ಸಾರಾಂಶ
ಕನ್ನಡಪ್ರಭ ವಾರ್ತೆ, ಭದ್ರಾವತಿ
ಇಲ್ಲಿಯ ಗೋಣಿಬೀಡು ಬಳಿಯ, ಭದ್ರಾನದಿ ತೀರದ ಶ್ರೀ ಶೀಲಸಂಪಾದನಾ ಮಠದಲ್ಲಿ 25 ಸಹಸ್ರ ಜ್ಯೋತಿಗಳ ಕಾರ್ತಿಕ ದೀಪೋತ್ಸವ ನಡೆಯಿತು. ಭದ್ರೆಗೆ ಗಂಗಾರತಿ ಕಾರ್ಯಕ್ರಮಕ್ಕೆ ಮೈಸೂರಿನ ಅರ್ಜುನ ಅವಧೂತ ಮಹಾರಾಜ್ ಚಾಲನೆ ನೀಡಿದರು.ಶ್ರೀ ಮಠದ ಪೀಠಾಧಿಪತಿ ಮಹಾತಪಸ್ವಿ ಡಾ.ಸಿದ್ದಲಿಂಗ ಸ್ವಾಮೀಜಿ ನೇತೃತ್ವದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಆಚರಣೆ ಕಣ್ತುಂಬಿಕೊಂಡರು. ಇದಕ್ಕೂ ಮೊದಲು ಮಠದಲ್ಲಿರುವ ಜಗಜ್ಯೋತಿ ಬಸವಣ್ಣ, ಅಕ್ಕ ನಾಗಲಾಂಬಿಕೆ ಹಾಗೂ ಚನ್ನಬಸಣ್ಣನವರ ಪ್ರತಿಮೆಗಳಿಗೆ ಪೂಜೆ ಸಲ್ಲಿಸಲಾಯಿತು.
ಮಠದ ಭಕ್ತ, ಚಲನಚಿತ್ರ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಗುರುರಕ್ಷೆ ನೀಡಿ ಅಭಿನಂದಿಸಲಾಯಿತು. ನಂತರ ರಾಜೇಶ್ ಕೃಷ್ಣನ್ ಅವರಿಂದ ಸುಮಾರು 1 ಗಂಟೆ ಸಮಯ ರಸಮಂಜರಿ ಗಾಯನ ಕಾರ್ಯಕ್ರಮ ನಡೆಯಿತು.ಕ್ರೈಸ್ತ ಧರ್ಮದ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿ ನಿರ್ದೇಶಕ ಕ್ಲಿಫರ್ಡ್ ರೋಷನ್ ಪಿಂಟೋ, ಇಸ್ಲಾಂ ಧರ್ಮದ ಅಬ್ದುಲ್ ಲತೀಫ್, ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್, ನಿವೃತ್ತ ಐಎಎಸ್ ಅಧಿಕಾರಿಗಳಾದ ದಯಾಶಂಕರ್, ಪ್ರಕಾಶ್, ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ್ ಅವರ ಪತ್ನಿ ವಾಣಿ ಶ್ರೀನಿವಾಸ್, ನಗರಸಭೆ ಸದಸ್ಯ ಬಿ.ಕೆ ಮೋಹನ್, ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಜಗದೀಶ್ ಹಿರೇಮಠ್, ಯುವ ಮುಖಂಡ ಬಿ.ಎಸ್. ಗಣೇಶ್ ಇನ್ನಿತರರು ಉಪಸ್ಥಿತರಿದ್ದರು. ಸಮನ್ವಯಕಾಶಿ ಕಾರ್ಯಕ್ರಮ ನಿರೂಪಿಸಿದರು.
- - -ಕೋಟ್
ಇದೊಂದು ಪವಾಡ ಪುಣ್ಯ ಕ್ಷೇತ್ರವಾಗಿದ್ದು, ತಪಸ್ಸಿನ ಫಲವಾಗಿ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ತಪಸ್ಸಿನ ಶಕ್ತಿಯಿಂದಾಗಿ ಎಲ್ಲರ ನಿರೀಕ್ಷೆಗೂ ಮೀರಿ ಶ್ರೀ ಮಠ ಇಂದು ಬೃಹತ್ ಹೆಮ್ಮರವಾಗಿ ಬೆಳೆದು ನಿಂತಿದೆ. ಭಕ್ತರ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ- ಶ್ರೀ ಡಾ.ಸಿದ್ದಲಿಂಗ ಸ್ವಾಮೀಜಿ, ಶ್ರೀ ಶೀಲಸಂಪಾದನಾ ಮಠ, ಗೋಣಿಬೀಡು, ಭದ್ರಾವತಿ
- - -(** ಯಾವುದಾದರೂ ಒಂದೇ ಒಂದು ಫೋಟೋ ಬಳಸುವುದು)-ಡಿ11ಬಿಡಿವಿಟಿ1(ಎ):
ಭದ್ರೆಗೆ ಗಂಗಾರತಿ ಕಾರ್ಯಕ್ರಮದಲ್ಲಿ ಚಲನಚಿತ್ರ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಗುರುರಕ್ಷೆ ನೀಡಿ ಅಭಿನಂದಿಸಲಾಯಿತು.