ಸಂಸ್ಕಾರ, ಸಂಸ್ಕೃತಿ, ಸಂಬಂಧ ಕಣ್ಮರೆ

| Published : Mar 02 2025, 01:22 AM IST

ಸಾರಾಂಶ

ಸಂಸ್ಕಾರ, ಸಂಸ್ಕೃತಿ, ಸಂಬಂಧ ಮಾಯವಾಗುತ್ತಿವೆ

ದಾಂಡೇಲಿ: ನೆರೆ ಹೊರೆಯವರನ್ನು ಪ್ರೀತಿಸುವುದನ್ನು ನಾವು ನಮ್ಮ ಮಕ್ಕಳಿಗೆ ಕಲಿಸುತ್ತಿಲ್ಲ. ಪರಸ್ಪರ ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡುತ್ತಿಲ್ಲ. ಮನುಷ್ಯ ಸಂಬಂಧಗಳಿಗೆ ಕೈಯಾರೇ ನಾವೇ ಕದವಿಟ್ಟುಕೊಂಡಿದ್ದೇವೆ. ಪರಿಣಾಮ ಸಂಸ್ಕಾರ, ಸಂಸ್ಕೃತಿ, ಸಂಬಂಧ ಮಾಯವಾಗುತ್ತಿವೆ ಎಂದು ಸಾಹಿತಿ ಡಾ.ಪ್ರಜ್ಞಾ ಮತ್ತಿಹಳ್ಳಿ ನುಡಿದರು.ಅವರು ದಾಂಡೇಲಿ ತಾಲೂಕು ಸಮೀಪದ ಆಲೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಸಿಗೆ ನೀರು ಹಾಕಿ, ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಮ್ಮೇಳನ ದ್ವಾರಗಳನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಅಷ್ಪಾಕ್‌ ಶೇಖ್, ಸಾಹಿತ್ಯ ಸಮ್ಮೇಳನಗಳು ನಿಜಕ್ಕೂ ನಮಗೊಂದು ಬದುಕಿನ ಪಾಠ ಕಲಿಸುತ್ತದೆ. ಕನ್ನಡದ ಬಗ್ಗೆ ಪ್ರತಿಯೊಬ್ಬರಿಗೂ ಕಾಳಜಿ ಇರಬೇಕು ಎಂದರು.

ಸಮ್ಮೇಳನಾಧ್ಯಕ್ಷ ಯು.ಎಸ್. ಪಾಟೀಲ ಮಾತನಾಡಿ, ಮನುಷ್ಯನಿಗೆ ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದ ಸೌಂದರ್ಯವೇ ಮುಖ್ಯ. ಜೀವನದಲ್ಲಿ ನಾವು ಏನು ಸತ್ಕಾರ್ಯಗಳ ಬಗ್ಗೆ ಜನರು ಆಡಿಕೊಳ್ಳುವ ಹಾಗೆ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಗ್ರಾಮೀಣ ಭಾಗದ ರಸ್ತೆ ಹಾಗೂ ಇತರ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಬೇಕು. ಕೆಲಸ ನೀಡುವ ಉದ್ಯಮಗಳನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಲ್.ಜಮಾದಾರ ಧ್ವಜ ಹಸ್ತಾಂತರಿಸಿ ಶುಭ ಕೋರಿದರು. ಪುಸ್ತಕ ಮಳಿಗೆ ಉದ್ಘಾಟಿಸಿದ ಆಲೂರಿನ ಗ್ರಾಪಂ ಅಧ್ಯಕ್ಷ ನೂರಜಹಾನ ನದಾಫ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಟಿ.ಸಿ. ಹಾದಿಮನಿ, ಜಿಪಂ ಮಾಜಿ ಸದಸ್ಯ ವಾಮನ ಮಿರಾಶಿ, ನಗರಸಭಾ ಉಪಾಧ್ಯಕ್ಷೆ ಶಿಲ್ಪಾ ಕೋಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚವ್ಹಾಣ, ವೆಸ್ಟ್ಕೊಸ್ಟ್ ಕಾರ್ಖಾನೆಯ ರಾಘವೇಂದ್ರ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ ಮಾತನಾಡಿದರು.

ತಹಶೀಲ್ದಾರ ಶೈಲೇಶ ಪರಮಾನಂದ, ಪೌರಾಯುಕ್ತ ವಿವೇಕ ಬನ್ನೆ, ತಾಪಂ ಮಾಜಿ ಸದಸ್ಯ ಗಿರೀಶ ಠೋಸೂರ, ಸಾಹಿತಿ ದುಂಡಪ್ಪ ಗೂಳೂರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯಕ ಬಾವಿಕೇರಿ, ಗ್ರಾಪಂ ಉಪಾಧ್ಯಕ್ಷೆ ನಾಗರತ್ನಾ ನಾಯ್ಕ ಇದ್ದರು.

ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಅಧ್ಯಕ್ಷತೆ ವಹಿಸಿದ್ದರು. ದಾಂಡೇಲಿ ಕಸಾಪ ಅಧ್ಯಕ್ಷ ನಾರಾಯಣ ನಾಯ್ಕ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ ಸಂದೇಶ ವಾಚಿಸಿದರು. ನಾಗೇಶ ನಾಯ್ಕ, ವೇದಿಕೆ ಮತ್ತು ದ್ವಾರಗಳ ಪರಿಚಯಿಸಿದರು. ಗೌರವ ಕಾರ್ಯದರ್ಶಿ ಪ್ರವೀಣ ನಾಯ್ಕ ವಂದಿಸಿದರು. ಆಶಾ ದೇಶಭಾಂಡಾರಿ ಮತ್ತು ಸುಭಾಷ ನಾಯಕ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಡಾ.ಶೇಖರ ಹಂಚಿನಾಳಮಠ, ಸುರೇಶ ನಾಯಕ, ಸೀಮಾಕಿಣಿ, ಜಾನು ಸಗ್ಗು ಪಾವಣೆ, ಹನುಮಂತ ಕಾರ್ಗಿ, ಶಿವರಾಜ ಗೋಣಿ, ದೀಪಾಲಿ ಸಾಮಂತ, ಮಹಾಂತೇಶ ಅಂದಾಕರ, ಅರ್ಜುನ ಕಾಂಬ್ರೇಕರ, ಭರಮಣ್ಣಾ ಹನುಮಂತ ಕದಂ, ಪ್ರಕಾಶ ಪಿಶಾಳೆ ಮತ್ತು ರಾಮಪ್ಪ ಎಚ್ ಸಿದ್ದರ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.