ದಲಿತರ ಭೂಮಿಗಳನ್ನು ಡಿಐಸಿಸಿಐ ರಕ್ಷಿಸಬೇಕು: ಬಸವಂತಪ್ಪ

| Published : Apr 20 2025, 01:54 AM IST

ದಲಿತರ ಭೂಮಿಗಳನ್ನು ಡಿಐಸಿಸಿಐ ರಕ್ಷಿಸಬೇಕು: ಬಸವಂತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರಮಟ್ಟದಲ್ಲಿ ದಲಿತ ಕೈಗಾರಿಕೋದ್ಯಮಿಗಳ ವಾಣಿಜ್ಯ ಮಂಡಳಿ ಹೆಮ್ಮರವಾಗಿ ಬೆಳೆದಿದೆ. ರಾಜ್ಯ ಸರ್ಕಾರಗಳು ಅನೇಕ ಕೈಗಾರಿಕಾ ಪ್ರದೇಶಗಳಲ್ಲಿ ಸೈಟ್ ಮಾಡುತ್ತಿದೆ. ಸಬ್ಸಿಡಿ 75% ಕೊಡುತ್ತಿದ್ದು, ಅದರ ಉಪಯೋಗ ಪಡೆಯಬೇಕು ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದ್ದಾರೆ.

- ದಲಿತ ಕೈಗಾರಿಕೋದ್ಯಮಿಗಳ ವಾಣಿಜ್ಯ ಮಂಡಳಿ ನೂತನ ಕಚೇರಿ ಉದ್ಘಾಟನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ರಾಷ್ಟ್ರಮಟ್ಟದಲ್ಲಿ ದಲಿತ ಕೈಗಾರಿಕೋದ್ಯಮಿಗಳ ವಾಣಿಜ್ಯ ಮಂಡಳಿ ಹೆಮ್ಮರವಾಗಿ ಬೆಳೆದಿದೆ. ರಾಜ್ಯ ಸರ್ಕಾರಗಳು ಅನೇಕ ಕೈಗಾರಿಕಾ ಪ್ರದೇಶಗಳಲ್ಲಿ ಸೈಟ್ ಮಾಡುತ್ತಿದೆ. ಸಬ್ಸಿಡಿ 75% ಕೊಡುತ್ತಿದ್ದು, ಅದರ ಉಪಯೋಗ ಪಡೆಯಬೇಕು ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.

