ಪೆಟ್ರೋಲ್ ಹಾಗೂ ಡೀಸೆಲ್ ಖಾಲಿಯಾಗಿದೆ ಎಂಬ ನಾಮಫಲಕ ರಾರಾಜಿಸಿದರೆ, ಮತ್ತೆರಡು ಪೆಟ್ರೋಲ್ ಬಂಕ್‌ನಲ್ಲಿ ಸಂಜೆಯ ವೇಳೆಗೆ ಪೆಟ್ರೋಲ್ ಕೊರತೆ ಕಾಣಿಸಿಕೊಂಡ ಪರಿಣಾಮ ವಾಹನ ಸವಾರರು ಒಂದು ಪೆಟ್ರೋಲ್ ಬಂಕ್‌ನಿಂದ ಮತ್ತೊಂದು ಪೆಟ್ರೋಲ್ ಬಂಕ್‌ಗೆ ಅಲೆದರು ಅಂತಿಮವಾಗಿ ಎಲ್ಲಿಯು ಪೆಟ್ರೋಲ್ ದೊರೆಯದ ಕಾರಣ ಅರ್ಧ ರಸ್ತೆಯಲ್ಲಿ ಹಲವು ವಾಹನಗಳು ಪೆಟ್ರೋಲ್ ಖಾಲಿಯಾಗಿ ನಿಲುಗಡೆಯಾದ ಹಲವು ನಿದರ್ಶನಗಳು ಕಾಣುವಂತಾಯಿತು. ಮುಂಜಾನೆ ಖಾಲಿಯಾಗಿದ್ದ ಪೆಟ್ರೋಲ್ ಬಂಕ್ ಒಂದಕ್ಕೆ ಸಂಜೆ ವೇಳೆಗೆ ೮ ಸಾವಿರ ಲೀಟರ್ ಪೆಟ್ರೋಲ್ ನಾಲ್ಕು ಸಾವಿರ ಡೀಸೆಲ್ ತರಿಸುವ ಮೂಲಕ ಸಮಸ್ಯೆ ಅಲ್ಪ ಪ್ರಮಾಣದಲ್ಲಿ ಸುಧಾರಿಸಿದ್ದರಿಂದ ವಾಹನ ಸವಾರರು ನಿಟ್ಟುಸಿರು ಬಿಡುವಂತಾಯಿತು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಪಟ್ಟಣದ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಕೊರತೆ ಎದುರಾಗಿದ್ದರಿಂದ ಬಂಕ್ ಮುಂದೆ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.
ಪಟ್ಟಣದಲ್ಲಿರುವ ನಾಲ್ಕು ಪೆಟ್ರೋಲ್ ಬಂಕ್‌ಗಳ ಪೈಕಿ ಎರಡರಲ್ಲಿ ಸೋಮವಾರ ಮುಂಜಾನೆಯಿಂದಲೇ ಪೆಟ್ರೋಲ್ ಹಾಗೂ ಡೀಸೆಲ್ ಖಾಲಿಯಾಗಿದೆ ಎಂಬ ನಾಮಫಲಕ ರಾರಾಜಿಸಿದರೆ, ಮತ್ತೆರಡು ಪೆಟ್ರೋಲ್ ಬಂಕ್‌ನಲ್ಲಿ ಸಂಜೆಯ ವೇಳೆಗೆ ಪೆಟ್ರೋಲ್ ಕೊರತೆ ಕಾಣಿಸಿಕೊಂಡ ಪರಿಣಾಮ ವಾಹನ ಸವಾರರು ಒಂದು ಪೆಟ್ರೋಲ್ ಬಂಕ್‌ನಿಂದ ಮತ್ತೊಂದು ಪೆಟ್ರೋಲ್ ಬಂಕ್‌ಗೆ ಅಲೆದರು ಅಂತಿಮವಾಗಿ ಎಲ್ಲಿಯು ಪೆಟ್ರೋಲ್ ದೊರೆಯದ ಕಾರಣ ಅರ್ಧ ರಸ್ತೆಯಲ್ಲಿ ಹಲವು ವಾಹನಗಳು ಪೆಟ್ರೋಲ್ ಖಾಲಿಯಾಗಿ ನಿಲುಗಡೆಯಾದ ಹಲವು ನಿದರ್ಶನಗಳು ಕಾಣುವಂತಾಯಿತು. ಮುಂಜಾನೆ ಖಾಲಿಯಾಗಿದ್ದ ಪೆಟ್ರೋಲ್ ಬಂಕ್ ಒಂದಕ್ಕೆ ಸಂಜೆ ವೇಳೆಗೆ ೮ ಸಾವಿರ ಲೀಟರ್ ಪೆಟ್ರೋಲ್ ನಾಲ್ಕು ಸಾವಿರ ಡೀಸೆಲ್ ತರಿಸುವ ಮೂಲಕ ಸಮಸ್ಯೆ ಅಲ್ಪ ಪ್ರಮಾಣದಲ್ಲಿ ಸುಧಾರಿಸಿದ್ದರಿಂದ ವಾಹನ ಸವಾರರು ನಿಟ್ಟುಸಿರು ಬಿಡುವಂತಾಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.