ರೈತರೊಂದಿಗೆ ಸಂವಾದ ಕಾರ್ಯಕ್ರಮ

| Published : Dec 23 2023, 01:46 AM IST / Updated: Dec 23 2023, 01:47 AM IST

ಸಾರಾಂಶ

ಗದಗ ನಗರದ ಎಪಿಎಂಸಿ ಯಾರ್ಡ್‌ನಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಅನ್ನದಾತ ರೈತರ ದಿನಾಚರಣೆಯ ಅಂಗವಾಗಿ ರೈತರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ರೈತ ದಿನಾಚರಣೆ ಅಂಗವಾಗಿ ಗದಗದಲ್ಲಿ ಕಾರ್ಯಕ್ರಮಗದಗ: ನಗರದ ಎಪಿಎಂಸಿ ಯಾರ್ಡ್‌ನಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಅನ್ನದಾತ ರೈತರ ದಿನಾಚರಣೆಯ ಅಂಗವಾಗಿ ರೈತರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸೊರಟೂರ ಗ್ರಾಮದ ಪ್ರಗತಿಪರ ರೈತರಾದ ಭದ್ರೇಶ ಕುಸ್ಲಾಪುರ ಹಾಗೂ ಹಿರಿಯ ರೈತ ರಾಮಣ್ಣ ಕಮ್ಮಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾದೇಶಿಕ ವ್ಯವಹಾರ ಕಚೇರಿಯಲ್ಲಿ ಇಂತಹ ಅನ್ನದಾತ ರೈತರ ದಿನಾಚರಣೆ ನಿಮಿತ್ತ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದು ನಮ್ಮ ಜಿಲ್ಲೆಯ ಎಲ್ಲಾ ರೈತರಿಗೆ ಹರ್ಷ ತಂದಿದೆ. ರೈತರು ಬ್ಯಾಂಕಿನೊಂದಿಗೆ ವ್ಯವಹರಿಸಲು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಟ್ಟ ವ್ಯವಸ್ಥಾಪಕ ನಿರ್ದೇಶಕ ಮಹಾದೇವಸ್ವಾಮಿ ಅವರಿಗೆ ರೈತರು, ರೈತ ಮುಖಂಡರು, ರೈತ ಸಂಘಟನೆಗಳ ಪರವಾಗಿ ತುಂಬ ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.

ಬ್ಯಾಂಕಿನ ನಿರ್ದೇಶಕ ಮಹಾದೇವಸ್ವಾಮಿ ಮಾತನಾಡಿ, ಸಂಕಷ್ಟದಲ್ಲಿರುವ ರೈತರು ಬ್ಯಾಂಕಿನೊಂದಿಗೆ ನಿರ್ಭಯವಾಗಿ ತಮ್ಮ ಯಾವುದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ನಮ್ಮ ಬ್ಯಾಂಕ್ ಅಧಿಕಾರಿಗಳು ಸದಾ ರೈತರಿಗೆ ಮಾಹಿತಿ ಒದಗಿಸಲು ಸಿದ್ಧರಿರುತ್ತಾರೆ ಎಂದು ತಿಳಿಸಿದರು.

ಈ ವೇಳೆ ನಡೆದ ಸಂವಾದದಲ್ಲಿ ರೈತರಿಗೆ ಹೈನುಗಾರಿಕೆ, ಬೆಳೆಸಾಲ, ಕೃಷಿ ಉಪಕರಣಗಳು, ಯಂತ್ರೋಪಕರಣಗಳ ಖರೀದಿಗೆ ಬ್ಯಾಂಕಿನೊಂದಿಗೆ ಸಿಗಬಹುದಾದ ಸೌಲಭ್ಯಗಳನ್ನು ಸಂವಾದ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧಿಕಾರಿಗಳು ವಿವರಿಸಿ, ರೈತರ ಕೆಲವೊಂದು ಪ್ರಶ್ನೆಗಳಿಗೆ ಉತ್ತರವನ್ನು ನೀಡಿದರು.

ಗುರಣ್ಣ ಕಲಕೇರಿ, ಎಫ್.ಎಸ್.ಪಾಟೀಲ, ವಿರೂಪಾಕ್ಷಗೌಡ ಮಾದಿಗೌಡರ, ರಾಜಶೇಖರ ಪರಮಣ್ಣವರ, ಸುನೀಲ ಕುಂದಗೋಳ, ಪ್ರವೀಣ ಮಸಗಿ, ಸಕ್ಕೂಬಾಯಿ ಮಸಗಿ, ನಾಗರಾಜ ಅಡವಿ, ಸೃಜನ, ಸುಧೀಂದ್ರ ಸೇರಿದಂತೆ ಬ್ಯಾಂಕಿನ ಆಡಳಿತ ಸಿಬ್ಬಂದಿ ವರ್ಗದವರು ಇದ್ದರು. ಶಿವಾನಂದ ಪೊಶೆಟೆ ಹಾಗೂ ಮಹಾಂತೇಶ.ಕೆ ಸ್ವಾಗತಿಸಿದರು. ಸುಪ್ರೀಯಾ ದೇಶಪಾಂಡೆ ನಿರೂಪಿಸಿದರು.