ತ್ವರಿತ ಸೇವೆಗಾಗಿ ಭೂದಾಖಲೆಗಳ ಡಿಜಿಟಲೀಕರಣ: ಶಾಸಕ ಜೆ.ಟಿ.ಪಾಟೀಲ

| Published : Jan 16 2025, 12:47 AM IST

ಸಾರಾಂಶ

3 ತಿಂಗಳ ಅವಧಿಯಲ್ಲಿ ಈ ಯೋಜನೆಯನ್ನು ಅಧಿಕಾರಿಗಳು ಸಿಬ್ಬಂದಿ ಹೆಚ್ಚಿನ ಕಾಳಜಿವಹಿಸಿ ಕೇವಲ 30 ದಿನಗಳಲ್ಲಿ ಮುಗಿಸಬೇಕು.

ಕನ್ನಡಪ್ರಭ ವಾರ್ತೆ ಬೀಳಗಿ

ಎಲ್ಲ ಭೂ ದಾಖಲೆಗಳ ಡಿಜಿಟಲೀಕರಣಗೊಳಿಸಿ ಹಳೆಯ ದಾಖಲೆಗಳ ಸಂರಕ್ಷಣೆ ಹಾಗೂ ಕಳುವಾಗಲು, ತಿದ್ದಲು ಅಸಾಧ್ಯವಾಗದಂತೆ ನೇರವಾಗಿ ನೀವೇ ಡಿಜಿಟಲ್ ಮಾಧ್ಯಮದಿಂದ ಭೂ ದಾಖಲೆ ಪಡೆದುಕೊಳ್ಳುವ ಸೌಲಭ್ಯವನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಇಲ್ಲಿನ ತಹಸೀಲ್ದಾರ್‌ ಕಚೇರಿಯಲ್ಲಿ ಬುಧವಾರ ಕಂದಾಯ, ಸರ್ವೇ ಹಾಗೂ ನೋಂದಣಿ ಇಲಾಖೆಗಳ ಭೂ ಸುರಕ್ಷಾ ಗಣಕೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ತಮ ಜನಪರ ಆಡಳಿತ, ನಿಮ್ಮ ಭೂ ಒಡೆತನಕ್ಕೊಂದು ಗ್ಯಾರಂಟಿ ಸಲುವಾಗಿ ತಾಲೂಕು ಕಚೇರಿ, ಸರ್ವೇ ಮತ್ತು ನೋಂದಣಿ ಇಲಾಖೆಗಳ ಹಳೆಯ ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಶಾಶ್ವತ ಡಿಜಿ ದಾಖಲೆಗಳಾಗಿ ಪರಿವರ್ತನೆ, ದಾಖಲೆಗಳನ್ನು ರೇಕಾರ್ಡ್ ರೂಂಗಳಿಂದ ಪಡೆದುಕೊಳ್ಳಲು ಇರುವ ತೊಂದರೆ ನಿವಾರಣೆ. ವಿಳಂಬ, ಅಡೆ ತಡೆಗಳನ್ನು ಆಲಿಸಿ, ತ್ವರಿತ ಆಡಳಿತ ಸೇವೆಯನ್ನು ಒದಗಿಸುವ ಪ್ರಯತ್ನ ಸರ್ಕಾರ ಮಾಡಿದ್ದು ಇದು ರೈತರಿಗೆ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಸರಳ ಆಡಳಿತ, ದಾಖಲೆ ಸುಭದ್ರ ಶಾಶ್ವತ, ತಂತ್ರಜ್ಞಾನದಿಂದ ನಿಮ್ಮ ಕೈಗೆ ಶಕ್ತಿ ಹಾಗೂ ಕಳೆಯಲು ಅಸಾಧ್ಯವಾಗಿ ಇಂತಹ ದಿಟ್ಟ ನಿರ್ಧಾರವನ್ನು ಸಿಎಂ ಮತ್ತು ಡಿಸಿಎಂ ರವರ ಗಮನಕ್ಕೆ ಕಂದಾಯ ಮಂತ್ರಿಗಳಾದ ಕಷ್ಣ ಬೈರೇಗೌಡ ಮನವರಿಕೆ ಮಾಡಿ ಜನರಿಗೆ ಹೆಚ್ಚಿನ ಅನುಕೂಲ ಮಾಡಿದ್ದಾರೆ. 