ಪ್ರಧಾನಿ ನರೇಂದ್ರ ಮೋದಿ ಹೆಸರೇಳಲು ನಾಲಿಗೆ ಬಿದ್ದು ಹೋಗಿತ್ತೇ? ಮಾಜಿ ಶಾಸಕ ಎ.ಎಸ್.ಪಾಟೀಲ ಕಿಡಿ

| N/A | Published : Feb 09 2025, 01:32 AM IST / Updated: Feb 09 2025, 12:21 PM IST

ಪ್ರಧಾನಿ ನರೇಂದ್ರ ಮೋದಿ ಹೆಸರೇಳಲು ನಾಲಿಗೆ ಬಿದ್ದು ಹೋಗಿತ್ತೇ? ಮಾಜಿ ಶಾಸಕ ಎ.ಎಸ್.ಪಾಟೀಲ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದಲ್ಲಿ ಪ್ರಾರಂಭಗೊಂಡಿರುವ ದಿನದ 24 ಗಂಟೆ ಕುಡಿಯುವ ನೀರು ಸರಬರಾಜು ಕಾಮಗಾರಿ ಯೋಜನೆಯೂ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆ. ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಬಳಸಿ ಅಭಿನಂದನೆ ಸಲ್ಲಿಸಬೇಕಿತ್ತು.

 ಮುದ್ದೇಬಿಹಾಳ : ಪಟ್ಟಣದಲ್ಲಿ ಪ್ರಾರಂಭಗೊಂಡಿರುವ ದಿನದ 24 ಗಂಟೆ ಕುಡಿಯುವ ನೀರು ಸರಬರಾಜು ಕಾಮಗಾರಿ ಯೋಜನೆಯೂ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆ. ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಬಳಸಿ ಅಭಿನಂದನೆ ಸಲ್ಲಿಸಬೇಕಿತ್ತು. ಆದರೆ, ಕೇವಲ ರಾಜ್ಯ ಸರ್ಕಾರದ ಬಗ್ಗೆ ಹೇಳಿ ಜನರ ದಾರಿ ತಪ್ಪಿಸುವ ಶಾಸಕ ನಾಡಗೌಡರಿಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹೇಳಲು ನಾಲಿಗೆ ಬಿದ್ದುಹೊಗಿತ್ತೇ? ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಕಿಡಿಕಾರಿದರು. 

ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಎಂಎಲ್‌ಎ ಆಗಿದ್ದಾಗ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸುಮಾರು ₹ 4 ಸಾವಿರಕ್ಕಿಂತಲೂ ಅಧಿಕ ಮೊತ್ತದ ಅನುದಾನ ತರುವ ಮೂಲಕ ಅಭಿವೃದ್ಧಿ ಮಾಡಿದ್ದೇನೆ. ಅದರಂತೆ ಪಟ್ಟಣ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಜಲಧಾರೆ ಎಂಬ ವಿಶೇಷ ಯೋಜನೆ ಮೂಲಕ ಸುಮಾರು ₹ 854 ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆಗೆ ಅಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ನಾಲತವಾಡದಲ್ಲಿ ಅಧಿಕೃತ ಭೂಮಿ ಪೂಜೆ ನೆರವರಿಸಿದ್ದರು. 

ಅದರಲ್ಲಿ ತಾಳಿಕೋಟಿ ನಾಲತವಾಡ, ಮುದ್ದೇಬಿಹಾಳ ಪಟ್ಟಣಗಳ ಕಾಮಗಾರಿಗೆ ಟೆಂಡೆರ್ ಕರೆದಿರಲಿಲ್ಲ. ಕಾರಣ ಅಧಿಕಾರಿಗಳು ದಕ್ಷಿಣ ಕರ್ನಾಟಕಕ್ಕೊಂದು ನಿಯಮ ಹಾಗೂ ಉತ್ತರ ಕರ್ನಾಟಕಕ್ಕೊಂದು ನಿಯಮವೆಂಬಂತೆ ಅವೈಜ್ಞಾನಿಕ ಎಷ್ಟಿಮೇಟ್‌ (ಡಿಪಿಆರ್)ತಯಾರಿಸಿದ್ದರು. ಅದನ್ನು ನಾನು ತಿರಸ್ಕಾರ ಮಾಡಿ ಸಂಪೂರ್ಣ ವೈಜ್ಞಾನಿಕ ಗುಣಮಟ್ಟ ವಸ್ತುಗಳ ಬಳಕೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ, ಆದರೆ, ಅದು ಆಗಲಿಲ್ಲ ಎಂದರು.ಸದ್ಯ ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವೇ ಇಲ್ಲ. ಹಾಗಂತ ಕೇಂದ್ರ ಸರ್ಕಾರ ನೀಡಿದ ಶೇ.50 ಅನುದಾನದಲ್ಲಿಯೇ ಈ ಶಾಶ್ವತ ಕುಡಿಯುವ ನೀರು ಸರಬರಾಜ ಯೋಜನೆಗೆ ಬಳಸಿಕೊಂಡಿದ್ದರಿಂದ ಅಗತ್ಯ ಪೈಪ್‌ಗಳು ಗುಣಮಟ್ಟವಿಲ್ಲದೇ ಅವೈಜ್ಞಾನಿಕ ಕಾಮಗಾರಿ ನಡೆಸಲಾಗುತ್ತಿದೆ. 

