ಪಾರಾ ಮೆಡಿಕಲ್ ಕೋರ್ಸ್‌ ದಾಖಲಾತಿಗಾಗಿಇಂದು ತೀರ್ಥಹಳ್ಳಿಯಲ್ಲಿ ನೇರ ಸಂದರ್ಶನ

| Published : Jun 06 2024, 12:30 AM IST

ಪಾರಾ ಮೆಡಿಕಲ್ ಕೋರ್ಸ್‌ ದಾಖಲಾತಿಗಾಗಿಇಂದು ತೀರ್ಥಹಳ್ಳಿಯಲ್ಲಿ ನೇರ ಸಂದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು ೬೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಜೀವನದ ದಾರಿಯನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ಪ್ರತಿ ವರ್ಷ ಸಾಧಾರಣ ೨೫ ರಿಂದ ೩೫ರಷ್ಟು ವಿದ್ಯಾರ್ಥಿಗಳು ಉಚಿತ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಮಂಗಳ ಸಮೂಹ ವಿದ್ಯಾ ಸಂಸ್ಥೆಗಳ ದಾಖಲಾತಿಗಾಗಿ ಜೂ. 6 ರಂದು ತೀರ್ಥಹಳ್ಳಿಯ ಅಶೋಕ ಲಾಡ್ಜ್‌ನಲ್ಲಿ ನೇರ ಸಂದರ್ಶನ ನಡೆಸಲಾಗುತ್ತದೆ.

ಮಂಗಳ ಸಮೂಹ ವಿದ್ಯಾ ಸಂಸ್ಥೆ ಉತ್ತಮ ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಕಲಿಸಿ ಸಾಮಾನ್ಯ ವರ್ಗ ಮತ್ತು ಮಧ್ಯಮ ವರ್ಗದವರಿಗೆ ಸುಲಭದಲ್ಲಿ ಉದ್ಯೋಗ ಸಂಪಾದಿಸಲು ಅನುಕೂಲ ಮಾಡಲು ಬೇಕಾದ ಎಲ್ಲ ವ್ಯವಸ್ಥೆಗಳನ್ನು ಈ ಸಂಸ್ಥೆಯಲ್ಲಿ ಮಾಡಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಗಣಪತಿ ತಿಳಿಸಿದ್ದಾರೆ.

ಪ್ರಪಂಚದಾದ್ಯಂತ ಬಹಳ ಬೇಡಿಕೆ ಇರುವ ಪಾರಾ ಮೆಡಿಕಲ್ ಕೋರ್ಸುಗಳಾದ ಡಯಾಲಿಸಿಸ್ ಟೆಕ್ನೊಲೊಜಿ, ಅಪರೇಷನ್ ಥಿಯೇಟರ್ ಟೆಕ್ನೋಲೊಜಿ, ಲ್ಯಾಬ್ ಟೆಕ್ನೋಲೊಜಿ, ಎಕ್ಸ್ರೇ ಟೆಕ್ನೋಲೋಜಿ, ಆಫ್ತಲ್ಮೊಲೊಜಿ ಟೆಕ್ನೊಲೊಜಿ, ಹೆಲ್ತ್ ಇನ್ಸ್ಪೆಕ್ಟರ್ ಕೋರ್ಸು ಮಾತ್ರವಲ್ಲದೆ ಮೆಡಿಕಲ್ ರೆಕಾರ್ಡ್ಸ್ ಟೆಕ್ನೊಲೊಜಿ ಕೋರ್ಸುಗಳನ್ನು ಕೇವಲ ಎಸ್‌ಎಸ್‌ಎಲ್‌ಸಿ ಪಾಸಾದವರು ೩ ವರ್ಷಗಳಲ್ಲಿ ಮತ್ತು ಪಿಯುಸಿ ವಿಜ್ಞಾನ ಪಾಸಾದವರು ೨ ವರ್ಷದಲ್ಲಿ ಕಲಿತು ಆಸ್ಪತ್ರೆ ಮತ್ತಿತರ ವೈದ್ಯಕೀಯ ಸಂಸ್ಥೆಗಳಲ್ಲಿ ಒಳ್ಳೆಯ ಸಂಬಳದ ಉದ್ಯೋಗಗಳನ್ನು ಪಡೆಯುವ ಅವಕಾಶವಿದೆ.

