ಸಾರಾಂಶ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ದೀಪ ಕಾರ್ಯಕ್ರಮದ ಅಡಿಯಲ್ಲಿ ಮಣಿಪಾಲ ವಲಯದ ಬಡಗಬೆಟ್ಟುವಿನ ರಾಜೀವನಗರದ ಹಿರಿಯ ಪ್ರಾಥಮಿಕ ಶಾಲೆಗೆ 68,000 ರು. ಮೊತ್ತದ 10 ಜೊತೆ ಡೆಸ್ಕು ಮತ್ತು ಬೆಂಚುಗಳು ಮಂಜೂರುಗೊಂಡಿವೆ. ಅವುಗಳ ವಿತರಣಾ ಕಾರ್ಯಕ್ರಮ ಸೋಮವಾರ ಶಾಲೆಯಲ್ಲಿ ನೆರವೇರಿತು.
ಕನ್ನಡಪ್ರಭ ವಾರ್ತೆ ಉಡುಪಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ದೀಪ ಕಾರ್ಯಕ್ರಮದ ಅಡಿಯಲ್ಲಿ ಮಣಿಪಾಲ ವಲಯದ ಬಡಗಬೆಟ್ಟುವಿನ ರಾಜೀವನಗರದ ಹಿರಿಯ ಪ್ರಾಥಮಿಕ ಶಾಲೆಗೆ 68,000 ರು. ಮೊತ್ತದ 10 ಜೊತೆ ಡೆಸ್ಕು ಮತ್ತು ಬೆಂಚುಗಳು ಮಂಜೂರುಗೊಂಡಿವೆ. ಅವುಗಳ ವಿತರಣಾ ಕಾರ್ಯಕ್ರಮ ಸೋಮವಾರ ಶಾಲೆಯಲ್ಲಿ ನೆರವೇರಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಣಿಪಾಲ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಅನಿಲ್ ಕುಮಾರ್ ಭಾಗವಹಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸರ್ಕಾರಿ ಶಾಲೆಗಳಿಗೆ ಇಂತಹ ಸೌಕರ್ಯ ನೀಡುತ್ತಿರುವುದು ಹಾಗೂ ಕೆರೆಗಳನ್ನು ಅಭಿವೃದ್ದಿಗೊಳಿಸುತ್ತಿರುವ, ಶಾಲೆಗೆ ಅಧ್ಯಾಪಕರನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಅಭಿನಂದಿಸಿದರು.
ಯೋಜನೆಯ ತಾಲೂಕು ಜನಜಾಗೃತಿ ಅಧ್ಯಕ್ಷ ಸತ್ಯಾನಂದ ನಾಯಕ್ ಅವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಬಡಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಕೋಟ್ಯಾನ್ ಅವರು ಯೋಜನೆಯ ಪ್ರಾರಂಭದಲ್ಲಿ ಒಕ್ಕೂಟದ ಅಧ್ಯಕ್ಷರಾಗಿದ್ದು, ಅದೇ ವರ್ಷ ತಾನು ಪಂಚಾಯಿತಿ ಅಧ್ಯಕ್ಷರಾಗಿ ನೇಮಕಗೊಂಡು, ನಂತರ 3 ಬಾರಿ ಸದಸ್ಯನಾಗಿ ಆಯ್ಕೆ ಆಗಿರುತ್ತೇನೆ. ಇದಕ್ಕೆ ಯೋಜನೆಯೇ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು,ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಕೃಷ್ಣ ನಾಯ್ಕ್, ಪಂಚಾಯಿತಿ ಸದಸ್ಯ ಕ್ರೋಸಿ ಪೆರ್ನಾಡಿಸ್, ಪ್ರೌಢ ಶಾಲೆ ಮುಖ್ಯ ಶಿಕ್ಷಕ ಸಂಜೀವ ನಾಯಕ್ ಮತ್ತು ಶಾಲೆಯ ಶಿಕ್ಷಕರು, ಯೋಜನೆಯ ಸೇವಾ ಪ್ರತಿನಿಧಿ ಪ್ರಿಯಾಂಕಾ ಮತ್ತು ಒಕ್ಕೂಟದವರು ಇದ್ದರು.