ಚಿಕ್ಕಮಕ್ಕಳಲ್ಲೂ ಸಕ್ಕರೆ ಕಾಯಿಲೆ ಆತಂಕಕಾರಿ: ಡಾ। ಬನ್ಸಿಸಾಬ್‌

| Published : May 26 2024, 01:43 AM IST / Updated: May 26 2024, 06:48 AM IST

ಚಿಕ್ಕಮಕ್ಕಳಲ್ಲೂ ಸಕ್ಕರೆ ಕಾಯಿಲೆ ಆತಂಕಕಾರಿ: ಡಾ। ಬನ್ಸಿಸಾಬ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಕ್ಕರೆ ಕಾಯಿಲೆ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ

  ಬೆಂಗಳೂರು :  ಚಿಕ್ಕಮಕ್ಕಳಲ್ಲೂ ಸಕ್ಕರೆ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರ ಎಂದು ಅಹಮದಬಾದ್‌ ಆರ್‌ಎಸ್‌ಎಸ್‌ಡಿಐ ಮಾಜಿ ಅಧ್ಯಕ್ಷ ಡಾ। ಬನ್ಸಿಸಾಬ್ ಹೇಳಿದ್ದಾರೆ.

ಶನಿವಾರ ಇಲ್ಲಿನ ಬಸವೇಶ್ವರ ನಗರದ ಡಾ। ಅರವಿಂದ ಡಯಾಬಿಟೀಸ್ ಸೆಂಟರ್ ಏರ್ಪಡಿಸಿದ್ದ ಸಕ್ಕರೆ ಕಾಯಿಲೆ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಮಿತ ಆಹಾರ, ನಿಯಮಿತ ವ್ಯಾಯಾಮ, ತೂಕ ಇಳಿಸುವುದು, ಕುರುಕಲು ತಿಂಡಿಗೆ ಕಡಿವಾಣ ಹಾಕುವುದು ಸಕ್ಕರೆ ಕಾಯಿಲೆ ತಡೆಗೆ ಉತ್ತಮ ವಿಧಾನವಾಗಿದೆ. ಚಿಕ್ಕಮಕ್ಕಳಲ್ಲಿ ಸಕ್ಕರೆ ಕಾಯಿಲೆ ಕಾಣಿಸಿಕೊಂಡಾಗ ಪಾಲಕರು ಮಗುವಿನ ಆಹಾರ ಹಾಗೂ ಬೆಳವಣಿಗೆ ಬಗ್ಗೆ ಗಮನವಹಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ಅರವಿಂದ್ ಡಯಾಬಿಟೀಸ್ ಸೆಂಟರ್‌ ಅಧ್ಯಕ್ಷ ಡಾ। ಅರವಿಂದ ಜಗದೀಶ್ ಮಾತನಾಡಿದರು.