ಸಾರಾಂಶ
ಗಣೇಶೋತ್ಸವಕ್ಕೆ ಚಾಲನೆ ।
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಹನ್ನೆರಡನೇ ವರ್ಷದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಅಂಗ ವಾಗಿ ನಗರದ ಬಸವನಹಳ್ಳಿ ಸಮೀಪದ ಓಂಕಾರೇಶ್ವರ ದೇವಾಲಯ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯರು, ಆರ್‌ಎಸ್‌ಎಸ್ ಮುಖಂಡರು ಹಾಗೂ ಗಣಪತಿ ಸಮಿತಿ ಅಧ್ಯಕ್ಷರ ಸಹಯೋಗದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಶನಿವಾರ ಗಣೇಶೋತ್ಸವಕ್ಕೆ ಚಾಲನೆ ನೀಡಲಾಯಿತು.ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಭಾರತೀಯ ಇತಿಹಾಸದಲ್ಲಿ ಆದಿದೈವ, ಸಕಲ ವಿಘ್ನಗಳ ನಿವಾರಕ ನೆಂದು ಗಣಪತಿಯನ್ನು ಸಾವಿರಾರು ವರ್ಷಗಳ ಹಿಂದಿನಿಂದಲೇ ಪೂಜಿದುತ್ತಾ ಬಂದಿದ್ದೇವೆ. ಮೊದಲಪೂಜೆ ವಿಘ್ನೇಶ್ವರನಿಗೆ ಸಲ್ಲಿಸಿ ಬಳಿಕ ಉಳಿದ ದೈವಗಳನ್ನು ಪೂಜಿಸುವ ಸಂಸ್ಕೃತಿ ಭಾರತೀಯರಲ್ಲಿದೆ ಎಂದರು.ಹಿಂದೂಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ 1983ರಲ್ಲಿ ಗಣೇಶೋತ್ಸವ ಸಾರ್ವಜನಿಕ ರೂಪದಲ್ಲಿ ಹೊರ ಬಂದಿತು. ಹಿಂದೂ ಗಳಿಗೆ ಸಾಮರ್ಥ್ಯ ಬಂದಲ್ಲಿ ಭಾರತಕ್ಕೆ ತಮ್ಮದೇಯಾದ ಶಕ್ತಿ ಬರಲಿದೆಂಬ ಕಾರಣಕ್ಕೆ ಹಿಂದೂಗಳ ಉನ್ನತಿ, ಅವನತಿಗೆ ಜೊತೆಗೆ ದೇಶದ ಉನ್ನತಿ, ಅವನತಿ ಜೋಡಿಸಿಕೊಂಡಿದ್ದು ಐತಿಹಾಸಿಕ ಸತ್ಯ ಎಂದರು.ಹಿಂದೂಗಳು ಸಮೃದ್ಧಿ, ಸಂಘಟಿತರಾದಾಗ ರಾಷ್ಟ್ರ ಉನ್ನತಿ ಕಡೆ ಸಾಗಲಿದೆ. ದುರ್ಬಲರಾದರೆ ಅವನತಿಯೆಡೆ ಸಾಗಲಿದೆ. ''''''''ಸರ್ವೆ ಜನ, ಸುಖಿನೋ ಭವಂತು'''''''' ಎಂಬುವ ಮಂತ್ರ ಜಗತ್ತನ್ನು ವ್ಯಾಪಿಸಲಿದೆ. ಇಲ್ಲದಿದ್ದಲ್ಲಿ ಮತೀಯ, ಕೋಮುವಾದ, ಹಿಂಸೆ ತಾಂಡವವಾಡ ಲಿದೆ. ಆದ್ದರಿಂದ ಹಿಂದುತ್ವ ಬಲಗೊಂಡು ಹಿಂಸೆ ಕೊನೆ ಯಾಗಬೇಕು ಎಂದು ತಿಳಿಸಿದರು.