ನಗರದ ನಿಟ್ಟುವಳ್ಳಿಯಲ್ಲಿ ಶನಿವಾರ ದಲಿತ ಕೈಗಾರಿಕೋದ್ಯಮಿಗಳ ವಾಣಿಜ್ಯ ಮಂಡಳಿ (ಡಿಐಸಿಸಿಐ) ಜಿಲ್ಲಾ ಪ್ರಧಾನ ಕಚೇರಿ ಉದ್ಘಾಟಿಸಿ, ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಸ್ಸಿ- ಎಸ್ಟಿ ಹಣವನ್ನು ದಲಿತ ಅಭಿವೃದ್ಧಿ ನಿಗಮಗಳ ಮೂಲಕ ಹಂಚಿಕೆ ಆಗಬೇಕೆಂಬ ಬೇಡಿಕೆ ಮುಖ್ಯಮಂತ್ರಿ ಅವರಿಗೆ ಮಾಡಲಾಗಿದೆ. ದಲಿತರಿಗೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ. ಉತ್ತಮ ಕೈಗಾರಿಕಾ ಪ್ರದೇಶದಲ್ಲಿ ದಲಿತರಿಗೆ ಕೈಗಾರಿಕಾ ಸೈಟ್ ನೀಡಲು ಚರ್ಚೆ ನಡೆಸಲಾಗಿದೆ. ಹಣಕಾಸಿನ ತೊಂದರೆಯಿಂದ ಬಳಲುವ ದಲಿತ ಉದ್ಯಮಿಗಳಿಗೆ ಬಡ್ಡಿ ರಿಯಾಯಿತಿಗೆ ಒತ್ತಾಯಿಸಲಾಗಿದೆ. ಕೈಗಾರಿಕಾ ಉದ್ದೇಶಕ್ಕೆ ದಲಿತರ ಫಲವತ್ತಾದ ಭೂಮಿ ಕೈಗಾರಿಕೆಗೆ ವಶಪಡಿಸಿಕೊಳ್ಳಲು ನೀವು ತಡೆ ಹಾಕಬೇಕು. ಆ ನಿಟ್ಟಿನಲ್ಲಿ ಡಿಐಸಿಸಿಐ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಡಿಐಸಿಸಿಐ ರಾಜ್ಯಾಧ್ಯಕ್ಷ ಬೆಳ್ಳಿ ಗಂಗಾಧರ ಮಾತನಾಡಿ, ದಲಿತ ಕೈಗಾರಿಕೋದ್ಯಮಿಗಳ ವಾಣಿಜ್ಯ ಮಂಡಳಿ 2005ರಲ್ಲಿ ಪುಣೆಯಲ್ಲಿ ಪ್ರಾರಂಭವಾಯಿತು. ಇಡೀ ದೇಶದಲ್ಲಿ ದಲಿತರನ್ನು ಉದ್ಯಮಿಗಳನ್ನಾಗಿಸುವ, ಅವರ ಉದ್ಧಾರಕ್ಕಾಗಿ ದೇಶದೆಲ್ಲೆಡೆ ಶಾಖೆ ಪ್ರಾರಂಭಿಸಲಾಯಿತು. ಇದರ ಮುಂದುವರಿದ ಭಾಗವಾಗಿ 2012ರಲ್ಲಿ ಕರ್ನಾಟಕ ಶಾಖೆ ಪ್ರಾರಂಭವಾಗಿದ್ದು, ಇಂದು 2500 ಜನ ಉನ್ನತ ಉದ್ಯಮಿಗಳಿದ್ದಾರೆ. ಮಂಡಳಿಯಲ್ಲಿ ಇಂದು 3500 ಸದಸ್ಯರಿದ್ದಾರೆ. ಎಲ್ಲರೂ ದಲಿತ ಉದ್ಯಮಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕಾಗಿದೆ ಎಂದರು.

ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯಡಾ.ಎಂ.ಮಂಜಣ್ಣ, ಪತ್ರಕರ್ತ ಬಸವರಾಜು ದೊಡ್ಡಮನಿ, ಡಿಐಸಿಸಿಐ ಬುಡಕಟ್ಟು ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಡಾ.ರಾಜಾನಾಯಕ, ಕರ್ನಾಟಕ ಬ್ಯಾಂಕ್ ಶಾಖಾ ವ್ಯವಸ್ಥಾಪಕ ರಾಕೇಶ್ ಶಾನುಭೋಗ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಂಜುನಾಥ ಕುಂದುವಾಡ, ಮಹಾಂತೇಶ, ಡಿಐಸಿಸಿಐ ಜಿಲ್ಲಾಧ್ಯಕ್ಷ ಮಂಜುನಾಥ್ ವೈ.ಕಬ್ಬೂರು, ಜಿಲ್ಲಾ ಉಪಾಧ್ಯಕ್ಷ ಸುರೇಶ ಬಿ. ಗೋಶಾಲೆ ಇನ್ನಿತರ ಸದಸ್ಯರು ಹಾಜರಿದ್ದರು.

- - -

-19ಕೆಡಿವಿಜಿ36.ಜೆಪಿಜಿ:

ದಾವಣಗೆರೆಯಲ್ಲಿ ಶನಿವಾರ ದಲಿತ ಕೈಗಾರಿಕೋದ್ಯಮಿಗಳ ವಾಣಿಜ್ಯ ಮಂಡಳಿ ನೂತನ ಕಚೇರಿಯನ್ನು ಶಾಸಕ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು.