ಜೆಎಸ್‌ಎಸ್‌ ಜನ್‌ ಶಿಕ್ಷಣ್‌ ಸಂಸ್ಥಾನ್‌ ನಿಂದ ವೃತ್ತಿ ಕೌಶಲ್ಯ ತರಬೇತಿ ಪ್ರಮಾಣ ಪತ್ರ ವಿತರಣೆ

| Published : Apr 08 2025, 12:37 AM IST

ಜೆಎಸ್‌ಎಸ್‌ ಜನ್‌ ಶಿಕ್ಷಣ್‌ ಸಂಸ್ಥಾನ್‌ ನಿಂದ ವೃತ್ತಿ ಕೌಶಲ್ಯ ತರಬೇತಿ ಪ್ರಮಾಣ ಪತ್ರ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರಿಂದ ತುಂಬಾ ದೂರವಿದ್ದರೂ ಇಂತಹ ಪ್ರದೇಶಗಳಿಗೆ ತರಬೇತಿ ನೀಡಿರುವುದು ನಿಜಕ್ಕೂ ನಮಗೆ ತುಂಬಾ ಹೆಮ್ಮೆ

ಕನ್ನಡಪ್ರಭ ವಾರ್ತೆ ಎಚ್‌.ಡಿ. ಕೋಟೆತಾಲೂಕಿನ ಕಾಡಂಚಿನ ಗ್ರಾಮವಾದ ಮಚೂರಿನಲ್ಲಿ ಜೆಎಸ್‌ಎಸ್‌ ಜನ್‌ ಶಿಕ್ಷಣ್‌ ಸಂಸ್ಥಾನ್‌ ಹಾಗೂ ಜೂಟ್ ಪ್ರಾಡಕ್ಟ್ ಮೇಕರ್ ನಿಂದ ವೃತ್ತಿ ಕೌಶಲ್ಯ ತರಬೇತಿ ಪಡೆದ ತರಬೇತುದಾರರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕ ರಮೇಶ್ ಮಾತನಾಡಿ, ಸುಮಾರು 9 ತಾಲೂಕುಗಳಲ್ಲಿ ತರಬೇತಿ ನಡೆಯುತ್ತಿದ್ದು, 1,800 ಜನರು ತರಬೇತಿ ಪಡೆದಿದ್ದಾರೆ. ಅದರಲ್ಲಿ ಎಚ್ ಡಿ ಕೋಟೆ ತಾಲೂಕಿನ ಕಾಡಂಚಿನ ಪ್ರದೇಶವಾದ ಮಚೂರು ಮತ್ತು ವಡಕನಮಾಳ ಗ್ರಾಮದಲ್ಲಿ ಎರಡು ರೀತಿಯ ಟೈಲರಿಂಗ್ ಮತ್ತು ಜೂಟ್ ತರಬೇತಿಯನ್ನು ಪಡೆದಿದ್ದು ಫಲಾನುಭವಿಗಳು ತಮ್ಮ ಬದುಕನ್ನು ಆರ್ಥಿಕವಾಗಿ ಸ್ವಾವಲಂಬನೆ ಜೀವನವನ್ನು ಕಟ್ಟಿಕೊಳ್ಳಲು ನಮ್ಮ ಸಂಸ್ಥೆಯು ತರಬೇತಿ ನೀಡಿದೆ ಎಂದರು.ಮೈಸೂರಿಂದ ತುಂಬಾ ದೂರವಿದ್ದರೂ ಇಂತಹ ಪ್ರದೇಶಗಳಿಗೆ ತರಬೇತಿ ನೀಡಿರುವುದು ನಿಜಕ್ಕೂ ನಮಗೆ ತುಂಬಾ ಹೆಮ್ಮೆಯಾಗಿದೆ, ಏಕೆಂದರೆ ಇಲ್ಲಿನ ಜನರಿಗೆ ಅತಿ ಹೆಚ್ಚು ಅವಶ್ಯಕತೆ ಇದ್ದು, ಅವರ ಆರ್ಥಿಕ ಬದುಕು ಹೆಚ್ಚಿಸಲು ಅವಕಾಶ ಮಾಡಿಕೊಟ್ಟಿದೆ. ಈ ಪ್ರಮಾಣ ಪತ್ರದಿಂದ ನೀವು ಎಲ್ಲಿ ಬೇಕಾದರೂ ಸ್ವಯಂ ಉದ್ಯೋಗವನ್ನು ಮಾಡಬಹುದು ಇದರ ಮುಖಾಂತರ ಬ್ಯಾಂಕ್‌ಗಳಲ್ಲೂ ಸಬ್ಸಿಡಿ ಸಾಲ ಪಡೆದು ಸ್ವಂತ ದುಡಿಮೆಯನ್ನು ಮಾಡಬಹುದು, ಹೀಗೆ ನೀವು ಮಾಡುವ ಉದ್ಯೋಗದಿಂದ ನಿಮ್ಮ ಭವಿಷ್ಯ ಉಜ್ವಲವಾಗಲಿ ನಿಮ್ಮ ಕುಟುಂಬ ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿ ಎಂದು ಹೇಳಿದರು.ಗ್ರಾಮತ್ತೋನ್‌ ಫೌಂಡೇಶನ್‌ ಸಿಇಒ ಲಕ್ಷ್ಮೀ ಮಾತನಾಡಿ, ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯು ಸಹಯೋಗದೊಂದಿಗೆ ಟೈಲರಿಂಗ್ ಹಾಗೂ ಜೂಟ್ ತರಬೇತಿ ನೀಡಿರುವುದು ತುಂಬಾ ಹೆಮ್ಮೆಪಡುವ ವಿಷಯವಾಗಿದೆ, ಏಕೆಂದರೆ ಕಾಡಂಚಿನ ಪ್ರದೇಶವಾಗಿದ್ದು, ಆದರೂ ಸಹ ನಿರ್ದೇಶಕ ರಮೇಶ್ ಅವರು ಇಂತಹ ಕಾಡಿನಲ್ಲಿರುವ ಹಾಡಿ ಜನರಿಗೆ ತರಬೇತಿಯನ್ನು ಖಂಡಿತ ನಾವು ಕೊಡುತ್ತೇವೆ ಎಂದು ಹೇಳಿದ ರಮೇಶ್‌ ಅವರಿಗೆ ಕೃತಜ್ಞತೆ ಸಲ್ಲಿಸಿದರು.ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯ ಸಹಾಯಕ ಕಾರ್ಯಕ್ರಮ ಅಧಿಕಾರಿ ಸುರೇಶ್, ವೃತ್ತಿ ಬೋಧಕಿ ಸವಿತಾ ಹಾಗೂ ಗ್ರಾಮೋತ್ತಮ್ ಫೌಂಡೇಶನ್ ಮಣಿರಾಜ್ ಸ್ವಾಮಿ ಗೌಡರು ಹಾಗೂ ಫಲಾನುಭವಿಗಳು ಭಾಗವಹಿಸಿದ್ದರು.-------------------