ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಧರ್ಮಸ್ಥಳ ಪ್ರಕರಣವನ್ನು ಎನ್ಐಎಗೆ ವಹಿಸಿ ಸತ್ಯಾ ಸತ್ಯತೆಯನ್ನು ಬೆಳಕಿಗೆ ತರುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಇಲ್ಲಿನ ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ಬುಧವಾರ ಮನವಿ ಸಲ್ಲಿಸಿರುವ ಅವರು, ಸೂಕ್ತ ಸಾಕ್ಷಾದಾರಗಳ ಇಲ್ಲದೆಯೂ ಅನಾಮಿಕ ಹೇಳಿದ ಮಾತಿನಿಂದಾಗಿ ಕಳೆದ ಹಲವು ದಿನಗಳಿಂದ ಧರ್ಮಸ್ಥಳದಲ್ಲಿ ಆಸ್ತಿ ಪಂಜರ ಹುಡುಕಾಟ ನಡೆಸುತ್ತ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆಯುತ್ತಿದೆ. ಈ ಪ್ರಕರಣ ಇಡೀ ದೇಶದಲ್ಲಿ ಚರ್ಚೆಗೆ ಗ್ರಾಸವಾಗಿದ್ದು ರಾಜ್ಯವೇ ತಲೆ ತಗ್ಗಿಸುವಂತಾಗಿದೆ.ಕಾಣದ ಕೈಗಳು ಪ್ರಕರಣದ ಹಿಂದೆ ಇದ್ದಾರೆಂದು ಆರೋಪಿಸಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟಿದ್ದೇನೆಂದು ಅನಾಮಿಕ ದಿನಕ್ಕೊಂದು ಹೊಸ ಸ್ಥಳವನ್ನು ತೋರಿಸುತ್ತಾ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾನೆ. ಇದನ್ನೆ ನಂಬಿ ಎಸ್‌ಐಟಿಯವರು ಗುಂಡಿಗಳನ್ನು ಅಗೆಯುವ ಕೆಲಸ ಮಾಡುತ್ತಿದ್ದಾರೆ.ಇದು ರಾಜಕೀಯ ಕೆಸರೆರಚಾಟಕ್ಕೆ ತಿರುಗಿದೆ. ಅನಾಮಿಕ, ಮಟ್ಟಣ್ಣನವರು, ಮಹೇಶ್ ತಿರುಮುತಿಯಂತವರು ಆಧಾರ ರಹಿತ ಆರೋಪಗಳನ್ನು ಮಾಡುತ್ತಾ ರಾಜ್ಯದ ಮಾನ ಹರಾಜಾಕಿದ್ದಾರೆ.ಓಟಿನ ರಾಜಕಾರಣಕ್ಕಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಅನಾಮಿಕನನ್ನು ಸೃಷ್ಟಿ ಮಾಡಿ ಪ್ರಕರಣವನ್ನು ಎಸ್‌ಐಟಿಗೆ ವಹಿಸಿ ಕೋಟ್ಯಂತರ ರು. ಗಳನ್ನು ವ್ಯರ್ಥ ಮಾಡಿದೆ. ಕಳೆದ ಹಲವು ದಿನಗಳಿಂದ ಆಸ್ತಿ ಪಂಜರಕ್ಕಾಗಿ ಹುಡುಕಾಟ ನಡೆಸುತ್ತಿದ್ದರೂ ತಲೆ ಬುರುಡೆ ಪತ್ತೆಯಾಗಿಲ್ಲ. ಇದು ಇಸ್ಮಾಮಿಕ್ ಸಂಘಟನೆ ಕಾಣದಂತೆ ಕೆಲಸ ಮಾಡುತ್ತಿದೆ ಎನ್ನುವ ಅನುಮಾನಗಳಿವೆ.ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಧರ್ಮಸ್ಥಳ ತಲೆ ಬುರುಡೆ ಪ್ರಕರಣವನ್ನು ಎನ್ ಐ ಎ ಗೆ ವಹಿಸಿ ಸತ್ಯಾಸತ್ಯತೆಯನ್ನು ಹೊರ ತರುವ ಕೆಲಸ ಮಾಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ಸಂದರ್ಬದಲ್ಲಿ ರೈತ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ, ತಾಲೂಕು ಅಧ್ಯಕ್ಷ ರಾಜಣ್ಣ, ಜಿಲ್ಲಾ ಪ್ರದಾನ ಕಾರ್ಯದರ್ಶಿ ರವಿ ಕುಮಾರ್, ರಾಮಾಂಜಿನಿ, ವೆಂಕಟೇಶ್, ಮೇಸ್ತ್ರಿ ಪಾಪಯ್ಯ, ರಮೇಶ್, ತಿಪ್ಪೇಶ, ಪಿ.ಟಿ. ಹಟ್ಟಿ ನಿಂಗಣ್ಣ, ಈರಣ್ಣ, ಬೋರಯ್ಯ, ದಾಸಪ್ಪ, ಹನುಮಯ್ಯ ಇದ್ದರು.