ಜಗತ್ತಿನಲ್ಲಿ ಹಿಂದೂ ಮತ್ತು ಹಿಂದುತ್ವ ಬಲವಾಗಿ ಬೆಳೆದಾಗ ವಸುದೈವ ಕುಟುಂಬವಾಗಲಿದೆ. ಆ ಉದ್ದೇಶದಿಂದ ಹಿಂದೂ ಮಹಾ ಗಣಪತಿಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಈ ಗಣೇಶೋತ್ಸವ ಹಿಂದೂಗಳನ್ನು ಸಂಘಟಿಸುವ ಶಕ್ತಿಯಾಗಲಿದೆ ಎಂದರು.ಗಣೇಶೋತ್ಸದಲ್ಲಿ ಅಸೃಶ್ಯತೆ, ಜಾತೀಯತೆ ಕೊನೆಯಾಗಿ, ಹಿಂದುತ್ವ ಸದಾ ಚಿರಾಯುವಾಗಲಿ. ಹಿಂದು ತ್ವ ಮೂಲಕ ರಾಷ್ಟ್ರ ವಿಶ್ವಗುರುವಾಗಲೀ, ಸರ್ವಧರ್ಮ, ಸಮಭಾವ ತಿಳಿಸುವಂಥ ಮೂಲ ವಿಚಾರ ಹಿಂದುತ್ವ ಹೊಂದಿದೆ. ಉಳಿದ ಧರ್ಮಗಳು ಶ್ರೇಷ್ಟ ಎನ್ನುತ್ತಾರೆ.ಹಿಂದೂ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಕುಪ್ಪೇನಹಳ್ಳಿ ಶಿವಣ್ಣ ಮಾತನಾಡಿ ಸೆ.27 ರಂದು ಶ್ರೀ ಯವರನ್ನು ರಾಜ ಬೀದಿ ಗಳಲ್ಲಿ ಮೆರವಣಿಗೆಯಲ್ಲಿ ಕರೆತಂದು ಪ್ರತಿಷ್ಠಾಪಿಸಲಾಗುವುದು. ಒಟ್ಟು ೧೧ ದಿನ ನಡೆಯುವ ಗಣೇಶೋತ್ಸದಲ್ಲಿ ಛದ್ಮವೇಷ, ಭರತನಾಟ್ಯ, ವಿಜಯ ಸಿಂಧೂರ ಉಪನ್ಯಾಸ, ಚಿತ್ರಕಲಾ, ರಂಗೋಲಿ ಸ್ಪರ್ಧೆ, ಆರ್‌ಎಸ್‌ಎಸ್ ನೂರರ ಸಂಭ್ರಮದ ಉಪನ್ಯಾಸ, ಭಕ್ತಿಲಹರಿ, ದೇವಸ್ಥಾನ ನಮ್ಮ ಸ್ವತ್ತ ಉಪನ್ಯಾಸ, ಯಕ್ಷಗಾನ, ಭಕ್ತಿಭಾವ ಸಂಗಮ ಹಾಗೂ ಸೆ.೦೬ ರಂದು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಕೋಟೆ ಕರೆಯಲ್ಲಿ ವಿಸರ್ಜಿಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಾ ಸಂಘದ ಜಿಲ್ಲಾ ಸಂಘ ಚಾಲಕ ಘನ ಶಾಮ್ ಆಳ್ವಾ, ಹಿಂದೂ ಮಹಾಗಣಪತಿ ಕಾರ್ಯದರ್ಶಿ ಸಂತೋಷ್, ಕೋಟ್ಯಾನ್, ಶ್ಯಾಂ.ವಿ ಗೌಡ, ಪ್ರದೀಪ್, ರಾಜೇಶ್, ರಾಜೇಗೌಡ, ದಿಲೀಪ್ ಶೆಟ್ಟಿ, ಅಂಕಿತ ಅನೀಶ್, ಶರತ್, ಪ್ರವೀಣ್, ಆಕಾಶ್, ನಯ ನ್, ಸಂಘ ಪರಿವಾರದ ರಾಜಪ್ಪ, ನಾರಾಯಣಸ್ವಾಮಿ, ನಗರಸಭಾ ಸದಸ್ಯರಾದ ಮಧುಕು ಮಾರ್‌ರಾಜ್ ಅರಸ್, ರೂಪಕುಮಾರ್, ವರಸಿದ್ಧಿ ವೇಣುಗೋಪಾಲ್ ಮತ್ತಿತರರಿದ್ದರು.