ಗಜೇಂದ್ರಗಡ: ಬಗರ್ ಹುಕ್ಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ಹಾಗೂ ಸಾಗುವಳಿ ಚೀಟಿಗೆ ಒತ್ತಾಯಿಸಿ ಇಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಬುಧವಾರ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಸ್ಪಂದನೆ ಸಿಗದ ಹಿನ್ನೆಲೆ ಹೋರಾಟ ಮುಂದುವರಿದಿದೆ.
ತಾಲೂಕಿನ ವ್ಯಾಪ್ತಿಯಲ್ಲಿ ಸುಮಾರು ೧೬ ಹಳ್ಳಿಗಳಲ್ಲಿ ಬಗರ್‌ಹುಕ್ಕುಂ ಸಾಗುವಳಿದಾರರು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಸುಮಾರು ದಿನಗಳಿಂದ ಹಕ್ಕುಪತ್ರ, ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿ ಸಾಕಷ್ಟು ಬಾರಿ ಹೋರಾಡಿ ಮನವಿ ಸಲ್ಲಿಸಿದ್ದರೂ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.ರೈತರು ಅನೇಕ ವರ್ಷಗಳಿಂದ ಗಜೇಂದ್ರಗಡ ಸುತ್ತಲಿನ ಗುಡ್ಡದಲ್ಲಿ ಉಳುಮೆ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಆದರೆ ಸರ್ಕಾರ ರೈತರಿಗೆ ಹಕ್ಕುಪತ್ರ, ಸಾಗುವಳಿ ಚೀಟಿ ನೀಡಲು ನಿರಾಕರಿಸುತ್ತಿರುವುದು ಸರಿಯಾದ ಕ್ರಮವಲ್ಲ. ಹೀಗಾಗಿ ಅಧಿಕಾರಿಗಳು ತಕ್ಷಣ ರೈತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ಶಾಸಕರು, ಜಿಲ್ಲಾಧಿಕಾರಿ, ತಹಸೀಲ್ದಾರರಿಗೆ ತಾಲೂಕಿನ ರೈತರ ಮೇಲೆ ಕಾಳಜಿ ಇಲ್ಲದ ಪರಿಣಾಮ ರೈತರ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ಕೆಲವರ ಲಾಬಿಗಾಗಿ ಕೆಲಸ ಮಾಡಿ, ರೈತರಿಗೆ ದ್ರೋಹವೆಸಗಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಹಸೀಲ್ದಾರ್ ಕಚೇರಿ ಬಂದ್ ಮಾಡಿ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ಈ ವೇಳೆ ಪೀರು ರಾಠೋಡ, ಗಣೇಶ ರಾಠೋಡ, ರೂಪೇಶ ಮಾಳೋತ್ತರ, ಚಂದ್ರು ರಾಠೋಡ, ಚನ್ನಪ್ಪ ಗೂಗಲೋತ್ತರ, ಮೆಹಬೂಬ ಹವಾಲ್ದಾರ, ಅನಿಲ್ ಆರ್., ಬಾಲು ರಾಠೋಡ, ಶಿವಪ್ಪ ಮಾಳೋತ್ತರ, ಲೋಕಪ್ಪ ರಾಠೋಡ, ಈರಪ್ಪ ರಾಠೋಡ, ವೀರಭದ್ರಪ್ಪ ಮಾಳೋತ್ತರ, ರತ್ನಪ್ಪ ಮಾಳೋತ್ತರ, ಮಾರುತಿ ರಾಠೋಡ, ಚಂದ್ರು ಅಜ್ಮೀರ ಸೇರಿ ಇತರರು ಇದ್ದರು.ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನ ಜಪ್ತಿರೋಣ: ತಾಲೂಕಿನ ಕೊತಬಾಳದಿಂದ ರೋಣ ಪಟ್ಟಣಕ್ಕೆ ಮಂಗಳವಾರ ಸಂಜೆ ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನ ವಶಪಡಿಸಿಕೊಂಡು, ಮೂವರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟದ ನಿಖರ ಮಾಹಿತಿ ಮೇರೆಗೆ ತಾಲೂಕು ಆಹಾರ ನಿರೀಕ್ಷಕಿ ಸುವರ್ಣ ಜುಮ್ಮನಕಟ್ಟಿ ದಾಳಿ ಮಾಡಿ, ಪಡಿತರ ಅಕ್ಕಿ ಅಕ್ರಮ ಸಾಗಿಸುತ್ತಿದ್ದ ವಾಹನ ತಡೆದು ತಪಾಸಣೆ ಮಾಡುತ್ತಿದ್ದ ವೇಳೆ ಒಟ್ಟು 28 ಚೀಲಗಳು(12.5 ಕ್ವಿಂಟಲ್) ಪತ್ತೆಯಾಗಿವೆ.ಘಟನಾ ಸ್ಥಳಕ್ಕೆ ತಹಸೀಲ್ದಾರ್ ನಾಗರಾಜ ಕೆ. ಭೇಟಿ ನೀಡಿ ಪರಿಶೀಲಿಸಿದ್ದಾರೆ. ರೋಣ ಪೊಲೀಸ್ ಠಾಣೆಯಲ್ಲಿ ವಾಹನ ಚಾಲಕ ರವಿ ಭಜಂತ್ರಿ ಹಾಗೂ ಮುಸ್ತಾಕ ಅತ್ತಾರ, ಮಹಬೂಬಸಾಬ ಮುಲ್ಲಾ ಅವರ ಮೇಲೆ ದೂರು ದಾಖಲಿಸಲಾಗಿದೆ.