ಸಂಸ್ಥೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆ ಅವರ ಅವರ ಕೃಪಾಶೀರ್ವಾದಗಳೊಂದಿಗೆ ಈ ಸಂಸ್ಥೆ ಸ್ವ- ಸಹಾಯ ಸಂಘಗಳಿಂದ ಬಡವರ ಅಭಿವೃದ್ಧಿ ಆಗುತ್ತಿದೆ ಎಂದರು.

ನರಗುಂದ: ಡಾ. ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಸಂಸ್ಥೆಯ ಮೂಲಕ ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿದ್ದಾರೆ ಎಂದು ಕೊಣ್ಣೂರಿನ ವಿರಕ್ತಮಠದ ಚನ್ನವೀರ ಶಿವಾಚಾರ್ಯ ಶ್ರೀಗಳು ಶ್ಲಾಘಿಸಿದರು.

ತಾಲೂಕಿನ ಕೊಣ್ಣೂರ ಗ್ರಾಮದ ರಾಮಲಿಂಗೇಶ್ವರ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಸಾಮೂಹಿಕ ಸಹಸ್ರಲಿಂಗ ಬಿಲ್ವಾರ್ಚನಾ ವ್ಯವಸ್ಥಾಪನಾ ಸಮಿತಿ ಮತ್ತು ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಸಾಮೂಹಿಕ ಸಹಸ್ರಲಿಂಗ ಬಿಲ್ವಾರ್ಚನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಧರ್ಮಸ್ಥಳ ಸಂಸ್ಥೆ ಸರ್ಕಾರ ಮಾಡಬೇಕಾದ ಕಾರ್ಯಗಳನ್ನು ಮಾಡುತ್ತಿದೆ ಎಂದರು.

ರಾಜ್ಯದಲ್ಲಿ ಈ ಸಂಸ್ಥೆಯಲ್ಲಿ ನೂರಾರು ಕೆರೆ ಹುಳು ಎತ್ತುವುದು, ದೇವಸ್ಥಾನಗಳ ಅಭಿವೃದ್ಧಿ, ಹೈನುಗಾರಿಕೆ ಪ್ರೋತ್ಸಾಹ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶೌಚಾಲಯ ನಿರ್ಮಾಣ, ಬಡ ಮಹಿಳೆಯರಿಗೆ ಸಾಲ ವಿತರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೂರಾರು ಗ್ರಾಮ ಮತ್ತು ಪಟ್ಟಣಗಳನ್ನು ಅಭಿವೃದ್ಧಿ ಮಾಡಿದ್ದಾರೆಂದು ಹೇಳಿದರು.

ಸಂಸ್ಥೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆ ಅವರ ಅವರ ಕೃಪಾಶೀರ್ವಾದಗಳೊಂದಿಗೆ ಈ ಸಂಸ್ಥೆ ಸ್ವ- ಸಹಾಯ ಸಂಘಗಳಿಂದ ಬಡವರ ಅಭಿವೃದ್ಧಿ ಆಗುತ್ತಿದೆ. ಅಲ್ಲದೇ ಬಡವರ ಆರ್ಥಿಕ ಸುಧಾರಣೆಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.

ಈ ಸಂದರ್ಭದಲ್ಲಿ ಟಿ.ಬಿ. ಶಿರಿಯಪ್ಪಗೌಡ್ರ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಅಧ್ಯಕ್ಷ ಉಮೇಶ ಮರ್ಚಪ್ಪನವರ, ಪ್ರಕಾಶ ತಿರಕನಗೌಡ್ರ, ಶಂಕರಗೌಡ ಯಲ್ಲಪ್ಪಗೌಡ್ರ, ಕೊಟ್ರೇಶ ಕೊಟ್ರಶೆಟ್ಟಿ, ಶಿವಬಸಪ್ಪ ಹೆರಕಲ, ಅನಿಲ ಶಾಲದರ, ಚಂದ್ರಶೇಖರಗೌಡ್ರು ಸಾಲಿಗೌಡ್ರ, ತಾಲೂಕು ಯೋಜನಾಧಿಕಾರಿ ಮಾಲತಿ ದಿನೇಶ, ಮೇಲ್ವಿಚಾರಕ ಪರಶುರಾಮ, ವಲಯದ ಸೇವಾಪ್ರತಿನಿಧಿಗಳು, ಶೌರ್ಯ ತಂಡದ ಸಂಯೋಜಕರು, ಒಕ್ಕೂಟ ಪದಾಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು ಇದ್ದರು.