ಸಾರಾಂಶ
ಪ್ರತಿಭಟನೆಗೆ ರಾಜ್ಯದ ಮೂಲೆ ಮೂಲೆಗಳಿಂದ ಅಂದಾಜು 1 ಲಕ್ಷಕ್ಕೂ ಮೇಲ್ಪಟ್ಟು ಕಾರ್ಯಕರ್ತರು ಮತ್ತು ಭಕ್ತವೃಂದ ಭಾಗವಹಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಹಿಂದೂ ಗಳ ಪವಿತ್ರ ಪುಣ್ಯ ಕ್ಷೇತ್ರ ವಾದ ಶ್ರೀ ಧರ್ಮಸ್ಥಳ ಕ್ಷೇತ್ರದ ಹೆಸರುನ್ನು ಹಾಳು ಮಾಡಿ ಹಿಂದೂ ಗಳ ಧರ್ಮ ದೇವರುಗಳನ್ನು ಅವಹೇಳನ ಮಾಡುತ್ತಿರುವ ಷಡ್ಯಂತ್ರ ವನ್ನು ಬಯಲಿಗೆಳೆದು, ಈ ಸಂಚಿನ ಹಿಂದಿರುವ ಕೈಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ಗೆ ಒಳಪಡಿಸಬೇಕು ಎಂದು ಆಗ್ರಹಿಸಿ ರಾಜ್ಯ ಬಿಜೆಪಿ ಕರೆ ನೀಡಿರುವ ಹಿನ್ನೆಲೆ ಯಲ್ಲಿ ಕೊಡಗು ಬಿಜೆಪಿ ಯಿಂದ ಸಾವಿರಾರು ಸಂಖ್ಯೆಯಲ್ಲಿ ಸೋಮವಾರ ದಿನ ಧರ್ಮಸ್ಥಳ ದತ್ತ ತೆರಳಲು ಪಕ್ಷ ಈಗಾಗಲೇ ಪೂರ್ವ ತಯಾರಿ ಯಲ್ಲಿ ತೊಡಗಿದೆ.ಮಡಿಕೇರಿ ನಗರ ಗ್ರಾಮಾಂತರ ಮಂಡಲ ವಿರಾಜಪೇಟೆ ಮತ್ತು ಸೋಮವಾರ ಪೇಟೆ ಮಂಡಲಗಳಲ್ಲಿ ಈಗಾಗಲೇ ಪೂರ್ವ ತಯಾರಿ ಸಭೆ ಗಳಾಗಿದ್ದು ಬಿಜೆಪಿ ಕಾರ್ಯ ಕರ್ತರು ಅಲ್ಲದೆ ಶ್ರೀ ಧರ್ಮಸ್ಥಳ ಕ್ಷೇತ್ರ ದ ಭಕ್ತ ರು ಕೂಡ ಈ ಹೋರಾಟ ದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರವಿ ಕಾಳಪ್ಪ ರವರು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶ್ರೀ ಧರ್ಮಸ್ಥಳ ಕ್ಷೇತ್ರ ದ ಸಾವಿರಾರು ಭಕ್ತ ರು ಕೊಡಗಿನಲಿದ್ದು ಇಂದು ಒಂದು ಸರ್ಕಾರ ಮಾಡುವ ಕೆಲಸ ಕ್ಕಿಂತ ಅಚ್ಚುಕಟ್ಟಾಗಿ ಧಾರ್ಮಿಕ ಕ್ಷೇತ್ರ ವಿದ್ಯಾ ಕ್ಷೇತ್ರ ಸಾಮಾಜಿಕ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರ ಹೀಗೆ ಎಲ್ಲಾ ಕ್ಷೇತ್ರ ದಲ್ಲೂ ಧರ್ಮ ಸ್ಥಳ ತನ್ನ ಕರ್ತವ್ಯ ವನ್ನು ಅತ್ಯಂತ ಜವಾಬ್ದಾರಿ ಮತ್ತು ನಿಷ್ಠೆ ಇಂದ ನಿರ್ವಹಿಸುತ್ತಿರುವುದು ಕೆಲ ದೇಶ ದ್ರೋಹಿ ಧರ್ಮ ದ್ರೋಹಿ ಗಳಿಗೆ ಸಹಿಸಲು ಸಾಧ್ಯ ವಾಗುತ್ತಿಲ್ಲ. ಈ ಕಾರಣ ಕಾಗಿ ಅನ್ಯ ಧರ್ಮ ದ ವ್ಯಕ್ತಿ ಮತ್ತು ಆತನ ಹಿಂದಿರುವ ಶಕ್ತಿ ಧರ್ಮಸ್ಥಳದ ಬಗ್ಗೆ ಕಪೋಲ ಕಲ್ಪಿತ ಸುದ್ದಿ ಯನ್ನು ಹರಿ ಬಿಟ್ಟು ಹಿಂದೂ ಗಳ ಭಾವನೆ ಗಳಿಗೆ ಘಾಸಿ ಉಂಟು ಮಾಡಿದ್ದಾರೆ. ಇದನ್ನು ವಿರೋಧಿಸಿ ಸೆಪ್ಟೆಂಬರ್ 1 ರಂದು ಸೋಮವಾರ ಬೆಳಗೆ 8 ಗಂಟೆಗೆ ಕೊಡಗಿನ ಕಾರ್ಯಕರ್ತರು ಮತ್ತು ಭಕ್ತ ರು ಕೊಯಿನಾಡಿನ ಶ್ರೀ ಮಹಾ ಗಣಪತಿ ದೇವಾಲಯದಲ್ಲಿ ಸೇರಿ ಧರ್ಮಸ್ಥಳ ಕ್ಕೆ ತೆರಳಲಿದ್ದಾರೆ ಅಂದು ಮಧ್ಯಾಹ್ನ 2 ಗಂಟೆಗೆ ಸಾರ್ವಜನಿಕ ಪ್ರತಿಭಟನಾ ಸಭೆ ನಡೆಯಲಿದೆ.ಈ ಪ್ರತಿಭಟನೆ ಗೆ ರಾಜ್ಯ ದ ಮೂಲೆ ಮೂಲೆ ಗಳಿಂದ ಅಂದಾಜು 1 ಲಕ್ಷಕ್ಕು ಮೇಲ್ಪಟ್ಟು ಕಾರ್ಯಕರ್ತರು ಮತ್ತು ಭಕ್ತ ವೃಂದ ಭಾಗವಹಿಸಲಿದ್ದು ಕೊಡಗಿನಿಂದ ಸುಮಾರು 400 ರಿಂದ 500 ವಾಹನ ಗಳಲ್ಲಿ ಸುಮಾರು 2000 ಕ್ಕೂ ಮೇಲ್ಪಟ್ಟು ಕಾರ್ಯಕರ್ತರು ಈ ಪ್ರತಿಭಟನಾ ಸಭೆ ಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರತಿಭಟನೆಯ ನೇತೃತ್ವ ವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ವಿಜೇಂದ್ರ ವಹಿಸಲಿದ್ದು ಪಕ್ಷದ ಸಂಸದರು ನಾಯಕರು, ಶಾಸಕರು, ರಾಜ್ಯ ಹಾಗೂ ಜಿಲ್ಲೆ ಯ ನಾಯಕರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.