ಮಧುಮೇಹಿಗಳು ಪಾದಗಳ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ

| Published : Nov 18 2024, 12:16 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮಧುಮೇಹಿಗಳು ಪಾದಗಳ ನಿರ್ಲಕ್ಷ್ಯ ಮಾಡಬಾರದು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೋಟೆಣ್ಣವರ ಹೇಳಿದರು. ನಗರದಲ್ಲಿ ವಿಶ್ವಮಧುಮೇಹ ದಿನಾಚರಣೆ ಅಂಗವಾಗಿ ವಿಭಾಗದ ವತಿಯಿಂದ ಮತ್ತು ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಸಹಯೋಗದಲ್ಲಿ ಉಚಿತ ಮಧುಮೇಹ ಪಾದರೋಗಗಳ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಧುಮೇಹಿಗಳು ಪಾದಗಳ ನಿರ್ಲಕ್ಷ್ಯ ಮಾಡಬಾರದು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೋಟೆಣ್ಣವರ ಹೇಳಿದರು. ನಗರದಲ್ಲಿ ವಿಶ್ವಮಧುಮೇಹ ದಿನಾಚರಣೆ ಅಂಗವಾಗಿ ವಿಭಾಗದ ವತಿಯಿಂದ ಮತ್ತು ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಸಹಯೋಗದಲ್ಲಿ ಉಚಿತ ಮಧುಮೇಹ ಪಾದರೋಗಗಳ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ, ದೀರ್ಘಕಾಲೀನ ಸಮಸ್ಯೆಗಳಾದ ರೆಟಿನೋಪತಿ(ದೃಷ್ಟಿಹೀನತೆ), ನೆಫ್ರೋಪತಿ(ಕಿಡ್ನಿ ತೊಂದರೆ) ಮತ್ತು ನ್ಯೂರೋಪತಿ( ನರಗಳ ದೌರ್ಬಲ್ಯ)ಗಳಿಂದ ಬಳಲಬೇಕಾಗುತ್ತದೆ. ನರಗಳ ದೌರ್ಬಲ್ಯತೆಯಿಂದ ಸ್ಪರ್ಶ ಜ್ಞಾನ ಕಳೆದುಕೊಳ್ಳಬೇಕಾಗುತ್ತದೆ. ಕಾಲುಗಳು ಶಕ್ತಿಹೀನವಾಗಿ, ಚರ್ಮ ಕೂಡ ಒಣಗಬಹುದು. ಅಲ್ಲದೇ, ಸೋಂಕಿನ ಸಾಧ್ಯತೆ ಹೆಚ್ಚಾಗಿರುವುದರಿಂದ ಮಧುಮೇಹ ರೋಗಿಗಳು ಎಚ್ಚರಿಕೆ ವಹಿಸಬೇಕಾಗಿದೆ. ಪ್ರತಿ ವರ್ಷ ಸರಾಸರಿ ಶೇ. 15 ರಷ್ಟು ಮಧುಮೇಹಿಗಳು ಪಾದದ ಸಮಸ್ಯೆಯಿಂದ ಬಳಲುತ್ತಾರೆ. ಪಾದಗಳ ನಿರ್ಲಕ್ಷ್ಯ ವಹಿಸಿದರೆ ಪಾದ ಕಾಲನ್ನು ಕಳೆದುಕೊಂಡು ಅಂಗವಿಕಲತೆ ಉಂಟಾಗಬಹುದು ಎಂದು ಎಚ್ಚರಿಕೆ ನೀಡಿದರು. ಬಿ.ಎಲ್.ಡಿ.ಇ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ಮಾತನಾಡಿ, ಮಧುಮೇಹಿಗಳು ನಿಯಮಿತವಾಗಿ ಪಥ್ಯಾಹಾರ ಸೇವನೆ ಮಾಡಬೇಕು. ನಿಯಮಿತವಾಗಿ ವ್ಯಾಯಾಮ, ಔಷಧಿ ಸೇವನೆ ಮತ್ತು ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಬಿ.ಎಲ್.ಡಿ.ಇ. ಆಸ್ಪತ್ರೆಯಲ್ಲಿ ಮಧುಮೇಹಿಗಳಿಗೆ ಅವಶ್ಯವಿರುವ ಎಲ್ಲ ತಜ್ಞ ವೈದ್ಯರು ಮತ್ತು ಚಿಕಿತ್ಸೆ ಸೌಕರ್ಯಗಳು ಲಭ್ಯವಿದ್ದು ವಿಜಯಪುರ ಜಿಲ್ಲೆ ಮತ್ತು ಸುತ್ತಮುತ್ತಲಿನ ಜನರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಡೀನ್ ಫ್ಯಾಕಲ್ಟಿ ಆಫ್ ಮೆಡಿಸಿನ್ ಡಾ.ತೇಜಸ್ವಿನಿ ವಲ್ಲಭ, ಉಪಪ್ರಾಚಾರ್ಯ ಡಾ. ಎಂ.ಬಿ.ಪಾಟೀಲ, ವಿಜಯಪುರ ಜಿಲ್ಲಾ ಶಸ್ತ್ರಚಿಕಿತ್ಸಕರ ಸಂಘದ ಕಾರ್ಯದರ್ಶಿ ಡಾ.ರಮಾಕಾಂತ ಬಳೂರಕರ, ಪ್ರಾಧ್ಯಾಪಕಿ ಡಾ.ವಿಜಯಾ ಪಾಟೀಲ, ಸಹಪ್ರಾಧ್ಯಾಪಕ ಡಾ ದೀಪಕ ಚವ್ಹಾಣ, ಡಾ. ಸಂಜೀವ ರಾಠೋಡ, ಡಾ. ಪ್ರದೀಪ ಜಾಜು, ಡಾ.ಮಂಜುನಾಥ ಸಾವಂತ, ಡಾ.ವೀಣಾ ಗಂಟೆಪ್ಪಗೋಳ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಾದ ಡಾ. ಈಶ್ವರ, ಡಾ.ಶ್ರೀಯಾ, ಡಾ.ಸ್ಮಿತ್ ಉಪಸ್ಥಿತರಿದ್ದರು.