ನುಡಿದಂತೆ ನಡೆದ ನೇರ ನಿಷ್ಠುರ ನಿಜಶರಣ: ಶಾಸಕ ಬಿ.ಬಿ. ಚಿಮ್ಮನಕಟ್ಟಿ

| Published : Jan 22 2024, 02:20 AM IST

ನುಡಿದಂತೆ ನಡೆದ ನೇರ ನಿಷ್ಠುರ ನಿಜಶರಣ: ಶಾಸಕ ಬಿ.ಬಿ. ಚಿಮ್ಮನಕಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾದಾಮಿ: ೧೨ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ ಯೋಗಿಗಳನ್ನು ಗುರುತಿಸಿ ಲಿಂಗಧಾರಣೆ ಮಾಡಿ ಶರಣ ಸಂಸ್ಕೃತಿಯಿಂದ ಅನುಭವ ಮಂಟಪದ ಮೂಲಕ ಲೋಕ ಕಲ್ಯಾಣಾರ್ಥ ಕಾಲಜ್ಞಾನ ಚಿಂತನೆ ನಡೆಸಿದ್ದರು. ಎಲ್ಲ ಶರಣರಗಿಂತ ಅಂಬಿಗರ ಚೌಡಯ್ಯನವರು ದಿಟ್ಟ ಮತ್ತು ಕ್ರಾಂತಿಕಾರಕ ನುಡಿದಂತೆ ನಡೆದು ನೇರ, ನಿಷ್ಠುರ ವ್ಯಕ್ತಿ ಎಂದು ಹೆಸರುವಾಸಿಯಾದವರು ಅಂಬಿಗರ ಚೌಡಯ್ಯ ಎಂದು ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹೇಳಿದರು. ಭಾನುವಾರ ಕುಮಾರೇಶ್ವರ ಸಭಾಭವನ ಮಂಟಪದಲ್ಲಿ ತಾಲೂಕು ಆಡಳಿತ ಮತ್ತು ಅಂಬಿಗರ ಸಮಾಜದ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯನವರ ೯೦೪ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲರಿಗೂ ಶರಣರು ಎಂದಿದ್ದರೆ. ಅಂಬಿಗರ ಚೌಡಯ್ಯನವರಿಗೆ ನಿಜಶರಣ ಎಂದು ಕರೆದರು.

ಕನ್ನಡಪ್ರಭವಾರ್ತೆ ಬಾದಾಮಿ

೧೨ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ ಯೋಗಿಗಳನ್ನು ಗುರುತಿಸಿ ಲಿಂಗಧಾರಣೆ ಮಾಡಿ ಶರಣ ಸಂಸ್ಕೃತಿಯಿಂದ ಅನುಭವ ಮಂಟಪದ ಮೂಲಕ ಲೋಕ ಕಲ್ಯಾಣಾರ್ಥ ಕಾಲಜ್ಞಾನ ಚಿಂತನೆ ನಡೆಸಿದ್ದರು. ಎಲ್ಲ ಶರಣರಗಿಂತ ಅಂಬಿಗರ ಚೌಡಯ್ಯನವರು ದಿಟ್ಟ ಮತ್ತು ಕ್ರಾಂತಿಕಾರಕ ನುಡಿದಂತೆ ನಡೆದು ನೇರ, ನಿಷ್ಠುರ ವ್ಯಕ್ತಿ ಎಂದು ಹೆಸರುವಾಸಿಯಾದವರು ಅಂಬಿಗರ ಚೌಡಯ್ಯ ಎಂದು ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹೇಳಿದರು.

ಭಾನುವಾರ ಕುಮಾರೇಶ್ವರ ಸಭಾಭವನ ಮಂಟಪದಲ್ಲಿ ತಾಲೂಕು ಆಡಳಿತ ಮತ್ತು ಅಂಬಿಗರ ಸಮಾಜದ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯನವರ ೯೦೪ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲರಿಗೂ ಶರಣರು ಎಂದಿದ್ದರೆ. ಅಂಬಿಗರ ಚೌಡಯ್ಯನವರಿಗೆ ನಿಜಶರಣ ಎಂದು ಕರೆದರು. ಅವರಲ್ಲಿನ ನೇರ, ದಿಟ್ಟತನದ ವಚನಗಳನ್ನು ಅವಲೋಕಿಸಿದ್ದಲ್ಲದೆ, ನಾವಿ ಹಿಡಿದು ನುಡಿದಂತೆ ಬದುಕುವ ಶೈಲಿಯನ್ನು ಶರಣರೆಲ್ಲರೂ ಗಮನಿಸಿದ್ದರು. ಸಮಾಜ ಬಾಂಧವರು ಅವರ ಜೀವನ ಚರಿತ್ರೆ ಓದುವ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದರ ಮೂಲಕ ಬೇರೆ ಸಮಾಜ ಗೌರವಸಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.

