ರಾಮನಗರ: ಸೇವೆ ಕಾಯಂ, ಮಾಸಾಶನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 25 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು ರಾಜ್ಯ ಸರ್ಕಾರ ಸ್ಪಂದಿಸದ ಕಾರಣ ಅ.16ರಂದು ಶುಕ್ರವಾರ ರಾಮನಗರದಿಂದ ವಿಧಾನಸೌಧದವರೆಗೆ ವಿಶೇಷಚೇತನರು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ
ರಾಮನಗರ: ಸೇವೆ ಕಾಯಂ, ಮಾಸಾಶನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 25 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು ರಾಜ್ಯ ಸರ್ಕಾರ ಸ್ಪಂದಿಸದ ಕಾರಣ ಅ.16ರಂದು ಶುಕ್ರವಾರ ರಾಮನಗರದಿಂದ ವಿಧಾನಸೌಧದವರೆಗೆ ವಿಶೇಷಚೇತನರು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ನವ ಕರ್ನಾಟಕ ಎಂಆರ್ ಡಬ್ಲ್ಯೂ, ವಿಆರ್ ಡಬ್ಲ್ಯೂ, ಯುಆರ್ ಡಬ್ಲ್ಯೂ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ರಾಜ್ಯ ಸಂಚಾಲಕ ಅನಿಲ್ ಕೆ.ಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕ ಆರ್.ಅಶೋಕ್ ಬೆಂಬಲದೊಂದಿಗೆ ವಿಧಾನಸೌಧವರೆಗೆ ಪಾದಯಾತ್ರೆ ನಡೆಸುತ್ತೇವೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ನಮ್ಮನ್ನು ದುರ್ಬಲರು ಅಂದುಕೊಂಡಿದೆ. ನಿಗದಿ ಪಡಿಸಿರುವ ಸ್ಥಳದಲ್ಲಿ ಪ್ರತಿಭಟನೆ ಮಾಡಲಷ್ಟೇ ಶಕ್ತರು ಎಂದು ಭಾವಿಸಿದಂತಿದೆ. ನಾವು ವಿಶೇಷ ಚೇತನರು ಹೌದು. ನಮಗೆ ಕಾಲ್ನಡಿಗೆಯಲ್ಲಿ ಸಾಗಲು ಆಗುವುದಿಲ್ಲ ನಿಜ. ಇದು ಬದುಕಿನ ಪ್ರಶ್ನೆಯಾಗಿರುವ ಕಾರಣ ಮಾಡು ಇಲ್ಲವೆ ಮಡಿ ಹೋರಾಟ ನಡೆಸುತ್ತೇವೆ. ಪ್ರತಿನಿತ್ಯ 10 ಕಿ.ಮೀ ದೂರ ಕ್ರಮಿಸಿ ವಿಧಾನಸೌಧ ತಲುಪುತ್ತೇವೆ ಎಂದರು.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಿಶೇಷಚೇತನರ ಅಹವಾಲು ಕೇಳಲು ಸಮಯವಿಲ್ಲ. ಪಾಪ ಅವರು ನಾಡಹಬ್ಬ ದಸರಾ ಮತ್ತು ಸಿಡಿ ಹಗರಣದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ನಾವುಗಳೇ ವಿಧಾನಸೌಧಕ್ಕೆ ಹೋಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇವೆ. ಆಗಲೂ ನಮ್ಮ ಬೇಡಿಕೆಗಳು ಈಡೇರದಿದ್ದರೆ ರಾಮನಗರದಲ್ಲಿಯೇ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ವಿಕಲಚೇತನರನ್ನು ಗುರುತಿಸಿ, ಅವರಿಗೆ ಸರ್ಕಾರದ ಸೌಲಭ್ಯಗಳು ತಲುಪುವಂತೆ ನಿರಂತರ 19 ವರ್ಷಗಳಿಂದ ಶ್ರಮಿಸುತ್ತಿರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಸೇವೆಯನ್ನು ಕಾಯಂಗೊಳಿಸಬೇಕು. ಅದೇ ರೀತಿ, ಕಳೆದ ಐದಾರು ತಿಂಗಳಿಂದ ಮಾಸಾಶನಕ್ಕಾಗಿ ಕಾಯುತ್ತಿರುವ ವಿಕಲಚೇತನರಿಗೆ ಗೌರವಯುತವಾಗಿ ಬದುಕಲು ಮಾಶಾಸನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಬಾಲಕೃಷ್ಣ ಕಾಟಾಚಾರಕ್ಕೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಿ, ಸಮಸ್ಯೆಗಳಿಗೆ ಪರಿಹಾರಕ್ಕೆ ಸರ್ಕಾರದೊಂದಿಗೆ ಚರ್ಚಿಸಿ ತಿಳಿಸುವುದಾಗಿ ಹೇಳಿ ಹೋದವರು, ಇತ್ತ ತಿರುಗಿಯೂ ನೋಡಿಲ್ಲ. ಪ್ರತಿಭಟನಾ ಸ್ಥಳದಲ್ಲಿ ಪ್ರತಿದಿನ ಹಾವು, ಚೇಳು ಕಾರ್ಯಕರ್ತರ ಮೈಮೇಲೆ ಬರುತ್ತಿವೆ. ಮಳೆ, ಚಳಿ ಎನ್ನದೇ ಇಪ್ಪತ್ತು ದಿನಗಳಿಂದ ಹೆಂಡತಿ, ಮಕ್ಕಳು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ತಂದೆ-ತಾಯಿ ಎಲ್ಲರನ್ನೂ ಬಿಟ್ಟು ಪ್ರತಿಭಟನೆಯಲ್ಲಿ ಕುಳಿತಿದ್ದೇವೆ. ಸರ್ಕಾರ ನಮ್ಮ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಅನಿಲ್ ಕಿಡಿಕಾರಿದರು.
ನಮಗೆ ಅಧಿಕಾರ ಬೇಡ, ನ್ಯಾಯ ಬೇಕು. ಸಂಘರ್ಷ ಬೇಡ, ಪರಿಹಾರ ಬೇಕು. ನಿರ್ಲಕ್ಷ್ಯ ಬೇಡ, ಮಾನವೀಯ ಸ್ಪಂದನೆ ಬೇಕು. ಪಾದಯಾತ್ರೆ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ನಂತರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದೇ ಹೋದಲ್ಲಿ ಅಥವಾ ಕಾಯಂಮಾತಿ ಕುರಿತು ಅಧಿಕೃತ ಆದೇಶ ಪತ್ರ ಹೊರಡಿಸುವವರೆಗೆ ಯಥಾಪ್ರಕಾರ ರಾಮನಗರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ಮುಂದುವರಿಸುತ್ತೇವೆ. ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಡಿ ಮೇಟಿ, ರಾಜ್ಯಾಧ್ಯಕ್ಷ ಫಕೀರ್ ಗೌಡ, ಪದಾಧಿಕಾರಿಗಳಾದ ಜಯಮ್ಮ, ಅಂಬರೀಷ್ , ಚಿಕ್ಕಮರಲೂರಯ್ಯ, ಹರೀಶ್, ನಟರಾಜ್ ಇತತರಿದ್ದರು.
ಬಾಕ್ಸ್ ................ವಿಶೇಷಚೇತನರ ಬೇಡಿಕೆಗಳೇನು ?
1. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧೀನದಲ್ಲಿ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯಕರ್ತರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ MRW/VRW/URW ಹಾಗೂ ರಾಜ್ಯ ಮತ್ತು ಜಿಲ್ಲಾ ಸಂಯೋಜಕರ ಸೇವೆಯನ್ನು ಕಾಯಂಗೊಳಿಸಬೇಕು.2. ಮಾಸಾಶನವನ್ನು 5,000 ರು.ವರೆಗೆ ಹೆಚ್ಚಿಸಬೇಕು.
3. ಐದಾರು ತಿಂಗಳುಗಳಿಂದ ತಡೆಹಿಡಿದಿರುವ ಮಾಸಾಶನ ಕೂಡಲೇ ಬಿಡುಗಡೆ ಮಾಡಬೇಕು.ಕೋಟ್ .............
ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬಾರದು. ನಾವು ಶಾಂತಿಯುತ, ಪ್ರಜಾಸತ್ತಾತ್ಮಕ ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ. ನಮ್ಮ ಹೋರಾಟದ ಉದ್ದೇಶ ಸರ್ಕಾರಕ್ಕೆ ತೊಂದರೆ ಕೊಡುವುದಲ್ಲ. ನಮ್ಮ ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ ಪಡೆಯುವುದಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಸಾವು-ನೋವು ಸಂಭವಿಸಿದರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ.- ಶಬರೀಶ್, ಜಿಲ್ಲಾಧ್ಯಕ್ಷರು, ನವ ಕರ್ನಾಟಕ ಎಂಆರ್ ಡಬ್ಲ್ಯೂ, ವಿಆರ್ ಡಬ್ಲ್ಯೂ, ಯುಆರ್ ಡಬ್ಲ್ಯೂ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘ
15ಕೆಆರ್ ಎಂಎನ್ 1.ಜೆಪಿಜಿರಾಮನಗರದಲ್ಲಿ ನವ ಕರ್ನಾಟಕ ಎಂಆರ್ ಡಬ್ಲ್ಯೂ, ವಿಆರ್ ಡಬ್ಲ್ಯೂ, ಯುಆರ್ ಡಬ್ಲ್ಯೂ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಸಂಚಾಲಕ ಅನಿಲ್ ಕೆ.ಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.