3 ತಿಂಗಳ ಅವಧಿಯಲ್ಲಿ ಈ ಯೋಜನೆಯನ್ನು ಅಧಿಕಾರಿಗಳು ಸಿಬ್ಬಂದಿ ಹೆಚ್ಚಿನ ಕಾಳಜಿವಹಿಸಿ ಕೇವಲ 30 ದಿನಗಳಲ್ಲಿ ಮುಗಿಸಬೇಕು. ದಾಖಲೆಗಳ ಡಿಜಿಟಲ್ ಮಾಡುವ ಕೆಲಸದಲ್ಲಿ ರಾಜ್ಯದಲ್ಲಿಯೇ ಬೀಳಗಿ ತಾಲೂಕು ಮೊದಲನೇ ಸ್ಥಾನ ಪಡೆಯಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ವಿನೋದ ಹತ್ತಳ್ಳಿ ಮಾತನಾಡಿ, ಈಗಾಗಲೇ ಸರ್ಕಾರವು ದಾಖಲೆಗಳು ಸುರಕ್ಷತೆಗೆ ಮಹತ್ವದ ಹೆಜ್ಜೆ ಇಟ್ಟಿದೆ. ಇದರಿಂದ ಸಾರ್ವಜನಿಕರು ಹೆಚ್ಚಿನ ಅನುಕೂಲ. ಸ್ಕ್ಯಾನಿಂಗ್‌ ಮಾಡಲು 3 ಸ್ಕ್ಯಾನರ್‌ಗಳು, 6 ಕಂಪ್ಯೂಟರ್‌, 1 ಕಂಪ್ಯಾಟ್ಕರ್‌ ( ದಾಖಲೆಗಳ ಲಾಕರ್‌) ಇತರೆ ಸೌಲಭ್ಯ ಒದಗಿಸಿದೆ. ದಾಖಲೆ ಡಿಜಿಟಲೀಕರಣ ಗೊಳ್ಳುವುರಿಂದ ರೈತಾಪಿ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಶಾಸಕರ ನಿರ್ದೇಶನದಂತೆ ಈ ಕೆಲಸವನ್ನು ತ್ವರಿತವಾಗಿ ಮಾಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್‌ ಆನಂದ ಕೋಲಾರ, ಗ್ಯಾರಂಟಿ ಅನುಷ್ಠಾನ ಯೋಜನೆ ತಾಲೂಕಾಧ್ಯಕ್ಷ ಅಣವೀರಯ್ಯ ಪ್ಯಾಟಿಮಠ, ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲಪ್ಪ ಕಾಳಗಿ, ಕಾಂಗ್ರೆಸ್ ಅಧ್ಯಕ್ಷ ಹಣಮಂತ ಕಾಖಂಡಕಿ, ಸಿದ್ದು ಸಾರಾವರಿ, ಸಿಡಿಪಿಒ ಬಿ.ಜಿ.ಕವಟೇಕರ, ಕೃಷಿ ಅಧಿಕಾರಿ ಪಾಟೀಲ, ಬಿ.ಪಿ.ಪಾಟೀಲ,ಸಂಗಪ್ಪ ಕದಂಗಲ್, ಪಪಂ ಸದಸ್ಯ ಪಡಿಯಪ್ಪ ಕರಿಗಾರ, ರಾಜು ಬೋರ್ಜಿ, ಶಿವಾನಂದ ಮಾದರ, ಬಸವರಾಜ ಹಳ್ಳದಮನಿ, ಕಾಶಿಂ ಅಲಿ ಗೋಠೆ, ಬವಸರಾಜ ಬಗಲಿ ಸೇರಿದಂತೆ ಇತರರು ಇದ್ದರು.