ಸಾರಾಂಶ
ಇದು 44 ಕೆಎಲ್ ಸಾಮರ್ಥ್ಯದ ಡೀಸೆಲ್ ಬಂಕ್ ಇದಾಗಿದೆ.
ಹೊನ್ನಾವರ: ತೆರಿಗೆ ರಹಿತ ಯಾಂತ್ರೀಕೃತ ದೋಣಿಗಳಿಗೆ ಡೀಸೆಲ್ ವಿತರಿಸುವ ಬಂಕ್ ನ್ನು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಿದರು.
ತಾಲೂಕಿನ ಕಾಸರಕೋಡ ಮೀನುಗಾರಿಕಾ ಬಂದರಿನಲ್ಲಿ ಶನಿವಾರ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ ಈ ಬಂಕ್ ಸ್ಥಾಪಿಸಲಾಗಿದೆ. ಇದು 44 ಕೆಎಲ್ ಸಾಮರ್ಥ್ಯದ ಡೀಸೆಲ್ ಬಂಕ್ ಇದಾಗಿದೆ. ಈ ಬಂಕ್ ಕರಾವಳಿ ಕರ್ನಾಟಕದಲ್ಲಿ ನಿಗಮದ 6ನೇ ಕರ ರಹಿತ ಡೀಸೆಲ್ ವಿತರಿಸುವ ಕೇಂದ್ರವಾಗಿದೆ. ಈ ಸಂದರ್ಭದಲ್ಲಿ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮಂಗಳೂರು ಅಧ್ಯಕ್ಷೆ ಮಾಲಾ ಬಿ. ನಾರಾಯಣ ರಾವ್, ಕಾಸರಕೋಡ ಗ್ರಾಪಂ ಅಧ್ಯಕ್ಷೆ ಮಾಂಕಾಳಿ ಪ್ರಕಾಶ ಹರಿಜನ, ಮೀನುಗಾರಿಕೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಕೆ. ಗಣೇಶ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಹೇಶಕುಮಾರ್ ಯು., ಮೀನುಗಾರಿಕೆ ಜಂಟಿ ನಿರ್ದೇಶಕ ಬಬಿನ್ ಬೋಪಣ್ಣ ಮತ್ತು ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ನಿಗಮದ ಹಿರಿಯ ಕಾರ್ಯ ನಿರ್ವಾಹಕರು ಸಿಬ್ಬಂದಿ ವರ್ಗದವರು ಮತ್ತು ಸ್ಥಳೀಯ ಮೀನುಗಾರರ ಮುಖಂಡರು ಇದ್ದರು.