ಆಶ್ರಯ ಮನೆ ಹಕ್ಕು ವಿತರಣೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ

| Published : Sep 21 2024, 01:54 AM IST

ಆಶ್ರಯ ಮನೆ ಹಕ್ಕು ವಿತರಣೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

Dharna satyagraha demanding distribution of shelter house rights

-ಆಶ್ರಯ ಮನೆಗಳ ಹಕ್ಕು ವಿತರಣೆ ಮಾಡುವತನಕ ಉಪವಾಸ, ಧರಣಿ: ರವೀಂದ್ರರೆಡ್ಡಿ ಬಿಗಿ ಪಟ್ಟು

------

ಕನ್ನಡಪ್ರಭ ವಾರ್ತೆ ಗುರುಮಠಕಲ್

ಆಶ್ರಯ ಮನೆಗಳ ಹಕ್ಕು ವಿತರಣೆ ಮಾಡುವತನಕ ಉಪವಾಸ ಸತ್ಯಗ್ರಹ, ಧರಣಿ ನಡೆಸಲಾಗುವುದು ಎಂದು ಸಮಾಜ ಸೇವಕ ರವೀಂದ್ರರೆಡ್ಡಿ ಪೊತುಲ್ ತಿಳಿಸಿದ್ದಾರೆ.

ಪುರಸಭೆ ಮುಂದುಗಡೆ ಫಲಾನುಭವಿಗಳೊಂದಿಗೆ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ವೇ ಸಂಖ್ಯೆ 25, 19/1 ಹಾಗೂ 20ರಲ್ಲಿ 200 ಕ್ಕಿಂತ ಹೆಚ್ಚು ನಿವೇಶನ ಹಂಚಿಕೆ ಮಾಡಲಾಗಿದೆ. ಕಳೆದ 30 ವರ್ಷಗಳಿಂದ ಫಲನುಭವಿಗಳಿಗೆ ಮನೆಯ ಹಕ್ಕುಪತ್ರ ವಿತರಿಸಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ನಿವೇಶನ ಹಕ್ಕುಪತ್ರ ಪಡೆಯುವವರೆಗೆ ಧರಣಿ ನಡೆಸುತ್ತೇವೆ ಎಂದರು.

ಕಳೆದ ಸಲ ಮಾಜಿ ಶಾಸಕ ದಿ. ನಾಗನಗೌಡ ಕಂದಕೂರು ಅವರು ಪುರಸಭೆ ಕಾರ್ಯಾಲಯದಲ್ಲಿ ಆಶ್ರಯ ಮನೆಗಳ ವಿತರಿಸದೆ ಕಾರ್ಯಕ್ರಮ ನಡೆಸಿ 15 ದಿವಸಗಳೊಳಗೆ ಮನೆ ಹಕ್ಕು ಪತ್ರ ನೀಡಲಾಗುವುದು ಎಂದು ಭರವಸೆ ನೀಡಿದರು. ಆದರೆ, ಇದುವರೆಗೂ ಹಕ್ಕು ಪತ್ರ ವಿತರಿಸಿಲ್ಲ. ನ್ಯಾಯ ಸಿಗುವವರೆಗೆ ಉಪವಾಸ ಸತ್ಯಗ್ರಹ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಚಂದ್ರಶೇಖರ ಮಡಿವಾಳ, ಶರಣು ಮೇದಾ, ಎಂ.ಡಿ. ಜಾಫರ್, ಸಾಯಿಲು ಮಡಿವಾಳ, ನಾರಾಯಣ ಮಜ್ಜಿಗೆ, ಗುರುನಾಥ ಕುಂಬಾರ, ರಮೇಶ್ ಮಿಸ್ಕಿನ್, ವಣ್ಣಮ್ಮ, ಸುಜಾತಾ ಮನ್ನೆ, ನರಸಮ್ಮ, ಶಮಿಮ್ ಬೇಗಂ, ರುಖಿಯಾ ಬೇಗಂ, ಬಾಷಾ ಬಿ., ನೂರ್ಜಾ ಬೇಗಂ, ಸಿದ್ದಪ್ಪ ಗುಗ್ಗಲ್, ಪೀರ್ ಅಹ್ಮದ್, ಸಲೀಮ್, ಅಶೋಕ್ ಸೇರಿದಂತೆ ಫಲಾನುಭವಿಗಳು ಇತರರಿದ್ದರು.

--

20ವೈಡಿಆರ್3: ಗುರುಮಠಕಲ್ ಪಟ್ಟಣದ ಪುರಸಭೆ ಎದುರು ಆಶ್ರಯ ಮನೆ ಹಕ್ಕು ಪತ್ರ ಪಡೆಯಲು ಆಗ್ರಹಿಸಿ ಫಲಾನುಭವಿಗಳು ಧರಣಿ ಸತ್ಯಾಗ್ರಹ ನಡೆಸಿದರು.