ಸಾರಾಂಶ
ಪಟ್ಟಣ ವ್ಯಾಪ್ತಿಯ ಮೀರಾಪುರಹಟ್ಟಿಯ 1008 ಮಹಾವೀರ ದಿಗಂಬರ ಜೈನ ಬಸದಿ ಕಟ್ಟಡ ನಿರ್ಮಾಣಕ್ಕೆ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ ₹2 ಲಕ್ಷ ಮೊತ್ತದ ಡಿಡಿಯನ್ನು ಚಿಕ್ಕೋಡಿ ಜಿಲ್ಲೆಯ ಜಿಲ್ಲಾ ನಿರ್ದೇಶಕ ವಿಠ್ಠಲ ಸಾಲಿಯನ ಬಸದಿ ಕಮಿಟಿ ಅವರಿಗೆ ಸೋಮವಾರ ವಿತರಿಸಿದರು.
ಕನ್ನಡಪ್ರಭ ವಾರ್ತೆ ಕಬ್ಬೂರ
ಪಟ್ಟಣ ವ್ಯಾಪ್ತಿಯ ಮೀರಾಪುರಹಟ್ಟಿಯ 1008 ಮಹಾವೀರ ದಿಗಂಬರ ಜೈನ ಬಸದಿ ಕಟ್ಟಡ ನಿರ್ಮಾಣಕ್ಕೆ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ ₹2 ಲಕ್ಷ ಮೊತ್ತದ ಡಿಡಿಯನ್ನು ಚಿಕ್ಕೋಡಿ ಜಿಲ್ಲೆಯ ಜಿಲ್ಲಾ ನಿರ್ದೇಶಕ ವಿಠ್ಠಲ ಸಾಲಿಯನ ಬಸದಿ ಕಮಿಟಿ ಅವರಿಗೆ ಸೋಮವಾರ ವಿತರಿಸಿದರು.ಸಂದರ್ಭದಲ್ಲಿ ಕಮಿಟಿ ಅಧ್ಯಕ್ಷ ಅಪ್ಪಸಾಹೇಬ ದಡ್ಡಿ, ಉಪಾಧ್ಯಕ್ಷ ಬಾಹುಬಲಿ ಹಂಜಿ, ಕಾರ್ಯದರ್ಶಿ ಭರತೇಶ ರೊಟ್ಟಿ,ಶಿಕ್ಷಕರಾದ ರಮೇಶ ಮಿಕಲಿ, ತಾಲೂಕು ಯೋಜನಾಧಿಕಾರಿ ನಾಮದೇವ ದೇಶಪಾಂಡೆ, ಗ್ರಾಮದ ಹಿರಿಯರು ಮತ್ತು ಜೈನ ಸಮಾಜದ ಹಿರಿಯರು, ವಲಯ ಮೇಲ್ವಿಚಾರಕ ಮಹಾಂತಯ್ಯ ಗೌರಿಮಠ ಸೇವಾಪ್ರತಿನಿಧಿ ನೇಮಣ್ಣ ರೊಟ್ಟಿ, ಒಕ್ಕೂಟದ ಅಧ್ಯಕ್ಷ ಶಾಲಾ ರೊಟ್ಟಿ, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.