ಇದರಿಂದ ಈ ಹಿಂದೆ ಹೇಗೆ ಪಟ್ಟಣದಲ್ಲಿ ಒಳಚರಂಡಿ ಯೋಜನೆ ಹಳ್ಳಹಿಡಿಯಿತೋ ಅದೇ ರೀತಿಯಲ್ಲಿ ಈ ಯೋಜನೆಯೂ ಅದೇ ರೀತಿ ಬಂದು ನಿಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ. ಸದ್ಯ ಗುತ್ತಿಗೆ ಪಡೆದವರು ಶಾಸಕ ನಾಡಗೌಡ ಸಂಬಂಧಿ ಸುರೇಶ ನಾಡಗೌಡ ಕಾಮಗಾರಿ ನಿರ್ವಹಣೆ ಮಾಡುತ್ತಿದ್ದಾನೆ. ಇವೆಲ್ಲ ಲೂಟಿ ಹೊಡೆಯಲೆಂದೇ ಇಲ್ಲಗೆ ಬಂದಿದ್ದಾರೆಯೇ ವಿನಃ ಇವರಿಗೆ ಜನರ ಬಗ್ಗೆ ಸ್ವಲ್ಪವೂ ಕಾಳಿಜಿ ಇಲ್ಲ. 

ನಾನು ಶಾಸಕನಾಗಿದ್ದಾಗ ಕಾಮಗಾರಿಗಳಿಗೆ ಕೆಲ ಪುರಸಭೆ ಸದಸ್ಯರು ಕಾಮಗಾರಿ ನಿಲ್ಲಿಸಿ ನನ್ನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಅವರೆಲ್ಲ ಎಲ್ಲಿ ಹೋಗಿದ್ದಾರೆ ಎಂದು ಹರಿಹಾಯ್ದರು.ಶಾಸಕ ಅಪ್ಪಾಜಿ ನಾಡಗೌಡ ಅವರು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಸ್ತೆಗಾಗಲಿ, ಕುಡಿಯುವ ನೀರು ಸೇರಿದಂತೆ ಯಾವುದೇ ಮತಕ್ಷೇತ್ರದ ಅಭಿವೃದ್ಧಿ ಒಂದು ನೈಯಾ ಪೈಸೆ ಅನುದಾನ ತರಲು ಸಾಧ್ಯವಾಗಿಲ್ಲ ಈ ಪುಣ್ಯಾತ್ಮನಿಂದ. ನಮ್ಮ ಅಧಿಕಾರದಲ್ಲಿನ ಯೋಜನೆಗೆ ತಮ್ಮ ಹೆಸರು ಹೇಳಿ ಹೊರಟಿದ್ದಾರೆ ಎಂದು ಟೀಕಿಸಿದರು.

ಈ ವೇಳೆ ಮುಖಂಡರಾದ ವಿಜಯಕುಮಾರ ಬಡಿಗೇರ, ಸಂಗಮ್ಮ ದೇವರಳ್ಳಿ, ಬಿಜೆಪ ತಾಲೂಕಾ ಮಂಡಲದ ಅಧ್ಯಕ್ಷ ಜಗದೀಶ ಪಂಪಣ್ಣವರ, ಸಂಜಯ ಬಾಗೇವಾಡಿ, ಪುರಸಭೆ ಸದಸ್ಯ ಚನ್ನಪ್ಪ ಕಂಠಿ, ಸದಾಶಿವ ಮಾಗಿ, ಗೌರಮ್ಮ ಹುನಗುಂದ ಸೇರಿದಂತೆ ಅನೇಕರು ಇದ್ದರು.