ಅಜ್ಜಿ ಮನೆಯ ಕೆಲಸವನ್ನು ಬೇಸಿಗೆ ಶಿಬಿರಗಳು ಮಾಡುತ್ತಿವೆ: - ದಿನೇಶ್ ಚಮ್ಮಾಳಿಗೆ

| Published : May 15 2024, 01:39 AM IST

ಅಜ್ಜಿ ಮನೆಯ ಕೆಲಸವನ್ನು ಬೇಸಿಗೆ ಶಿಬಿರಗಳು ಮಾಡುತ್ತಿವೆ: - ದಿನೇಶ್ ಚಮ್ಮಾಳಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳನ್ನು ನಿಭಾಯಿಸುವುದು ಬಹಳ ಕಷ್ಟ. ಮಕ್ಕಳನ್ನು ಹಿಡಿದಿಟ್ಟುಕೊಂಡು ಕಲಿಸುವುದು ಇನ್ನೂ ಕಷ್ಟ. ರಜೆ ಬಂದರೆ ಅಜ್ಜಿ ಮನೆಗೆ ಹೋಗುತ್ತಿದ್ದೇವು. ಗೋಲಿ, ಲಗೋರಿ ಮುಂತಾದ ದೇಸಿ ಆಟಗಳನ್ನು ಆಡುತ್ತಿದ್ದೆವು. ಹಿರಿಯರು ಕತೆ ಹೇಳುತ್ತಿದ್ದರು. ಅಜ್ಜಿಯ ಮನೆ, ಊರುಗಳಲ್ಲಿ ಮೌಲ್ಯಯುತ ಶಿಕ್ಷಣ ಸಿಗುತ್ತಿತ್ತು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಆ ಕೆಲಸವನ್ನು ಬೇಸಿಗೆ ಶಿಬಿರಗಳು ಮಾಡುತ್ತಿವೆ

ಕನ್ನಡಪ್ರಭ ವಾರ್ತೆ ಮೈಸೂರುಅಜ್ಜಿ ಮನೆಯ ಕೆಲಸಗಳನ್ನು ಬೇಸಿಗೆ ಶಿಬಿರಗಳು ಮಾಡುತ್ತಿರುವುದು ಶ್ಲಾಘನೀಯ ಎಂದು ರಂಗಕರ್ಮಿ ದಿನೇಶ್ ಚಮ್ಮಾಳಿಗೆ ಅಭಿಪ್ರಾಯಪಟ್ಟರು.ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ನೇಪಥ್ಯ ರಂಗತಂಡ ಮತ್ತು ಜಿವಿಆರ್ ಪ್ರೊಡಕ್ಷನ್ ವತಿಯಿಂದ ಆಯೋಜಿಸಿದ್ದ ಹಾಡು- ಆಟ ಆಡು- ಬೇಸಿಗೆ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.

ಮಕ್ಕಳನ್ನು ನಿಭಾಯಿಸುವುದು ಬಹಳ ಕಷ್ಟ. ಮಕ್ಕಳನ್ನು ಹಿಡಿದಿಟ್ಟುಕೊಂಡು ಕಲಿಸುವುದು ಇನ್ನೂ ಕಷ್ಟ. ರಜೆ ಬಂದರೆ ಅಜ್ಜಿ ಮನೆಗೆ ಹೋಗುತ್ತಿದ್ದೇವು. ಗೋಲಿ, ಲಗೋರಿ ಮುಂತಾದ ದೇಸಿ ಆಟಗಳನ್ನು ಆಡುತ್ತಿದ್ದೆವು. ಹಿರಿಯರು ಕತೆ ಹೇಳುತ್ತಿದ್ದರು. ಅಜ್ಜಿಯ ಮನೆ, ಊರುಗಳಲ್ಲಿ ಮೌಲ್ಯಯುತ ಶಿಕ್ಷಣ ಸಿಗುತ್ತಿತ್ತು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಆ ಕೆಲಸವನ್ನು ಬೇಸಿಗೆ ಶಿಬಿರಗಳು ಮಾಡುತ್ತಿವೆ ಎಂದರು.

ಈಗೆಲ್ಲ ಶಿಕ್ಷಣ ಎಂದರೆ ಮಾರ್ಕ್ಸ್ ಮಾತ್ರ. ಸರ್ಟಿಫಿಕೇಟಷನ್ ಗೆ ಹೊಡೆದಾಡುತ್ತಿದ್ದೇವೆ. ಅವರ ಸೃಜನಶೀಲತೆಗೆ ಅವಕಾಶ ಸಿಗುತ್ತಿಲ್ಲ. ಮಕ್ಕಳಿಗೆ ಮೊಬೈಲ್ ಕೊಟ್ಟರೆ ಸಾಕು. ಶಿಕ್ಷಕರಿಗೆ ಪಠ್ಯಕ್ರಮ ಮುಗಿದರೆ ಸಾಕು ಎನ್ನುತ್ತಾರೆ. ಆದರೆ ಮಕ್ಕಳಲ್ಲಿನ ಸೃಜನ ಶೀಲತೆಯನ್ನು ಹೊರ ಹಾಕುವುದು ಇಂತಹ ಶಿಬಿರಗಳು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಗಳಲ್ಲಿ ಶಿಕ್ಷಕರು ಇಷ್ಟವಾದರೆ ಯಾವುದೇ ಪಾಠವಾದರು ಮಕ್ಕಳಿಗೆ ಇಷ್ಟವಾಗುತ್ತದೆ. ಶಿಕ್ಷಕರು ಮಕ್ಕಳಾದಾಗ ಮಾತ್ರ ಮಕ್ಕಳ ಕಲಿಕೆ ಉತ್ತಮಗೊಳ್ಳಲು ಸಾಧ್ಯ ಎಂದರು.

ಎಸ್.ಸಿ.ಎಸ್.ಇ ಪ್ರಾಂಶುಪಾಲ ಶ್ರೀವತ್ಸ, ಜಿಮ್ನಾಸ್ಟಿಕ್ ತರಬೇತುದಾರ ರಾಘವೇಂದ್ರ ಆರ್. ಹರಳಿಕಟ್ಟಿ ಇದ್ದರು.

ಕಾರ್ಯಕ್ರಮದ ಬಳಿಕ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಾಯಾವಿ ನಾಟಕ ಪ್ರದರ್ಶಿಸಿದರು.