ಸಾರಾಂಶ
ಸುದ್ಧಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ । ನಾನು ಆರಾಮಾಗಿದ್ದೇನೆ, ಮಾನಸಿಕವಾಗಿ ನೀವು ಕೆಟ್ಟು ಹೋಗಿದ್ದಿರಾ । ನನ್ನನ್ನು ಕೆದಕಲು ಹೋಗಬೇಡಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜಕಾರಣದಲ್ಲಿ ದ್ವೇಷ ಮಾಡುವುದಾದರೆ ಕುಮಾರಸ್ವಾಮಿಗೆ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನನ್ನನ್ನು ದ್ವೇಷ ಮಾಡಲು ನಾನು ಅವರ ಆಸ್ತಿ ತಿಂದಿದ್ದೀನಾ, ಅವರು ನನ್ನ ಆಸ್ತಿ ತಿಂದಿದ್ದಾರಾ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಭಾನುವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಾನು ಆರಾಮಾಗಿದ್ದೇನೆ, ಮಾನಸಿಕವಾಗಿ ನೀವು ಕೆಟ್ಟು ಹೋಗಿದ್ದಿರಾ, ಪ್ರತಿದಿನ ನಿದ್ದೆ ಗೆಟ್ಟಿರುವವರು ನೀವು, ನನ್ನನ್ನು ಕೆದಕಲು ಹೋಗಬೇಡಿ ಎಂದರು. ಸಿಂಹ ಒಬ್ಬಂಟಿಯಾಗೇ ಹೋರಾಟ ಮಾಡೋದು, ಯಾರ ಮೇಲಾದ್ರು ದಾಳಿ ಮಾಡೋದಿಕ್ಕೆ. ಅದಕ್ಕಾಗಿ ನಾನು ಡ್ಯಾಶ್....ಡ್ಯಾಶ್....ಡ್ಯಾಶ್.... ಎಂದು ಟ್ವಿಟ್ ಮಾಡಿದ್ದೇನೆ. ಆ ಡ್ಯಾಶ್ ಏನೆಂದು ಅವರಿಗೆ ಅರ್ಥ ಆಗುತ್ತೆ ಎಂದರು.
ವಿದ್ಯುತ್ ತಂತಿ ತುಳಿದು ತಾಯಿ ಮಗು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಈ ಸ್ಥಿತಿ ಆದ್ರೆ, ಹಳ್ಳಿಗಳಲ್ಲಿ ಪರಿಸ್ಥಿತಿ ಏನಾಗಿರಬಹುದು. ಇದು, ನಿಮ್ಮ ಆಡಳಿತ, ಸಮರ್ಥ ಆಡಳಿತ ನಡೆಸುತ್ತಿದ್ದೀರಾ, ಇನ್ನು ಬಹಳ ಸಮಯ ಇದೆ. ಬಹಳ ವಿಷಯಗಳಿವೆ ಎಂದು ಹೇಳಿದರು. ಕರೆಂಟ್ ಕಳ್ಳ ಎಂದು ಪೋಟೋ ಹಾಕಿದ್ರು, ಅಮಾಯಕ ಕೂಲಿ ಕೆಲಸ ಮಾಡಿರುವವನು ಮಾಡಿದ ತಪ್ಪು, ಇದು, ನನಗೆ ಗೊತ್ತಿಲ್ಲ ಅನ್ನಬಹುದಾಗಿತ್ತು. ಆದರೆ, ನಾನು ಹೇಳಿಲ್ಲ. ನನ್ನ ಮನೆಯಲ್ಲಿ ಆಗಿರುವ ತಪ್ಪು, ಇದಕ್ಕೆ ವಿಷಾದ ವ್ಯಕ್ತಪಡಿಸಿದ್ದೇನೆ. ತಪ್ಪು ಮಾಡಿದ್ದರೆ ಗಲ್ಲಿಗೆ ಏರಿಸಿ ಎಂದಿದ್ದಾರೆ. ಈ ದೇಶದ ವ್ಯವಸ್ಥೆಯಲ್ಲಿ ಅವರಿಗೆ ಗಲ್ಲಿಗೆ ಏರಿಸಲು ಆಗುತ್ತಾ ಎಂದರು.