ಸಾರಾಂಶ
ಹಿರಿಯೂರು: ಗಣೇಶ ಚತುರ್ಥಿಯ ಪ್ರಯುಕ್ತ ಮಾರಾಟಕ್ಕೆ ತಂದಿದ್ದ ಗಣೇಶ ಮೂರ್ತಿಗಳಲ್ಲಿ ಒಂದು ಮೂರ್ತಿಯನ್ನು ಕಳವು ಮಾಡಿದ್ದಾರೆ ಎಂದು ವ್ಯಾಪಾರಿಯೊಬ್ಬರು ನಗರ ಠಾಣೆಗೆ ದೂರು ನೀಡಿದ್ದಾರೆ. ನಗರದ ರವಿಕುಮಾರ್ ಕುಂಬಾರ ಎನ್ನುವ ವ್ಯಾಪಾರಿಯು ಸುಮಾರು ವರ್ಷಗಳಿಂದ ಗಣಪತಿ ಮೂರ್ತಿ ಮಾರಾಟ ಮಾಡುತ್ತಿದ್ದು ಈ ವರ್ಷವೂ ಸಹ ನಗರದ ಪ್ರಧಾನ ರಸ್ತೆಯ ನೆಹರೂ ಸರ್ಕಲ್ ಹತ್ತಿರ ಗಣಪತಿಗಳನ್ನು ಮಾರಾಟ ಮಾಡುತ್ತಿದ್ದರು.

ಶಿರಾ ತಾಲೂಕಿನ ದೊಡ್ಡ ಆಲದಮರ ಹಾಗೂ ಹುಳಿಯಾರಿನಿಂದ ಎರಡು ಲೋಡ್ ಗಣೇಶ ಮೂರ್ತಿಗಳನ್ನು ತರಿಸಲಾಗಿದ್ದು ಸೆ.7 ರಂದು ಗಣಪತಿಗಳನ್ನು ಮಾರಾಟ ಮಾಡಿದ ನಂತರ 6 ದೊಡ್ಡ ಗಣಪತಿಗಳು ಉಳಿದಿದ್ದವು. ಅಂದು ರವಿಕುಮಾರ್ ಮನೆಗೆ ಹೋಗಿರುವುದನ್ನು ಗಮನಿಸಿದ ಕಳ್ಳರು ರಾತ್ರಿ 1 ಗಂಟೆ ಅಥವಾ 2 ಗಂಟೆಯ ಸಮಯದೊಳಗೆ ಸುಮಾರು ₹10000 ಬೆಲೆ ಬಾಳುವ ಗಣೇಶ ಮೂರ್ತಿಯನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಒಡವೆ ಅಡವಿಟ್ಟು ಹಣ ತಂದು ಗಣಪತಿ ಮಾರಾಟ ಮಾಡುತ್ತಿದ್ದು, ಇದರಿಂದ ನನಗೆ ಸುಮಾರು ಹತ್ತು ಸಾವಿರ ನಷ್ಟವಾಗಿದೆ. ಆದ್ದರಿಂದ ಕಳ್ಳತನ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ನ್ಯಾಯ ದೊರಕಿಸಿ ಕೊಡುವಂತೆ ಅವರು ನಗರ ಠಾಣೆಗೆ ಮನವಿ ಮಾಡಿದ್ದಾರೆ.