ಅಂತರ ಕಾಲೇಜು ವಾಲಿಬಾಲ್ ಪಂದ್ಯಾವಳಿಗೆ ಚಾಲನೆ

| Published : Feb 10 2024, 01:47 AM IST

ಸಾರಾಂಶ

ದೊಡ್ಡಬಳ್ಳಾಪುರ: ಕ್ರೀಡಾಪಟುಗಳು ತಂಡದಲ್ಲಿ ಹೊಂದಾಣಿಕೆಯಿಂದ ಆಟ ಆಡಿದರೆ ಮಾತ್ರ ಗುಂಪುಗಳ ಆಟಗಳಲ್ಲಿ ಯಶಸ್ವಿ ಸಾಧ್ಯ ಎಂದು 5ನೇ ಕರ್ನಾಟಕ ಬೆಟಾಲಿಯನ್‌ ಎನ್‌ಸಿಸಿ ಅಧಿಕಾರಿ, ಲೆಫ್ಟಿನೆಂಟ್ ಕರ್ನಲ್ ಲುನಿ ಬಸವರಾಜ್ ಹೇಳಿದರು.

ದೊಡ್ಡಬಳ್ಳಾಪುರ: ಕ್ರೀಡಾಪಟುಗಳು ತಂಡದಲ್ಲಿ ಹೊಂದಾಣಿಕೆಯಿಂದ ಆಟ ಆಡಿದರೆ ಮಾತ್ರ ಗುಂಪುಗಳ ಆಟಗಳಲ್ಲಿ ಯಶಸ್ವಿ ಸಾಧ್ಯ ಎಂದು 5ನೇ ಕರ್ನಾಟಕ ಬೆಟಾಲಿಯನ್‌ ಎನ್‌ಸಿಸಿ ಅಧಿಕಾರಿ, ಲೆಫ್ಟಿನೆಂಟ್ ಕರ್ನಲ್ ಲುನಿ ಬಸವರಾಜ್ ಹೇಳಿದರು. ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಉತ್ತರ ವಲಯ ಪುರುಷರ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಾಲಿಬಾಲ್ ಸೂಕ್ಷ್ಮ ಪ್ರಜ್ಞೆಯ ಕೌಶಲ ಹಾಗೂ ದೈಹಿಕ ಸದೃಢತೆಯ ಕ್ರೀಡೆಯಾಗಿದ್ದು, ತಂತ್ರಗಾರಿಕೆಯೂ ಮುಖ್ಯವಾಗುತ್ತದೆ ಎಂದರು. ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಕ್ರೀಡಾಪಟುಗಳು ಸತತ ಅಭ್ಯಾಸ ಮಾಡಬೇಕು. ಪೂರ್ವಸಿದ್ಧತೆ ಬಿದ್ದರೆ ಯಶಸ್ವಿಯಾಗಲು ಸಾಧ್ಯವಿಲ್ಲ. ಸದೃಢವಾದ ದೇಹ ಉಳ್ಳವನಿಗೆ ಸದೃಢವಾದ ಮನಸ್ಸು ಇರುತ್ತದೆ ಎಂಬುದು ಅನುಭವದ ಮಾತು ಎಂದು ತಿಳಿಸಿದರು. ಪ್ರಾಂಶುಪಾಲ ಡಾ.ವಿಜಯ್ ಕಾರ್ತಿಕ್, ಉಪ ಪ್ರಾಂಶುಪಾಲ ಡಾ.ಶಿವಪ್ರಸಾದ್, ಮಾನವ ಸಂಪನ್ಮೂಲ ಅಧಿಕಾರಿ ಎನ್.ಎಸ್.ಬಾಬುರೆಡ್ಡಿ, ದೈಹಿಕ ಶಿಕ್ಷಣ ನಿರ್ದೇಶಕ ದಾದಾಪೀರ್, ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಮಾಜಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಜೇಶ್, ಮನ್ಸೂರ್, ಹೇಮಂತ್ ಕುಮಾರ್ ,ವಿ.ಶ್ರೀನಿವಾಸ್ ಹಾಗೂ ಶ್ರೀಕಾಂತ್ ಮತ್ತಿತರರು ಭಾಗವಹಿಸಿದ್ದರು.

ಪಂದ್ಯಾವಳಿಯಲ್ಲಿ ವಿಟಿಯು ಉತ್ತರ ವಲಯ ವ್ಯಾಪ್ತಿಯ 20 ತಂಡಗಳು ಭಾಗವಹಿಸಿದ್ದು, ಶುಕ್ರವಾರ ಬೆಳಗ್ಗೆ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಾವಳಿಗಳು ನಡೆಯಲಿವೆ.8ಕೆಡಿಬಿಪಿ1-

ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಟಿಯು ಅಂತರ ಕಾಲೇಜು ವಾಲಿಬಾಲ್ ಪಂದ್ಯಾವಳಿಗೆ ಲೆಫ್ಟಿನೆಂಟ್ ಬಸವರಾಜು ಚಾಲನೆ ನೀಡಿದರು. ಪ್ರಾಂಶುಪಾಲ ಡಾ.ವಿಜಯ್ ಕಾರ್ತಿಕ್, ಉಪ ಪ್ರಾಂಶುಪಾಲ ಡಾ.ಶಿವಪ್ರಸಾದ್, ಮಾನವ ಸಂಪನ್ಮೂಲ ಅಧಿಕಾರಿ ಬಾಬುರೆಡ್ಡಿ, ದೈಹಿಕ ಶಿಕ್ಷಣ ನಿರ್ದೇಶಕ ದಾದಾಪೀರ್ ಇತರರಿದ್ದರು.