ಸಾರಾಂಶ
ಇ.ಡಿ.ಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಅನೇಕ ಬಾರಿ ಹೇಳುತ್ತಿದೆ. ರಾಜಕೀಯಕ್ಕಾಗಿ ಇ.ಡಿ. ಬಳಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿರುವುದುಂಟು. ನೆಗಟಿವ್ ವಿಚಾರಗಳಿದ್ದರೆ ದೇಶದಲ್ಲಿ ಹೊರಬರಲ್ಲ.
ಹುಬ್ಬಳ್ಳಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಮಣ್ಣು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಎಸ್‌ಐಟಿ ತನಿಖೆಗೊಳಪಡಿಸಿದೆ. ಹೀಗಾಗಿ ಆತುರದಿಂದ ಮಾತನಾಡುವುದು ಸರಿಯಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ತನಿಖೆಯಾಗುತ್ತಿದೆ. ನಾವು ಏನೇ ಮಾಡಿದರೂ ಬಿಜೆಪಿಯವರು ಟೀಕೆ ಮಾತಾಡುತ್ತಾರೆ. ಆದರೆ, ಅವರ ಬಗ್ಗೆ ಮಾತ್ರ ನಾವು ಮಾತನಾಡುವ ಹಾಗಿಲ್ಲ ಎಂದರು.ಮೋದಿ ಅವರ ಅಧಿಕಾರವಧಿ ಮುಗಿಯುವ ವರೆಗೂ ನಾವು ಯಾರು ಮಾತನಾಡುವಂಗಿಲ್ಲ. ಆದರೆ, ಅವರು ಮಾತನಾಡಿದರೂ ನಡೆಯುತ್ತದೆ ಎಂದರು.
ಇ.ಡಿ.ಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಅನೇಕ ಬಾರಿ ಹೇಳುತ್ತಿದೆ. ರಾಜಕೀಯಕ್ಕಾಗಿ ಇ.ಡಿ. ಬಳಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿರುವುದುಂಟು. ನೆಗಟಿವ್ ವಿಚಾರಗಳಿದ್ದರೆ ದೇಶದಲ್ಲಿ ಹೊರಬರಲ್ಲ. ದೇಶದ ಪ್ರಧಾನಿ ಈವರೆಗೂ ಒಂದೇ ಒಂದು ಸುದ್ದಿಗೋಷ್ಠಿಯನ್ನೂ ನಡೆಸಿಲ್ಲ ಎಂದು ಟೀಕಿಸಿದರು.ಪೆಹಲ್ಗಾಂದಲ್ಲಿ ಭಯೋತ್ಪಾದಕ ಕೃತ್ಯ ನಡೆಯಿತು. ಅದರ ನಂತರ ಪ್ರಧಾನಿ ಮೋದಿ ಅವರು 8-10 ದೇಶ ಸುತ್ತಿ ಬಂದರು. ಇದೀಗ ಬಿಹಾರ್ ಚುನಾವಣೆಯಲ್ಲಿ ಬ್ಯುಜಿ ಇದ್ದಾರೆ ಎಂದು ವ್ಯಂಗ್ಯವಾಡಿದರು.
ಮಹದಾಯಿ ವಿಚಾರದಲ್ಲಿ ಗೋವಾಗೆ ಬೇಕಾದಾಗ ಪರಿಸರ ಕ್ಲಿಯರನ್ಸ್ ಕೊಡುತ್ತಾರೆ. ಆದರೆ, ಕರ್ನಾಟಕದ ಬಗ್ಗೆ ಪ್ರಶ್ನೆ ಬಂದಾಗ ಪರಿಸರ ಕ್ಲಿಯರೆನ್ಸ್ ಸಿಗುವುದಿಲ್ಲ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಯಾರೊಬ್ಬರೂ ಮಾತಾಡುವುದಿಲ್ಲ ಎಂದು ಟೀಕಿಸಿದರು.