ಸಾರಾಂಶ
ಮಾದಿಗ ದಂಡೋರ ಹೋರಾಟ ಸಮಿತಿ ನೇತೃತ್ವದಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಫೆ.೧೬ ರಂದು ಬೃಹತ್ ಪ್ರತಿಭಟನೆ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ದಂಡೋರ ಹೋರಾಟ ಸಮಿತಿ ಅಧ್ಯಕ್ಷ ಮುತ್ತಣ್ಣ ಸಾಸನೂರ ತಿಳಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಮಾದಿಗ ದಂಡೋರ ಹೋರಾಟ ಸಮಿತಿ ನೇತೃತ್ವದಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಫೆ.೧೬ ರಂದು ಬೃಹತ್ ಪ್ರತಿಭಟನೆ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ದಂಡೋರ ಹೋರಾಟ ಸಮಿತಿ ಅಧ್ಯಕ್ಷ ಮುತ್ತಣ್ಣ ಸಾಸನೂರ ತಿಳಿಸಿದರು.ನಗರದ ನೂತನ ಪ್ರವಾಸಿ ಮಂದಿರದಲ್ಲಿ ನಡೆದ ಮಾದಿಗ ದಂಡೋರ ಹೋರಾಟ ಸಮಿತಿ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿಗಾಗಿ ನಮ್ಮ ಹೋರಾಟ ನಡೆಯುತ್ತಿದೆ. ವಿಜಯಪುರದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಹಲಿಗೆ ಮೇಳದೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದರು.
ರ್‍ಯಾಲಿಯಲ್ಲಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಮಾಪಣ್ಣ ಹದನೂರ ಭಾಗವಹಿಸಲಿದ್ದಾರೆ. ಸಮಾಜದವರು ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪದಾಧಿಕಾರಿ ಸೋಮು ಬೀರಲದಿನ್ನಿ, ದಲಿತ ಸಾಹಿತಿ ಅಶೋಕ ನಡುವಿನಮನಿ, ಸಾಯಬಣ್ಣ ರಾಮರಥ, ಪುಂಡಲೀಕ ಮದಭಾವಿ, ಅಶೋಕ ಮಧಬಾವಿ, ಪ್ರಭಾಕರ ಹದನೂರ, ಸಚೀನ ಬೋಳೆಗಾವ ಪರಶುರಾಮ ಕೂಚಬಾಳ, ಶಿವಾನಂದ ಬುದ್ಧಿ, ರಮೇಶ ಬಿ.ಬಿ.ಇಂಗಳಗಿ, ರಮೇಶ ಗುನ್ನಾಪೂರ, ರಾಯಪ್ಪ ಬಡಿಗೇರ, ಪರಶುರಾಮ ದ್ಯಾಬೇರಿ, ಸಂಜು ಜಾಲವಾದಿ, ಹಣಮಂತ ಆರೇಶಂಕರ, ಸಂತೋಷ ಶಿರನಾಳ, ಪವಾಡಪ್ಪ ಟಕ್ಕಳಕಿ ಮುಂತಾದವರು ಇದ್ದರು.