿ ಗ್ರಾಮದ ಸಾಹೇಬಗೌಡ ಬಿರಾದಾರ ಕುಟುಂಬಸ್ಥರು ಮಂಗಳವಾರ ತಹಸೀಲ್ದಾರ್‌ ಕಚೇರಿ ಎದುರು ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಆದರೆ, ಸ್ಥಳಕ್ಕೆ ತಹಸೀಲ್ದಾರ್‌ ಆಗಮಿಸಿ ಸಮಸ್ಯೆ ಪರಿಹಾರದ ಭರವಸೆ ನೀಡಿದ್ದರಿಂದ ಧರಣಿ ಕೈಬಿಟ್ಟರು.ಗೊಟಗುಣಕಿ ಗ್ರಾಮದ ರೈತರಾದ ಬಸನಗೌಡ ಭೀಮನಗೌಡ ಬಿರಾದಾರ, ಸಾಹೇಬಗೌಡ ಸಂಗನಗೌಡ ಪೋಲೇಸಿ ಈ ಇಬ್ಬರು ರೈತರು ನನ್ನ ಜಮೀನಿಗೆ ಉಳುಮೆ ಮಾಡಲು ಹೋಗಲು ಬಿಡುತ್ತಿಲ್ಲ. ಸದ್ಯ ಬಿತ್ತನೆ ಕಾರ್ಯ ಎಲ್ಲೆಡೆ ನಡೆದಿದೆ. ಆದರೆ ನನ್ನ ಜಮೀನು ಇನ್ನೂ ಹದಗೊಳಿಸಿಲ್ಲ ಮತ್ತು ಬಿತ್ತನೆಯೂ ಮಾಡಿಲ್ಲ. ಈ ಹಿಂದೆ ತಹಸೀಲ್ದಾರ್‌ ಅವರ ನೇತೃತ್ವದಲ್ಲಿ ಮತ್ತು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತಕರಾರು ತೆಗೆಯುವ ರೈತರಿಗೆ ತಿಳಿಹೇಳುವ ಕಾರ್ಯ ಮಾಡಲಾಗಿತ್ತಾದರೂ ಮತ್ತೆ ಆ ರೈತರು ಮೊಂಡತನ ಮುಂದುವರೆಸುವುದರೊಂದಿಗೆ ನನ್ನ ಜಮೀನಿಗೆ ಹೋಗದ ಹಾಗೇ ಒಡ್ಡುವರಿಗಳನ್ನು ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಇದನ್ನು ಕೇಳಲು ಹೋದರೆ ಬೆದರಿಕೆ ಒಡ್ಡುತ್ತಿದ್ದಾರೆ. ಕೂಡಲೇ ನನ್ನ ಜಮೀನಿಗೆ ಹೋಗಲು ದಾರಿ ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ಒತ್ತಾಯಿಸಿದರು.

ಅಹೋ ರಾತ್ರಿ ಧರಣಿ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ತಹಸೀಲ್ದಾರ್‌ ಅವರು ಆಗಮಿಸಿ ದಾರಿ ಮಾಡಿಕೊಡುವುದಾಗಿ ಭರವಸೆ ನೀಡಿದರು ಅವರ ಭರವಸೆ ಮೇರೆಗೆ ತಾತ್ಕಾಲಿಕ ಧರಣಿ ಹಿಂಪಡೆಯಲಾಯಿತು.

ಅನೀಲಕುಮಾರ ಕಾಜಾಪೂರ, ಶಂಕ್ರೆಮ್ಮ ರಾಜಾಪುರ, ಶೈಲಶ್ರೀ ಬಾರಾದಾರ ಮೊದಲಾದವರು ಆಮರಣ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.