ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ರಂಗನಕೊಪ್ಪಲು ಸರ್ಕಾರಿ ಶಾಲೆಯ ಶಿಥಿಲಗೊಂಡಿರುವ ಕಟ್ಟಡ ದುರಸ್ತಿ ಮಾಡುವುದರ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ವಿದ್ಯಾರ್ಥಿಗಳು, ಪೋಷಕರು ಆಗ್ರಹಿಸಿದ್ದಾರೆ.ಮಾದಿಹಳ್ಳಿ ಹೋಬಳಿ, ಆಂದಲೆ ಗ್ರಾಮ ಪಂಚಾಯಿತಿ ವ್ಯಾಪ್ತಿ ರಂಗನಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಪ್ರತಿವರ್ಷ ಸುರಿಯುವ ಭಾರಿ ಮಳೆಯಿಂದ ಶಾಲೆಯ ಆರ್‌ಸಿಸಿ ಮೇಲ್ಛಾವಣಿ ಮತ್ತು ಗೋಡೆಗಳು ಹಾಳಾಗಿದ್ದು, ಈಗ ಸುರಿಯುತ್ತಿರುವ ಮಳೆಗೆ ಸೋರುತ್ತಿದೆ. ಶಾಲಾ ಕೊಠಡಿಯಲ್ಲಿ ಕುಳಿತು ಪಾಠ ಕೇಳಲು ಮಕ್ಕಳು ಹೆದರುತ್ತಿದ್ದಾರೆ. ಮಕ್ಕಳು ಜೀವಭಯದ ನಡುವೆ ಮುಂದೇನು ಗತಿ ಕಾದಿದೆ ಎಂದು ಶಾಲೆಗೆ ತೆರಳುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಮುಂಭಾಗದ ರಸ್ತೆಯ ಪಕ್ಕದಲ್ಲಿರುವ ಚರಂಡಿಗೆ ಸ್ಲ್ಯಾಬ್ ನಿರ್ಮಾಣ ಅಗತ್ಯವಿದೆ ಎಂದು ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ. ಬೇಲೂರು–ಆಂದಲೆ ಮುಖ್ಯರಸ್ತೆ ಪಕ್ಕದಲ್ಲೇ ಶಾಲೆ ಇರುವುದರಿಂದ ಅತಿ ವೇಗಲ್ಲಿ ಬರುವ ವಾಹನಗಳಿಂದ ಮಕ್ಕಳಿಗೆ ಅಪಾಯಕಾರಿಯಾಗಿದೆ. ಶಾಲೆ ಹಾಗೂ ಅಂಗನವಾಡಿ ಕೇಂದ್ರದ ಸುತ್ತಲೂ ಸಿಮೆಂಟ್ ಬಾಕ್ಸ್ ಚರಂಡಿ ಹಾಗೂ ಭದ್ರತೆಗೆ ಕಾಂಪೌಂಡ್ ನಿರ್ಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಹಾಗೂ ಸಮಾಜ ಸೇವಕ ಆಂದಲೆ ಆರ್. ಆರ್. ಕೃಷ್ಣಮೂರ್ತಿ ಮಾತನಾಡಿ ಮಕ್ಕಳು ಜೀವಭಯದ ಮಧ್ಯೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಯ ಮೇಲ್ಛಾವಣಿ ಹಾಗೂ ಗೋಡೆಗಳು ಯಾವಾಗ ಬೇಕಾದರೂ ಕುಸಿಯುವ ಸ್ಥಿತಿಯಲ್ಲಿವೆ. ಸರ್ಕಾರ ಹಾಗೂ ಶಿಕ್ಷಣ ಇಲಾಖೆ ತಕ್ಷಣ ಕ್ರಮ ಕೈಗೊಂಡು ಶಾಲೆಯ ಕಟ್ಟಡವನ್ನು ರಿಪೇರಿ ಮಾಡಿಸಬೇಕು. ಶಾಲೆಯ ಮುಂಭಾಗದ ಬೇಲೂರು–ಆಂದಲೆ ಮುಖ್ಯರಸ್ತೆಯ ಪಕ್ಕದಲ್ಲಿರುವ ಚರಂಡಿಗೆ ಸ್ಲ್ಯಾಬ್ ನಿರ್ಮಿಸಬೇಕು. ಶಾಲೆ ಮತ್ತು ಆಂಗನವಾಡಿ ಕೇಂದ್ರದ ಸುತ್ತಲೂ ಸಿಮೆಂಟ್ ಬಾಕ್ಸ್ ಚರಂಡಿ ಹಾಗೂ ಭದ್ರತೆಗೆ ಕಾಂಪೌಂಡ್ ನಿರ್ಮಾಣ ಅಗತ್ಯವಿದೆ. ಜೊತೆಗೆ ಶಾಲೆಯ ಹಿಂಭಾಗದಲ್ಲಿರುವ ಎರಡು ಗೋಣಿಮರಗಳನ್ನು ತಕ್ಷಣ ತೆರವುಗೊಳಿಸಬೇಕು. ನಮ್ಮ ಶಾಲೆ ಮತ್ತು ಅಂಗನವಾಡಿ ಕಟ್ಟಡಗಳನ್ನು ಉಳಿಸಬೇಕು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸುರಕ್ಷತೆ ಕಾಪಾಡಬೇಕು ಎಂದು ಅವರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮಂಜಯ್ಯ, ಕುಮಾರ್, ರವಿ, ಆರ್.ಕೆ. ಕುಮಾರಸ್ವಾಮಿ, ಆರ್.ಪಿ. ರಾಜೇಶ್, ಆರ್.ಪಿ. ಶೇಖರ್, ಶ್ರೀಮತಿ ಗಂಗಮ್ಮ, ಚಂದ್ರಮ್ಮ, ದ್ಯವಮ್ಮ, ಆರ್.ಎಸ್. ಕುಮಾರ್, ಪುಟ್ಟಸ್ವಾಮಿ, ಸತೀಶ್, ಲೋಕೇಶ್, ನಂದಿನಿ, ಯಶೋಧಮ್ಮ, ಸಗನಮ್ಮ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು .
;Resize=(128,128))
;Resize=(128,128))
;Resize=(128,128))
;Resize=(128,128))