ಡಿಕೆಸು ಕಣ್ಣೀರು ಹಾಕಿದ್ರು, ನಾವು ಕೇಳಿದ್ವಾ: ನಿಖಿಲ್‌

| Published : Nov 08 2024, 12:34 AM IST

ಡಿಕೆಸು ಕಣ್ಣೀರು ಹಾಕಿದ್ರು, ನಾವು ಕೇಳಿದ್ವಾ: ನಿಖಿಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ನಾನು ಕಣ್ಣೀರು ಹಾಕಿರುವುದು ಉದ್ದೇಶಪೂರ್ವಕವಾಗಿ ಅಲ್ಲ, ಸಾಕಷ್ಟು ಜನ ಸಾರ್ವಜನಿಕ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ. ಕೆಲವು ಸನ್ನಿವೇಶಗಳು ಕಣ್ಣಲ್ಲಿ ನೀರು ಹಾಕಿಸುತ್ತೆ. ಕಳೆದ ಚುನಾವಣೆಯಲ್ಲಿ ಡಿ.ಕೆ ಸುರೇಶ್ ಅವರು ಕಣ್ಣೀರು ಹಾಕಿದ್ರು ಅದನ್ನ ನಾವು ಪ್ರಶ್ನೆ ಮಾಡಿದ್ವಾ.? ಎಂದು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.

ತಾಲೂಕಿನ ಹುಣಸನಹಳ್ಳಿಯಲ್ಲಿ ಪ್ರಚಾರ ಸಭೆ ನಡೆಸಿದ ಅವರು, ಸುದ್ದಿಗಾರರ ಜತೆ ಮಾತಾನಾಡಿ, ನಾವು ಕಣ್ಣಲ್ಲಿ ನೀರು ಹಾಕಿ ಮತ ಪಡೆಯುವುದಿಲ್ಲ, ನಾನು ಬಂದಿರುವುದು ಅಭಿವೃದ್ಧಿ ಮಾಡುವುದಕ್ಕೆ, ಯುವಕರು ಉದ್ಯೋಗ ಮತ್ತು ಚನ್ನಪಟ್ಟಣ ತಾಲೂಕಿನ ಕೆರೆ ತುಂಬಿಸುವ ದೊಡ್ಡ ಜವಾಬ್ದಾರಿ ಇದೆ. ಆಗಾಗಿ ನನಗೆ ಅವಕಾಶ ಕೋಡಿ ಎಂದು ಕೇಳುತ್ತಿದ್ದೇನೆ ಎಂದರು.

ದೇವೇಗೌಡರಿಗೂ ಮತ್ತು ರಾಮನಗರ ಜಿಲ್ಲೆಗೆ ಅವಿನಾಭಾವ ಸಂಬಂಧ ಇದೆ. ದೇವೇಗೌಡರು ರಾಮನಗರ ಜಿಲ್ಲೆಗೆ ಪಾದಾರ್ಪಣೆ ಮಾಡಿದ್ದು ೧೯೮೩ರಲ್ಲಿ, ನಾನು ಜನಿಸಿದ್ದು ೧೯೮೮ ರಲ್ಲಿ ಅಂದರೆ, ದೇವೇಗೌಡರ ಮತ್ತು ರಾಮನಗರ ಜಿಲ್ಲೆಯ ಸಂಬಂಧ ನಾನು ಹುಟ್ಟುವುದಕ್ಕೂ ಮುನ್ನವೇ ಸಂಬಂಧ ಇದೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ದೇವೇಗೌಡರ ಇಗ್ಗಲೂರು ಜಲಾಶಯ ಈಗಲೂ ಈ ಭಾಗದ ಹೃದಯದಲ್ಲಿ ಉಳಿದಿದೆ, ಬಹಳಷ್ಟು ಜನ ಮಾತಾಡುತ್ತಾರೆ. ನನಗಿಂತ ಹೆಚ್ಚಿನದಾಗಿ ಸಂಬಂಧ ಚನ್ನಪಟ್ಟಣ ತಾಲೂಕಿಗೆ ಇದೆ ಎಂದರು.

ಆತ್ಮವಿಶ್ವಾಸ ಹೇಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆತ್ಮ ವಿಶ್ವಾಸ ಇದೆ, ಚುನಾವಣೆಗೆ ಇಳಿದಿದೀವಿ ಎರಡು ಪಕ್ಷದ ಕಾರ್ಯಕರ್ತರು ನನಗೆ ಧೈರ್ಯ ತುಂಬಿಸುತ್ತಿದ್ದಾರೆ. ಚನ್ನಪಟ್ಟಣ ತಾಲೂಕಿನ ಹೆಣ್ಣು ಮಕ್ಕಳು, ಯುವಕರು, ಹಿರಿಯರ ಆಶೀರ್ವಾದ ಮಾರ್ಗದರ್ಶನದಿಂದ ನನಗೆ ಆತ್ಮ ಧೈರ್ಯ ಸಿಕ್ಕಿದೆ ಎಂದರು.

ಪೊಟೋ೭ಸಿಪಿಟಿ೩:

ಚನ್ನಪಟ್ಟಣ ತಾಲೂಕಿನ ಗುಡ್ಡೆ ತಿಮ್ಮಸಂದ್ರದಲ್ಲಿ ನಿಖಿಲ್ ಎತ್ತಿನಗಾಡಿ ಮೇಲೆ ಪ್ರಚಾರ ನಡೆಸಿದರು.