ಲುಲು ಮಾಲ್ ಬಳಿ ಇರುವ ಶೋಭಾ ಅಪಾರ್ಟ್ ಮೆಂಟ್‌ನಲ್ಲಿ ಬೆಸ್ಕಾಂ ಎಂಡಿ ರಾಜೇಂದ್ರ ಚೋಳನ್ ವಾಸವಾಗಿದ್ದರು. ಆ ಅಪಾರ್ಟ್ ಮೆಂಟ್‌ಗೆ ಆರು ತಿಂಗಳಲ್ಲಿ ಎಷ್ಟು ಬಿಲ್ ಬಂತು ಕೇಳಿ ಎಂದು ಹೇಳಿದರು. ಮೂರು ವರ್ಷದಿಂದ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿಗಳಿಗೆ ಚುನಾವಣೆ ನಡೆದಿಲ್ಲ ಸಿಇಒ ನೇತೃತ್ವದಲ್ಲಿಯೇ ಅಧಿಕಾರ ನಡೆಯುತ್ತಿದೆ. ಯಾವ ಕಂಪನಿಯಿಂದ ಎಷ್ಟು ಹಣ ಬಂದಿದೆ ಎಂದು ಪಟ್ಟಿ ಇದೆಯಾ ಎಂದು ಕೇಳಿದ್ದೇನೆ. ಶಾಲಾ ಕಟ್ಟಡ ದುರಸ್ತಿಗೆ 2.50 ಲಕ್ಷ, ಇದು ಗತಿಗೆಟ್ಟ ಸರ್ಕಾರ, ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪ ಮಾಡುತ್ತೇನೆ ಎಂದರು. ಅವರು ವಕೀಲರು, ನಾನು ಅಡ್ವಕೇಟ್ ಅಲ್ಲ, ಅವರು ಕಾನೂನು ಪದವೀಧರರು, ಕಾನೂನು ಕಾಲೇಜಿನಲ್ಲಿ ಉಪನ್ಯಾಸಕ ಆಗಿದ್ದವರು. ಲಾಯರ್ ಗಳಿಗೆ ಎಷ್ಟರ ಮಟ್ಟಿಗೆ ಪಾಠ ಹೇಳಿದ್ರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಈ ರಾಜ್ಯದಲ್ಲಿ ಎಷ್ಟು ಜನ ಆಶ್ರಯ ಕಮಿಟಿ ಅಧ್ಯಕ್ಷರಿಲ್ಲ, ಅವರಿಗೆ ಕೊಟ್ಟಿರುವ ಪವರ್ ಏನು, ನಿಮ್ಮ ಮಗನಿಗೆ ಕೊಟ್ಟಿರುವ ಪವರ್ ಏನು, ರಾಜಕೀಯ ಮಾಡುವುದಕ್ಕೆ ತಕರಾರು ಇಲ್ಲ, ಆದ್ರೆ, ಅವರು ಈ ಹಿಂದೆ ಎಂಎಲ್‌ಎ ಆಗಿದ್ದವರು ಕ್ಷೇತ್ರದ ಜನರ ಕಷ್ಟ, ನಷ್ಟ ನೋಡಲು ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದಿರೀ, ಆಶ್ರಯ ಸಮಿತಿ ಅಧ್ಯಕ್ಷರಿಗೆ ಕೆಡಿಪಿ ಸಭೆ ಮಾಡುವ ಅಧಿಕಾರ ಇದಿಯಾ ಎಂದು ಪ್ರಶ್ನಿಸಿದ್ದಾರೆ. ---- ಬಾಕ್ಸ್ ---ದತ್ತಮಾಲೆ ಏಕೆ ಹಾಕಬಾರದು ?ಹಾಕೋ ಸಮಯ ಬಂದ್ರೆ ದತ್ತ ಮಾಲೆ ಹಾಕ್ತೀನಿ, ದತ್ತಮಾಲೆ ಏಕೆ ಹಾಕಬಾರದು ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ದೇವರ ಕಾರ್ಯಕ್ರಮ, ಹಾಕುವ ಸಮಯ ಬಂದ್ರೆ ಹಾಕ್ತೀನಿ, ಕಾನೂನು ಬಾಹಿರವಾಗಿ ಅಲ್ಲ, ಆ ರೀತಿಯಲ್ಲಿ ಯಾವುದನ್ನೂ ಮಾಡಲ್ಲ, ನಮ್ಮ ಸಂಸ್ಕೃತಿ ಉಳಿಸಲು ಕಾನೂನಾತ್ಮಕವಾಗಿ ಏನು ಬೇಕಾದರೂ ಮಾಡುತ್ತೇನೆ ಎಂದರು. ಜಾತ್ಯತೀತತೆ ಅಂದ್ರೆ ಏನು ? ಅಲ್ಲೆಲ್ಲೋ ಹೋಗಿ ನಿಮ್ಮ ಮಂತ್ರಿ ಮಾತನಾಡಿದ್ದಾರಲ್ಲ, ನಮ್ಮ ಸಮಾಜದ ಖಾದರ್ ಅವರಿಗೆ ಬಿಜೆಪಿ ಶಾಸಕರು ಕೈ ಮುಗಿಯಬೇಕು ಅಂತ, ಇದು ಜಾತ್ಯತೀತ ಅಲ್ವಾ, ಇದು ಜಾತ್ಯಾತೀತತೇನಾ. ಜಾತ್ಯತೀತತೆ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ಸಿಗರಿಗೆ ಯಾವ ಯೋಗ್ಯತೆ ಇದೆ ಎಂದು ಪ್ರಶ್ನಿಸಿದರು. ----
19 ಕೆಸಿಕೆಎಂ 5ಚಿಕ್ಕಮಗಳೂರು ಸಮೀಪದ ಹೊಸಪೇಟೆ ಬಳಿ ಇರುವ ಹನಿ ಡ್ಯೂ ರೆಸಾರ್ಟ್‌ನಲ್ಲಿ ಎಚ್.ಡಿ. ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು.