ವೃತ್ತಿ ರಂಗಭೂಮಿ ಕಣ್ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿ

| Published : Mar 30 2024, 12:47 AM IST

ವೃತ್ತಿ ರಂಗಭೂಮಿ ಕಣ್ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿ
Share this Article
  • FB
  • TW
  • Linkdin
  • Email

ಸಾರಾಂಶ

ವೃತ್ತಿ ರಂಗಭೂಮಿ ಪರಂಪರೆಯ ಕಣ್ಮರೆಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ರಂಗಭೂಮಿ ಕಲಾವಿದರಿಗೆ ಸರ್ಕಾರ ಪ್ರೋತ್ಸಾಹಿಸಬೇಕು. ವಿಜಯಪುರ ಕಿತ್ತೂರ ರಾಣಿ ಚನ್ನಮ್ಮ ನಾಟಕ ಮಂದಿರ ಪುನರ್ ನಿರ್ಮಾಣ ಮಾಡಿ ನಿರಂತರ ನಾಟಕಗಳು ನಡೆಯುವಂತಾಗಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವೃತ್ತಿ ರಂಗಭೂಮಿ ಪರಂಪರೆಯ ಕಣ್ಮರೆಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ರಂಗಭೂಮಿ ಕಲಾವಿದರಿಗೆ ಸರ್ಕಾರ ಪ್ರೋತ್ಸಾಹಿಸಬೇಕು. ವಿಜಯಪುರ ಕಿತ್ತೂರ ರಾಣಿ ಚನ್ನಮ್ಮ ನಾಟಕ ಮಂದಿರ ಪುನರ್ ನಿರ್ಮಾಣ ಮಾಡಿ ನಿರಂತರ ನಾಟಕಗಳು ನಡೆಯುವಂತಾಗಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಆಗ್ರಹಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆಯ ಭರಾಟೆಯಲ್ಲಿ ದೇಶದ, ನಾಡಿನ ನಾಟಕಗಳ ಪ್ರದರ್ಶನ ಕುಂಟಿತಗೊಂಡಿವೆ ಎಂದರು.

ಕಸಾಪ ಗೌರವ ಕೋಶಾಧ್ಯಕ ಡಾ.ಸಂಗಮೇಶ ಮೇತ್ರಿ ಮಾತನಾಡಿ, ನಾಟಕದಲ್ಲಿ ಭಾಷೆ, ಸಂಸ್ಕೃತಿ, ಓದು ಬರಹ, ಕಲೆ , ಸಂಗೀತ, ನೃತ್ಯ ಮುಂತಾದ ಸಂಕೀರ್ಣತೆ ಹೊಂದಿದ ರಂಗಭೂಮಿ ಕಲಾವಿದರು ಅತ್ಯಂತ ಅನುಭವಿಗಳು. ದೇಶದ ಅನೇಕ ಶ್ರೇಷ್ಠ ಸಿನಿಮಾಕ್ಕೆ ಬಂದವರೆಲ್ಲರೂ ರಂಗಭೂಮಿಯಿಂದ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್ .ಬಿ ಶೇಖ ಮಾತನಾಡಿ, ಉಸಿರೇ ನಾಟಕವೆಂದು ಬದುಕಿದವರು. ಕಿಸೆಯಲ್ಲಿ ಮೊಬೈಲ್‌ ಬಂದಾಗಿನಿಂದ ನಾಟಕಗಳ ಪ್ರದರ್ಶನ ಕುಂಠಿತವಾಗಿವೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಶ್ರೀಧರರ ಹೆಗಡೆ ವಹಿಸಿದ್ದರು. ಡಾ.ವಿ.ಡಿ ಐಹೊಳ್ಳಿ, ಡಾ.ದೊಡ್ಡಣ್ಣ ಬಜಂತ್ರಿ, ರಾಜಶ್ರೀ ಮೋಪಗಾರ, ಅಲಿಸಾಬ ಖಡಕೆ, ರಾಜು ಶಿವನಗುತ್ತಿ, ಬಸವಂತ ಹೂಗಾರ,ಶಾರದಾ ಪಾಟೀಲ, ಆರ್.ಜಿ ಬ್ಯಾಕೋಡ, ಲೋಲಮ್ಮ ಬೆಂಗಳೂರು, ನಂದಮ್ಮ ಹಿರೇಮಠ, ಲಕ್ಷ್ಮಿ ಹೆಗಡೆ, ಭೀಮಣ್ಣ ಬಜಂತ್ರಿ,ರಾಜಮ್ಮ ಹೆಗಡೆ, ಅಂಬುಜಮ್ಮ ಬೆಂಗಳೂರು, ಜನ್ನತಬಿ ಮುಲ್ಲಾ, ಹುಸೇನ ಜಹಾಗೀರದಾರ, ಭೀಮನಗೌಡ ಬಿರಾದಾರ, ಈರಣ್ಣ ಮೈಂದರಗಿ, ಎಸ್.ಎಸ್ ಕರಿಕಲ್ಮಣಿ, ಅರ್ಜುನ ಶಿರೂರ, ಜಿ.ಎಸ್ ಬಳ್ಳೂರ, ಪ್ರದೀಪ ನಾಯ್ಕೋಡಿ, ಮಹಾಂತೇಶಸ್ವಾಮಿ ಹೀರೆಮಠ ಮುಂತಾದವರು ಇದ್ದರು.

ಇದೇ ಸಂದರ್ಭದಲ್ಲಿ ರಂಗಭೂಮಿ ಕಲಾವಿದರ ಸಂಗಮೇಶ ಬದಾಮಿ ವಿಶ್ವ ರಂಗಭೂಮಿ ಸಂದೇಶ ವಾಚಿಸಿದರು ರಂಗ ಭೂಮಿಯ ಹಿರಿಯ ಸಂಘಟಿಕ ವಿಶ್ವೇಶ್ವರ ಸುರಪುರ, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ರಾಜಣ್ಣ ಜೇವರಗಿ, ರಂಗಸಮಾಜ ಕರ್ನಾಟಕ ಸರಕಾರ ಮಹಾಂತೇಶ ಗಜೇಂದ್ರಗಡ, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಜ್ಯೋತಿ ಮಂಗಳೂರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ದ್ರಾಕ್ಷಾಯಿಣಿ ಹುಡೇದ, ಲಲಿತಕಲಾ ಅಕಾಡೆಮಿಯ ಸದಸ್ಯೆ ರಾಜಶ್ರೀ ಮೋಪಗಾರ ಅವರನ್ನು ಸನ್ಮಾನಿಸಿದರು.