ಸಾರಾಂಶ
ಗ್ರಾಮೀಣ ಪ್ರದೇಶಗಳಲ್ಲಿ ಜನರ ಜೀವನಾಡಿಯಾಗಿರುವ ಕೆರೆಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ನಾಗರಿಕರ ಕರ್ತವ್ಯ. ಈ ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆ ಕುಡಿಯುವ ನೀರಿನ ಕೆರೆಯನ್ನು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹೂಳೆತ್ತುವ ಕಾಮಗಾರಿ ಆರಂಭಿಸಿದೆ.
ಕೊಪ್ಪಳ(ಯಲಬುರ್ಗಾ):
ಹೂಳು ತುಂಬಿರುವ ಕೆರೆಗಳಿಗೆ ಧರ್ಮಸ್ಥಳ ಸಂಸ್ಥೆಯಿಂದ ಜೀವಕಳೆ ಬರುತ್ತಿದೆ ಎಂದು ಕರಮುಡಿ ಗ್ರಾಪಂ ಅಧ್ಯಕ್ಷ ಲಿಂಗರಾಜ ಉಳ್ಳಾಗಡ್ಡಿ ಹೇಳಿದರು.ಯಲಬುರ್ಗಾ ತಾಲೂಕಿನ ತೊಂಡಿಹಾಳ ಗ್ರಾಮದಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಹಾಗೂ ಗ್ರಾಪಂ ವತಿಯಿಂದ ಜರುಗಿದ ನಮ್ಮೂರ ನಮ್ಮ ಕೆರೆ ಅಡಿ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಜನರ ಜೀವನಾಡಿಯಾಗಿರುವ ಕೆರೆಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ನಾಗರಿಕರ ಕರ್ತವ್ಯ. ಈ ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆ ಕುಡಿಯುವ ನೀರಿನ ಕೆರೆಯನ್ನು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹೂಳೆತ್ತುವ
ಕಾಮಗಾರಿ ಆರಂಭಿಸಿದೆ ಎಂದರು.ಧರ್ಮಸ್ಥಳ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಸತೀಶ್ ಟಿ. ಮಾತನಾಡಿ, ಜನರು ಈ ಕಾರ್ಯಕ್ಕೆ ಸಹಕಾರ ನೀಡಿ, ಕೆರೆ ಪ್ರಗತಿಗೆ ಕೈಜೋಡಿಸಬೇಕು. ನಮ್ಮ ಸಂಸ್ಥೆ ಮೂಲ ಉದ್ದೇಶ ಅಂತರ್ಜಲ ವೃದ್ಧಿಗೆ ಪ್ರೋತ್ಸಾಹ ನೀಡುತ್ತಿದೆ. ಜನರು ಇಂತಹ ಕಾರ್ಯದಲ್ಲಿ ಭಾಗಿಯಾಗಿ ಕೆರೆ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಪಿಡಿಒ ಕೆ. ಬಸವರಾಜ, ಕೆರೆ ಸಮಿತಿ ಅಧ್ಯಕ್ಷ ಪರಪ್ಪ ಅಂಗಡಿ, ಗ್ರಾಪಂ ಸದಸ್ಯರಾದ ನಿಂಗನಗೌಡ, ಗೀತಾ ತುಪ್ಪದ, ಕಾಳಪ್ಪ ಬಡಿಗೇರ, ಅಂದಾನಗೌಡ, ಬಸವನಗೌಡ ಮಾಲಿಪಾಟೀಲ್, ದೇವಪ್ಪ ವಡ್ಡರ್, ಕೃಷಿ ಮೇಲ್ವಿಚಾರಕ ಪ್ರಸನ್ನಕುಮಾರ, ವಲಯ ಮೇಲ್ವಿಚಾರಕ ರಮೇಶ, ಜಾನವಿಕಾಸ ಸಮನ್ವಯ ಅಧಿಕಾರಿ ಗೀತಾ ಇದ್ದರು.