ನಾಳೆಯಿಂದ ದಿಂಡಿ ಉತ್ಸವ

| Published : Dec 19 2024, 12:33 AM IST

ಸಾರಾಂಶ

ಹರಿಹರ ನಗರದ ವಿಠ್ಠಲ ರುಕ್ಮಾಯಿ ದೇವಸ್ಥಾನದಲ್ಲಿ ಡಿ.೨೦ ರಿಂದ ೨೭ರವರೆಗೆ ೫೨ನೇ ವರ್ಷದ ವಿಠ್ಠಲ ರುಕ್ಮಾಯಿ ದಿಂಡಿ ಮಹೋತ್ಸವ ಹಾಗೂ ನಾಮಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಎಸ್‌ಕೆ ಸಮಾಜದ ಹಂಗಾಮಿ ಅಧ್ಯಕ್ಷ ಮೋಹನ್.ಎನ್. ಖಿರೋಜಿ ಹೇಳಿದರು.

ಹರಿಹರ: ನಗರದ ವಿಠ್ಠಲ ರುಕ್ಮಾಯಿ ದೇವಸ್ಥಾನದಲ್ಲಿ ಡಿ.೨೦ ರಿಂದ ೨೭ರವರೆಗೆ ೫೨ನೇ ವರ್ಷದ ವಿಠ್ಠಲ ರುಕ್ಮಾಯಿ ದಿಂಡಿ ಮಹೋತ್ಸವ ಹಾಗೂ ನಾಮಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಎಸ್‌ಕೆ ಸಮಾಜದ ಹಂಗಾಮಿ ಅಧ್ಯಕ್ಷ ಮೋಹನ್.ಎನ್. ಖಿರೋಜಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦ರಂದು ಪೋತಿ ಸ್ಥಾಪನೆ, ೨೧ರಿಂದ ೨೭ರವರೆಗೆ ಪ್ರತಿನಿತ್ಯ ಶ್ರೀ ಗ್ರಂಥರಾಜ ಜ್ಞಾನೇಶ್ವರಿ ಸಾಮೂಹಿಕಾ ಪಾರಾಯಣ, ವಿವಿಧ ಸಮಾಜದ ಮಹಿಳಾ ಮಂಡಳಿ ವತಿಯಿಂದ ಭಜನೆ ಆಯೋಜಿಸಲಾಗಿದೆ ಎಂದರು.

೨೫4 ಸಂಜೆ ೬ ಗಂಟೆಗೆ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾದ ರಾಜೇಶ್ ಪಡಿಯಾರ್ ಮೈಸೂರು ಅವರಿಂದ ಸಂತವಾಣಿ ಕಾರ್ಯಕ್ರಮ, ೨೬ರಂದು ಸಂಜೆ ೫.೩೦ರಿಂದ ಭದ್ರಾವತಿಯ ಹ.ಭ.ಪ ಶ್ರೀ ಬದ್ರಿನಾಥ್ ಉತ್ತರಕರ್ ಅವರಿಂದ ಪ್ರವಚನ ಹಾಗೂ ರಾತ್ರಿ ೧೨ರಿಂದ ಆಖಂಡ ಜಾಗರಣೆ ಮಾಡಲಾಗುವುದು ಎಂದರು.

೨೭ರಂದು ಬೆಳಗ್ಗೆ ೫.೩೦ರಿಂದ ಕಾಕಡಾರತಿ, ಭಜನೆ ಹಾಗೂ ಜ್ಞಾನೇಶ್ವರಿ ಪಾರಾಯಣ ಉದ್ಯಾಪನಾ ಕಾರ್ಯಕ್ರಮ, ಬೆಳಗ್ಗೆ ೮.೩೦ರಿಂದ ವಿಠ್ಠಲ ರುಕ್ಮಾಯಿ ದೇವಸ್ಥಾನದಿಂದ ಆರಂಭವಾಗುವ ವಿಠ್ಠಲ ರುಕ್ಮಾಯಿ ದಿಂಡಿ ಉತ್ಸವ ಮೆರವಣಿಗೆ ನಗರ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪುನಃ ದೇವಸ್ಥಾನದಲ್ಲಿ ಅಂತ್ಯವಾಗುವುದು. ಮಹಾಮಂಗಳಾರತಿ, ಮಹಾಪ್ರಸಾದ ನಡೆಯಲಿದೆ ಎಂದರು.

ಸಮಾಜದ ಮುಂಖಡರಾದ ಶ್ರೀಕಾಂತ್ ಮೆರ‍್ವಾಡೆ, ಗಣೇಶ್ ಮೆರ‍್ವಾಡೆ, ವಿನಾಯಕ ಲದ್ವಾ, ತುಳಜಪ್ಪ ಸಾ ಭೂತೆ, ಮೈಲಾರಲಿಂಗ ಸಾ ಕಾಟ್ವೆ, ಶಂಭು ಮೆರ‍್ವಾಡೆ, ಕೃಷ್ಣ ರಾಜೋಳಿ ಹಾಗೂ ಇತರರಿದ್ದರು.