ಗುಳೆದಗುಡ್ಡದ ಮುರಘಾಮಠದ ಕಾಶೀನಾಥ ಸ್ವಾಮೀಜಿ ಮಾತನಾಡಿ, ಇಷ್ಟಲಿಂಗ ಪೂಜೆಯಿಂದ ಮನುಷ್ಯನ ಆತ್ಮ ಸಮತೋಲವಾಗುವುದು. ನಾವಿ ಹಿಡಿದು ನದಿ ದಡದಲ್ಲಿ ಜನರನ್ನು ಜೀವ ರಕ್ಷಣೆ ಮೂಲಕ ದಾಟಿಸುವ ಜತೆಗೆ ಅವರು ವಚನ ಬರೆದು ಸಮಾಜದಲ್ಲಿನ ಅಂಕುಡೊಂಕು ತಿದ್ದುವ ಪ್ರಯತ್ನ ಮಾಡಿದ್ದರು. ಸಮಾಜದ ಅಭಿವೃದ್ಧಿಗೆ ಬದ್ಧರಾಗುವ ಜತೆಗೆ ಪ್ರತಿಯೊಬ್ಬರೂ ಲಿಂಗಧಾರಣೆ ಪಡೆದು ಇಷ್ಟಲಿಂಗ ಪೂಜೆ ಮಾಡಿ ಕಾಯಕದಲ್ಲಿ ತೊಡಗಬೇಕು ಎಂದರು.

ಗದಗ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಎಚ್.ಎಸ್. ದಳವಾಹಿ ಅಂಬಿಗರ ಚೌಡಯ್ಯನವರ ಕುರಿತು ಉಪನ್ಯಾಸ ನೀಡಿದರು

ಶಿವಪೂಜಾ ಶಿವಾಚಾರ್ಯರು, ಶ್ರೀ ಸೋಮನಕೊಪ್ಪದ ಕೈಲಾಸಪತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಹಸೀಲ್ದಾರ್ ಜೆ.ಬಿ. ಮಜ್ಜಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಪುರಸಭೆ ಸದಸ್ಯೆ ರಾಮವ್ವ ಪೂಜಾರ, ಯಮುನಾ ಹೊಸಗೌಡರ ಹಾಗೂ ಶಂಕರ ಕನಕಗಿರಿ, ಸಮಾಜದ ಅಧ್ಯಕ್ಷ ಅಡಿವೆಪ್ಪ ಅರಬೂತನವರ, ಸಿಪಿಐ ಡಿ.ಡಿ. ಧೂಳಕೇಡ, ಗಂಗಾಧರ ಅರಬೂತನವರ ಸೇರಿದಂತೆ ಸರ್ಕಾರಿ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.

ಅಂಬಿಗ ಸಮಾಜದ ಎಸ್.ಎಸ್.ಎಲ್.ಸಿಯಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳಾದವರಿಗೆ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಸದಾಶಿವ ಮರಡಿ ನಿರೂಪಸಿದರು. ಎಂ.ಎಂ. ಶಿರಹಟ್ಟಿ ವಂದಿಸಿದರು

ಇಲ್ಲಿಯ ಪಿಕಾರ್ಡ್‌ ಬ್ಯಾಂಕಿನಿಂದ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆ ಆರಂಭಗೊಂಡು ವಾದ್ಯಮೇಳದೊಂದಿಗೆ ಮುಖ್ಯ ರಸ್ತೆಯ ಮೂಲಕ ಅಕ್ಕಮಹಾದೇವಿ ಅನುಭಾವ ಮಂಟಪಕ್ಕೆ ತಲುಪಿತು. ಮೆರವಣಿಗೆಯಲ್ಲಿ ಶ್ರೀರಾಮ ಲಕ್ಷ್ಮಣ, ಸೀತಾ ಹಾಗೂ ಹನುಮಂತನ ವೇಷಧಾರಿಗಳಾಗಿ ಪುಟ್ಟಮಕ್ಕಳು ಗಮನ ಸೆಳೆದರು.

ದ್ಯಾವಪ್ಪ ಬಾರಕೇರ, ಅರ್ಜುನ ಅಂಬಿಗೇರ, ಬಾಲಪ್ಪ ಬಾರಕೇರ, ರವಿ ಪೂಜಾರ ಮರಿಯಪ್ಪ ಬಾರಕೇರ, ರಂಗಪ್ಪ ಬಾರಕೇರ, ತಿಪ್ಪಣ್ಣ ಗಣಕುಮಾರ್, ರಮೇಶ ಕುದರಿಮನಿ, ಯಮನಪ್ಪ ಬಾರಕೇರ, ಮಲ್ಲಪ್ಪ ಅಂಬಿಗೇರ ಸೇರಿದಂತೆ ಮಹಿಳೆಯರು, ಯುವಕರು, ಸಮಾಜ ಬಾಂಧವರು ಪಾಲ್ಗೊಂಡಿದ್ದರು.