ಸಾರಾಂಶ
ಮಾರುಕಟ್ಟೆ ಪ್ರಾರಂಭವಾದ ದಿನಗಳಲ್ಲಿ ಕೆ.ಜಿ ಒಂದಕ್ಕೆ 280 ರು. ಕೊಡುತ್ತಿದ್ದ ಕಂಪನಿಗಳು ಏಕಾಏಕಿ ದರವನ್ನು ಐವತ್ತು ರು. ಕಡಿಮೆ ಮಾಡಿದ್ದು, ರೈತರು ಕಷ್ಟಪಟ್ಟು ಬೆಳೆದ ತಂಬಾಕಿಗೆ ಈ ರೀತಿ ಕತ್ತು ಹಿಸುಕುತ್ತಿರುವುದು ಖಂಡನೀಯ ಕೃತ್ಯವಾಗಿದೆ.
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ವಿದೇಶಿ ತಂಬಾಕು ಖರೀದಿ ಕಂಪನಿಗಳು ಭಾರತದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ನೇರವಾಗಿ ಭಾಗವಹಿಸಬೇಕೆಂದು ಕರ್ನಾಟಕ ಹಸಿರು ಸೇನೆ ವಾಸುದೇವ್ ಮೇಟಿ ಬಣದ ತಾಲೂಕು ಅಧ್ಯಕ್ಷ ಸುಂದರೇಗೌಡ ಆಗ್ರಹಿಸಿದರು.ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆ ಮುಖ್ಯದ್ವಾರದ ಗೇಟಿಗೆ ಬೀಗ ಹಾಕಿ ಧರಣಿ ನಿರತ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶದ ಪ್ರತಿಷ್ಠಿತ ತಂಬಾಕು ಖರೀದಿ ಕಂಪನಿಯೊಂದು ರೈತರನ್ನು ಮೇಲೆ ಎತ್ತುವುದರ ಬದಲಾಗಿ ರೈತರು ಬೆವರು ಸುರಿಸಿ ಬೆಳೆದ ತಂಬಾಕಿಗೆ ಕಡಿಮೆ ದರ ನೀಡಿ ರೈತರನ್ನು ಧಮನ ಮಾಡುವ ಕಂಪನಿಯಾಗಿದೆ. ಈ ಒಂದು ಕಂಪನಿ ಎಲ್ಲಾ ಕಂಪನಿಯವರು ಕಡಿಮೆ ಬೆಲೆಗೆ ತೆಗೆದುಕೊಳ್ಳುವ ತಂಬಾಕನ್ನು ತಾನೇ ಖರೀದಿ ಮಾಡಿ ಆ ತಂಬಾಕನ್ನು ವಿದೇಶಕ್ಕೆ ಮಾರಾಟ ಮಾಡುತ್ತದೆ ಭಾರತದ ತಂಬಾಕು ಬೆಳೆಗಾರರಿಗೆ ಕೇವಲ ಶೇ. 10 ದರ ನೀಡಿ ಖರೀದಿ ಮಾಡುತ್ತಿದ್ದು, ಶೇ. 90 ಲಾಭ ಪಡೆಯುತ್ತಿದೆ. ವಿದೇಶಿ ತಂಬಾಕು ಖರೀದಿದಾರರನ್ನು ಭಾರತ ದೇಶಕ್ಕೆ ಬಂದು ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಭಾಗವಹಿಸುವುದನ್ನು ವ್ಯವಸ್ಥಿತವಾಗಿ ತಡೆಯುವಲ್ಲಿ ಸಫಲವಾಗಿದೆ ವಿದೇಶಿ ಕಂಪನಿಯ ತಂಬಾಕು ಖರೀದಿದಾರರು ಭಾಗವಹಿಸಿದರೆ ಕೆಜಿ ಒಂದಕ್ಕೆ ಸಾವಿರ ರೂಪಾಯಿ ಸಿಗುವುದರಲ್ಲಿ ಸಂಶಯವಿಲ್ಲ, ಆದ್ದರಿಂದ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ ತಂಬಾಕು ಹರಾಜು ಪ್ರಕ್ರಿಯೆಯಲ್ಲಿ ವಿದೇಶಿ ಕಂಪನಿಗಳನ್ನು ಭಾಗವಹಿಸಲು ಅನುವು ಮಾಡಿಕೂಡಬೇಕೆಂದು ಆಗ್ರಹಿಸಿದರು.ಮಾರುಕಟ್ಟೆ ಪ್ರಾರಂಭವಾದ ದಿನಗಳಲ್ಲಿ ಕೆ.ಜಿ ಒಂದಕ್ಕೆ 280 ರು. ಕೊಡುತ್ತಿದ್ದ ಕಂಪನಿಗಳು ಏಕಾಏಕಿ ದರವನ್ನು ಐವತ್ತು ರು. ಕಡಿಮೆ ಮಾಡಿದ್ದು, ರೈತರು ಕಷ್ಟಪಟ್ಟು ಬೆಳೆದ ತಂಬಾಕಿಗೆ ಈ ರೀತಿ ಕತ್ತು ಹಿಸುಕುತ್ತಿರುವುದು ಖಂಡನೀಯ ಕೃತ್ಯವಾಗಿದೆ. ರೈತರಿಗೆ ಗೊಬ್ಬರದ ಬೆಲೆ ಕೂಲಿ ಬೆಲೆ ಸೌದೆ ಬೆಲೆ ಹೆಚ್ಚಾಗಿದ್ದು, ರೈತರಿಗೆ ಒಂದು ರೂಪಾಯಿ ಕೂಡ ಉಳಿಯುತ್ತಿಲ್ಲ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಎಲ್ಲಾ ಸಂಘಗಳು ಒಗ್ಗಟ್ಟಾಗಿವೆ, ಆದರೆ ರೈತ ಸಂಘಗಳು ಯಾಕೆ ಒಗ್ಗಟ್ಟಾಗಿಲ್ಲ ಎಂದರೆ ರೈತ ಸಂಘವನ್ನು ಒಡೆಯುವ ಕುತಂತ್ರಿಗಳಿದ್ದಾರೆ, ಇದನ್ನು ಅರಿತು ರೈತರೆಲ್ಲ ಒಗ್ಗಟ್ಟಾಗಿ ಈ ಹೋರಾಟದಲ್ಲಿ ಭಾಗವಹಿಸಬೇಕೆಂದು ಅವರು ಹೇಳಿದರು.
ಮಾಜಿ ಶಾಸಕ ಎಚ್.ಸಿ. ಬಸವರಾಜು. ಬಿಜೆಪಿ ಮುಖಂಡ ಸೋಮಶೇಖರ, ರೈತ ಸಂಘ ಜಿಲ್ಲಾಧ್ಯಕ್ಷ ಸುನಿಲ್, ಜಿಲ್ಲಾ ಸಂಚಾಲಕ ಅರುಣ್ ಕುಮಾರ್, ಮುಖಂಡರಾದ ಈ.ಆರ್. ಮಂಜುನಾಥ್, ರಫೀಕ್ ಮಾದೇಗೌಡ, ಸೈಯದ್ ಅಬ್ದುಲ್ಲಾ ಫಯಾಜ್, ಕುಮಾರ್, ಪ್ರಕಾಶ್, ಅನುಸೂಯ, ಗಂಗಾಧರ, ಗಣೇಶ, ತಂಬಾಕು ಮಂಡಳಿ ವ್ಯವಸ್ಥಾಪಕ ಲಕ್ಷ್ಮಣ್ ರಾವ್,ದೆ ನೂರಾರು ಮಂದಿ ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.