ಸಾರಾಂಶ
ಕಡೂರು: 73ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಅಂಗವಾಗಿ ಕಡೂರು ಪಟ್ಟಣದಲ್ಲಿ ದಿಂಡಿ ಉತ್ಸವವು ಅದ್ಧೂಯಾಗಿ ನೆರವೇರಿತು.
ಕನ್ನಡಪ್ರಭ ವಾರ್ತೆ ಕಡೂರು: 73ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಅಂಗವಾಗಿ ಕಡೂರು ಪಟ್ಟಣದಲ್ಲಿ ದಿಂಡಿ ಉತ್ಸವವು ಅದ್ಧೂಯಾಗಿ ನೆರವೇರಿತು.
ಭಾವಸಾರ ಕ್ಷತ್ರಿಯ ಸಮಾಜದಿಂದ ಪಟ್ಟಣದ ಶ್ರೀ ಪಾಂಡುರಂಗ ರುಕ್ಮಿಣಿ ದೇವಾಲಯದಲ್ಲಿ ಶ್ರೀಯವರ ಉತ್ಸವವು ಸಂಪ್ರದಾಯಗಳಂತೆ ನಡೆಯಿತು. ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಶ್ರೀ ಸ್ವಾಮಿಯವರಿಗೆ ಅಭಿಷೇಕ, ಅಲಂಕಾರ, ಗಣಪತಿ ಪೂಜೆ, ಪ್ರಸಾದ ವಿನಿಯೋಗ ನಡೆಯಿತು. ಭಜನಾ ಮಂಡಳಿಗಳಿಂದ ವಿಷ್ಣು ಸಹಸ್ರನಾಮ ಪಠಣ ಮತ್ತು ಪೋತಿಸ್ಥಾಪನೆ ನಡೆಯಿತು.ಮಹಿಳೆಯರಿಂದ ಭಕ್ತಿಪೂರಕ ನಾಮಜಪ, ಪ್ರಹಸನ ಮತ್ತು ಶ್ರೀ ಕೃಷ್ಣನ ಜೋಗುಳ ಸೇವೆ ನಡೆಯುವ ಮೂಲಕ ಹೆಣ್ಣು ಮಕ್ಕಳು ಜೋಗುಳ ಹಾಡಿದರು. ಆನಂತರ ಫಂಡರಿ ಸಂಪ್ರದಾಯದಂತೆ ಕೀರ್ತನೆಗಳು ನಡೆದವು. ಅಲ್ಲದೆ ಅಖಂಡ ಜಾಗರಣೆ, ಪಾಳಿ ಭಜನೆ ಜತೆ ಸಾಗರದ ಆರ್.ಟಿ. ಮಹೇಂದ್ರನಾಥ್ ರವರಿಂದ ಫಂಡರಿ ಕೀರ್ತನೆ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಅವರಿಗೆ ಕಾಕಡಾರತಿ ಮತ್ತು ಭಜನೆ ನಡೆಯಿತು.
ಪಟ್ಟಣದ ರಾಜಬೀದಿಗಳಲ್ಲಿ ಶ್ರೀ ಪಾಂಡುರಂಗ ರುಕ್ಮಾಯಿಯವರ ದಿಂಡಿ ಉತ್ಸವ ನಡೆಯಿತು. ಉತ್ಸವದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಕೆ. ಮೂರ್ತಿರಾವ್, ಕಾರ್ಯದರ್ಶಿ ಕೆ.ಎಂ. ರವಿಶಂಕರ್, ಸಮಾಜದ ಮುಖಂಡರಾದ ಮಂಜುನಾಥ್ ರಾವ್ ಬಾಂಗ್ರೆ, ಕಡೂರು ದೇವೇಂದ್ರ, ಕೆ.ಎನ್ ಪುಂಡಲೀಕ ರಾವ್, ಟೈಲರ್ ರಾಜು, ರವಿಕುಮಾರ್,ಮನು, ಮಹಿಳೆಯರು ಸೇರಿದಂತೆ ಸಮಾಜದ ಬಾಂಧವರು ಇದ್ದರು.----
30ಕೆಕೆಡಿಯು2: ಕಡೂರು ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದಿಂದ ಶ್ರೀ ಪಾಂಡುರಂಗ ರುಕುಮಾಯಿಯವರ ದಿಂಡಿ ಉತ್ಸವ ಅದ್ಧೂರಿಯಾಗಿ ನಡೆಯಿತು.