ನಾಲ್ಕು ವರ್ಷಗಳ ಅಲೈಡ್ ಹೆಲ್ತ್ ಸಯನ್ಸ್ ಪದವಿ ಕೋರ್ಸುಗಳಾದ ಅನಸ್ಥೆಶಿಯ ಟೆಕ್ನೋಲೊಜಿ, ಅಪರೇಶನ್ ಥಿಯೇಟರ್ ಟೆಕ್ನೋಲೊಜಿ, ಲ್ಯಾಬ್ ಟೆಕ್ನೋಲೊಜಿ, ಇಮೇಜಿಂಗ್ ಟೆಕ್ನೋಲೊಜಿ, ಒಪ್ಟೋಮೆಟ್ರಿ, ಡಯಾಲಿಸಿಸ್ ಟೆಕ್ನೊಲೊಜಿಗಳ ಪ್ರವೇಶಾತಿ ಕೂಡಾ ಮಂಗಳಾ ಸಮೂಹ ವಿದ್ಯಾ ಸಂಸ್ಥೆಗಳಲ್ಲಿ ಪ್ರಾರಂಭಿಸಲಾಗಿದೆ. ಅಲೈಡ್ ಹೆಲ್ತ್ ಸಯನ್ಸಸ್ ಕೋರ್ಸಿಗೆ ಪ್ರವೇಶ ಪಡೆಯಲು ವಿಜ್ಞಾನ ವಿಷಯದಲ್ಲಿ ಪಿಯುಸಿಯಲ್ಲಿ ಕನಿಷ್ಟ ೪೫ ಅಂಕಗಳನ್ನು ಪಡೆದಿರಬೇಕು ಅಥವಾ ಪಾರಾ ಮೆಡಿಕಲ್ ಡಿಪ್ಲೊಮಾ ಪಾಸಾದವರಿಗೆ ಅವರು ಕಲಿತ ವಿಷಯದಲ್ಲಿ ಪ್ರವೇಶ ಪಡೆದು ೩ ವರ್ಷಗಳಲ್ಲಿ ಪದವಿಯನ್ನು ಗಳಿಸಬಹುದು.

ಇಲ್ಲಿ ಕಲಿತ ಸುಮಾರು ೬೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಜೀವನದ ದಾರಿಯನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ಪ್ರತಿ ವರ್ಷ ಸಾಧಾರಣ ೨೫ ರಿಂದ ೩೫ರಷ್ಟು ವಿದ್ಯಾರ್ಥಿಗಳು ಉಚಿತ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಪೂರ್ವಾಂಚಲ ಪ್ರದೇಶಗಳಾದ ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ, ನೆರೆಯ ರಾಷ್ಟ್ರಗಳಾದ ನೇಪಾಲ ಮತ್ತು ಭೂತಾನ್ ಗಳಿಂದ ಉಚಿತ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಸ್ಸಾಂ, ಮಿಜೊರಾಂ, ಉತ್ತರ ಪ್ರದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿ ಬಂದು ವಿದ್ಯಾಭ್ಯಾಸ ಮಾಡುತ್ತಿರುವುದು ಸಂಸ್ಥೆಯ ಹಿರಿಮೆಯನ್ನು ಎತ್ತಿ ಹಿಡಿಯುತ್ತದೆ.

ಕಾಲೇಜಿನ ನೇರ ಪ್ರವೇಶಾತಿ ಮತ್ತು ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ನಂ. ೯೬೩೨೧೨೪೭೧೭ಕ್ಕೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.