ಧಾರವಾಡ: ಗಣಿತ ಪರೀಕ್ಷೆ ಗೆ 28,302 ಹಾಜರು, 447 ಗೈರು

| Published : Mar 25 2025, 12:51 AM IST

ಸಾರಾಂಶ

ಗಣಿತ ವಿಷಯದ ಪರೀಕ್ಷೆಗೆ ಒಟ್ಟು 28,749 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು ಈ ಪೈಕಿ 28,302 ಪರೀಕ್ಷೆಗೆ ಹಾಜರಾಗಿದ್ದರು. 447 ಗೈರಾಗಿದ್ದರು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಧಾರವಾಡ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಜಿಲ್ಲಾದ್ಯಂತ ಸೋಮವಾರ ಸುಸೂತ್ರವಾಗಿ ನಡೆದಿದ್ದು, ಪರೀಕ್ಷಾರ್ಥಿಗಳು ಗಣಿತ ವಿಷಯ ಪರೀಕ್ಷೆ ಬರೆದರು.

ಈ ಪರೀಕ್ಷೆಯಲ್ಲಿ ಹುಬ್ಬಳ್ಳಿ ಶಹರದ 8,796 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, 8,609 ಹಾಜರಾಗಿದ್ದು, 187 ಗೈರಾಗಿದ್ದಾರೆ. ಧಾರವಾಡ ಶಹರದಲ್ಲಿ 5,351 ವಿದ್ಯಾರ್ಥಿಗಳ ನೋಂದಣಿ ಪೈಕಿ 5,254 ಪರೀಕ್ಷೆಗೆ ಹಾಜರಾಗಿದ್ದು, 97 ಗೈರಾಗಿದ್ದಾರೆ. ಧಾರವಾಡ ಗ್ರಾಮೀಣದಲ್ಲಿ 3,830 ವಿದ್ಯಾರ್ಥಿಗಳ ಪೈಕಿ 3802 ಹಾಜರಾಗಿದ್ದು, 28 ಗೈರಾಗಿದ್ದಾರೆ. ಹುಬ್ಬಳ್ಳಿ ಗ್ರಾಮೀಣದಲ್ಲಿ 3,731 ವಿದ್ಯಾರ್ಥಿಗಳ ನೋಂದಣಿ ಪೈಕಿ 3697 ಹಾಜರು, 34 ಗೈರಾಗಿದ್ದಾರೆ. ಕಲಘಟಗಿ ತಾಲೂಕಿನಲ್ಲಿ 2,564 ವಿದ್ಯಾರ್ಥಿಗಳ ಪೈಕಿ 2,523 ಹಾಜರು, 41 ಗೈರಾಗಿದ್ದಾರೆ. ಕುಂದಗೋಳದಲ್ಲಿ 1,974 ವಿದ್ಯಾರ್ಥಿಗಳ ಪೈಕಿ 1,945 ಹಾಜರು, 29 ಗೈರಾಗಿದ್ದಾರೆ. ನವಲಗುಂದದಲ್ಲಿ 2,503 ವಿದ್ಯಾರ್ಥಿಗಳ ಪೈಕಿ 2,472 ಹಾಜರು, 31 ಗೈರಾಗಿದ್ದಾರೆ. ಒಟ್ಟು 28,749 ವಿದ್ಯಾರ್ಥಿಗಳು ಗಣಿತ ಪರೀಕ್ಷೆಗೆ ನೋಂದಣಿ ಮಾಡಿದ್ದು ಈ ಪೈಕಿ 28,302 ಪರೀಕ್ಷೆಗೆ ಹಾಜರಾಗಿದ್ದರು. 447 ಗೈರಾಗಿದ್ದರು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಇನ್ನು, ಜಿಪಂ 3ನೇ ಮಹಡಿಯಲ್ಲಿ ಸ್ಥಾಪಿಸಿರುವ ಪರೀಕ್ಷಾ ಕೇಂದ್ರ ಹಾಗೂ ಪರೀಕ್ಷಾ ಕೊಠಡಿಗಳ ನೇರ ವೀಕ್ಷಣೆಗೆ ಸ್ಥಾಪಿಸಿರುವ ಜಿಲ್ಲಾ ವೆಬ್‌ಕಾಸ್ಟಿಂಗ್ ಕೇಂದ್ರಕ್ಕೆ ಸೋಮವಾರ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ ದಿಢೀರ್ ಭೇಟಿ, ಪರೀಕ್ಷಾ ಕೊಠಡಿಗಳ ಲೈವ್ ಸ್ಟ್ರೀಮಿಂಗ್ ವೀಕ್ಷಿಸಿದರು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ನಿಯಮಾನುಸಾರ ಸುಸೂತ್ರವಾಗಿ ಪರೀಕ್ಷೆಗಳು ನಡೆದಿರುವ ಕುರಿತು ಖಚಿತಪಡಿಸಿಕೊಂಡರು. ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಶಾಂತತೆ, ಶಿಸ್ತು ಇರುವಂತೆ ನೋಡಿಕೊಳ್ಳಲು ಪರೀಕ್ಷಾ ಕೇಂದ್ರಗಳ ಮುಖ್ಯ ಪರೀಕ್ಷಾಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸೂಚಿಸಿದರು.