- ''''ನಮ್ಮ ಮ್ಯಾರೇಜ್.ಕಾಂ'''' ವೈವಾಹಿಕ ವೆಬ್‌ಸೈಟ್‌ ಉದ್ಘಾಟಿಸಿ ಎಸ್.ವಿ. ರಾಮಚಂದ್ರ

- - -

ಕನ್ನಡಪ್ರಭ ವಾರ್ತೆ ಜಗಳೂರು

ಇಂದಿನ ಆಧುನಿಕ ಯುಗದಲ್ಲಿ ಸುಲಭ ಮತ್ತು ಸುರಕ್ಷಿತವಾಗಿ ಸೂಕ್ತ ಜೀವನ ಸಂಗಾತಿಯನ್ನು ಹುಡುಕುವುದು ಪೋಷಕರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ವಿಶ್ವಾಸಾರ್ಹ ವೇದಿಕೆಯನ್ನು ಸೃಷ್ಟಿಸಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಹರ್ಷ ವ್ಯಕ್ತಪಡಿಸಿದರು.

​ತಾಲೂಕಿನ ಮರಿಕುಂಟೆ ಗ್ರಾಮದಲ್ಲಿ ತಂತ್ರಜ್ಞಾನದ ಹೊಸ ಆವಿಷ್ಕಾರದೊಂದಿಗೆ ರೂಪಿಸಲಾಗಿರುವ ''''ನಮ್ಮ ಮ್ಯಾರೇಜ್.ಕಾಂ'''' **(www.nammamarriage.com)** ಎಂಬ ನೂತನ ಡಿಜಿಟಲ್ ವೈವಾಹಿಕ ವೇದಿಕೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.


''''''''ನಮ್ಮ ಮ್ಯಾರೇಜ್.ಕಾಂ'''''''' ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗದೆ, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಕುಟುಂಬಗಳಿಗೂ ಅತ್ಯಂತ ಉಪಯುಕ್ತವಾಗಲಿದೆ. ನಮ್ಮ ಭಾಗದ ಜನರಿಗೆ ನಂಬಿಕಸ್ಥ ಮತ್ತು ಪಾರದರ್ಶಕ ಸೇವೆಯನ್ನು ನೀಡುವ ಮೂಲಕ ಈ ಸಂಸ್ಥೆಯು ಯಶಸ್ಸಿನ ಉತ್ತುಂಗಕ್ಕೇರಲಿ ಎಂದು ಶುಭ ಹಾರೈಸಿದರು.

ವಿಶ್ವಾಸಾರ್ಹತೆ- ಗೌಪ್ಯತೆಗೆ ಆದ್ಯತೆ:

​ಸಂಸ್ಥೆಯ ಪ್ರೊಪ್ರಿಯೇಟರ್‌ ಸುಮಂಗಳಮ್ಮ ಮಾತನಾಡಿ, ಇಂದಿನ ವೇಗದ ಜೀವನದಲ್ಲಿ ಕುಟುಂಬಗಳಿಗೆ ವಿಶ್ವಾಸಾರ್ಹ ಮತ್ತು ಸುರಕ್ಷಿತ ವೈವಾಹಿಕ ವೇದಿಕೆಯ ಅಗತ್ಯ ಹೆಚ್ಚಾಗಿದೆ. ನಮ್ಮ ಮ್ಯಾರೇಜ್.ಕಾಂ ಮೂಲಕ ಸಮಾಜದ ಪ್ರತಿ ಕುಟುಂಬಕ್ಕೂ ನಂಬಿಕೆ, ಪಾರದರ್ಶಕತೆ ಹಾಗೂ ಗೌಪ್ಯತೆಗೆ ಆದ್ಯತೆ ನೀಡುವ ಸೇವೆ ಒದಗಿಸುವುದು ಉದ್ದೇಶವಾಗಿದೆ ಎಂದರು.

ಉಚಿತ ನೋಂದಣಿ, ಪರಿಶೀಲಿತ *(Verified)* ಪ್ರೊಫೈಲ್‌ಗಳು ಹಾಗೂ ಸಮುದಾಯ ಆಧಾರಿತ ಹೊಂದಾಣಿಕೆಯ ಮೂಲಕ ಪ್ರತಿಯೊಬ್ಬರಿಗೂ ಸೂಕ್ತ ಜೀವನ ಸಂಗಾತಿ ಹುಡುಕಲು ನೆರವಾಗುವುದು ಸಂಕಲ್ಪವಾಗಿದೆ. ಕರ್ನಾಟಕದಿಂದ ಆರಂಭವಾದ ಈ ಸೇವೆಯನ್ನು ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಿಸುವ ಗುರಿ ಹೊಂದಿದ್ದೇವೆ. ಜೀವನ ಸಂಗಾತಿಯನ್ನು ಹುಡುಕುತ್ತಿರುವವರು ಹಾಗೂ ಅವರ ಕುಟುಂಬದವರು **www.nammamarriage.com** ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ **support@nammamarriage.com ** ಇಮೇಲ್ ಮೂಲಕ ಸಂಪರ್ಕಿಸಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು ಎಂದರು.

ಉಚಿತ ನೋಂದಣಿ:

ಯಾವುದೇ ಆರಂಭಿಕ ಶುಲ್ಕವಿಲ್ಲದೇ ವಧು-ವರರ ಮಾಹಿತಿ ನೋಂದಾಯಿಸಬಹುದು. ಫೋನ್ ಮತ್ತು ದಾಖಲೆಗಳ ಮೂಲಕ ಪರಿಶೀಲಿಸಿದ **(Verified)** ಸುರಕ್ಷಿತ ಖಾತೆಗಳು ಮಾತ್ರ ಲಭ್ಯ.ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಭಾವಚಿತ್ರಗಳಿಗೆ ಕಟ್ಟುನಿಟ್ಟಾದ ಭದ್ರತೆ. ಸಮುದಾಯ ಆಧಾರಿತ ಮ್ಯಾಚಿಂಗ್, ಸಹಾಯಕ **(Assisted)** ಮ್ಯಾಟ್ರಿಮೋನಿ ಸೇವೆ ಹಾಗೂ ಪ್ರೀಮಿಯಂ ಸದಸ್ಯತ್ವದ ಜೊತೆಗೆ ವೆಡ್ಡಿಂಗ್ ವೆಂಡರ್ ಸೇವೆಗಳೂ ಒಂದೇ ಸೂರಿನಡಿ ಸಿಗಲಿವೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ನಾಯ್ಕ್‌, ಮರಿಕುಂಟೆ ಗ್ರಾಮದ ಮುಖಂಡರು, ಗಣ್ಯರು ಉಪಸ್ಥಿತರಿದ್ದರು.

- - -

-22ಜೆಜಿಎಲ್‌3:

ಜಗಳೂರು ತಾಲೂಕಿನ ಮರಿಕುಂಟೆಯಲ್ಲಿ ನಮ್ಮ ಮ್ಯಾರೇಜ್.ಕಾಂ ಹೆಸರಿನ ಡಿಜಿಟಲ್ ವೈವಾಹಿಕ ವೇದಿಕೆಗೆ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಚಾಲನೆ ನೀಡಿದರು.