ಸಾರಾಂಶ
ರಾಮನಗರ: ಕ್ರೀಡೆಯಲ್ಲಿ ಗೆಲುವು ಸಾಧಿಸಲು ಮತ್ತು ಭವಿಷ್ಯದ ಜೀವನದ ಯಶಸ್ಸನ್ನು ಸಂಪಾದಿಸಲು ವಿದ್ಯಾರ್ಥಿಗಳಿಗೆ ಶಿಸ್ತು ಅತ್ಯಗತ್ಯ. ಆಟದ ನಿಯಮಗಳಲ್ಲಿ, ಸಮಯ ಪಾಲನೆಯಲ್ಲಿ, ಕೆಲಸ ಕಾರ್ಯಗಳಲ್ಲಿ, ನಡೆ ನುಡಿಯಲ್ಲಿ, ಆಲೋಚನೆಗಳಲ್ಲಿ ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿಯೂ ಶಿಸ್ತುನ್ನು ಬಾಲ್ಯದಿಂದಲೇ ಅಳವಡಿಸಿಕೊಂಡರೆ ಇತರರಿಗಿಂತ ವೇಗವಾಗಿ ಉನ್ನತಿ ಹೊಂದಲು ಸಾಧ್ಯವಾಗುತ್ತದೆ ಎಂದು ಮಾಜಿ ಎಂಎಲ್‌ಸಿ ಸಿ.ಎಂ.ಲಿಂಗಪ್ಪ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ಬಿಡದಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಜ್ಞಾನ ವಿಕಾಸ್ ವಿದ್ಯಾ ಸಂಘ, ಶ್ರೀ ಬಸವೇಶ್ವರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸಂಯುಕ್ತವಾಗಿ ಏರ್ಪಡಿಸಿದ್ದ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕರು ಮತ್ತು ಬಾಲಕಿಯರು ರಾಜ್ಯಮಟ್ಟದ ಖೋ ಖೋ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿರುವ ಖೋ ಖೋ ಕ್ರೀಡಾಪಟುಗಳನ್ನು ಕಣ್ತುಂಬಿಕೊಂಡಾಗ ಅಖಂಡ ಕರ್ನಾಟಕವೇ ಬಿಡದಿಯಲ್ಲಿ ಬೀಡುಬಿಟ್ಟಿದೆ ಎಂದು ಭಾಸವಾಗುತ್ತಿದೆ. ಕ್ರೀಡಾಂಗಣದ ತುಂಬಾ ಯುವಜರ ದಂಡು ತುಂಬಿರುವುದು, ದೈಹಿಕ ಕಸರತ್ತಿನಲ್ಲಿ ಪಾಲ್ಗೊಂಡಿರುವುದು, ಖೋ ಖೋ ಪಂದ್ಯಗಳನ್ನು ಆಡುತ್ತಿರುವುರಿಂದ ನಮ್ಮ ಕಾಲೇಜಿನ ಆಟದ ಮೈದಾನ ಕ್ರೀಡಾ ರಾಜ್ಯವೇ ಆಗಿ ಮಾರ್ಪಟ್ಟಿದೆ ಎಂದರು.
ನಗರಸಭಾ ಸದಸ್ಯರಾದ ಕೆ.ಶೇಷಾದ್ರಿ (ಶಶಿ) ಮಾತನಾಡಿ, ಆಟೋಟಗಳಲ್ಲಿ ಭಾಗವಹಿಸುವುದು ಯುವಕರಲ್ಲಿ ದೈಹಿಕ ಸದೃಢತೆಯನ್ನು ಸಾಧಿಸಲು ನೆರವಾಗುತ್ತದೆ. ಒಂದೇರಡು ದಶಕಗಳ ಹಿಂದೆ ವ್ಯಾಪಕವಾಗಿ ಮೊಬೈಲ್ ಇರಲಿಲ್ಲ. ಯುವಜನರು ಮೈದಾನಗಳಲ್ಲಿ ವೈವಿಧ್ಯ ಆಟೋಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಗ್ರಾಮೀಣ ಕ್ರೀಡಾ ಸ್ಪರ್ದೆಗಳಲ್ಲಿ ಭಾಗವಹಿಸಿ ದೈಹಿಕ ಮತ್ತು ಮಾನಸಿಕ ಪ್ರೌಢಿಮೆ ಗಳಿಸುತ್ತಿದ್ದರು. ಇಂದು ಮೋಬೈಲ್ ಹಾವಳಿಯ ನಡುವೆಯೂ ಇಷ್ಟೊಂದು ಸಂಖ್ಯೆಯಲ್ಲಿ ಕ್ರೀಡಾಪಟುಗಳು ಖೋ ಖೋ ಆಟ ಆಡುತ್ತಿರುವುದು ಸಂತೊಷ ತಂದಿದೆ. ಸೋಲು ಮತ್ತು ಗೆಲವು ಮುಖ್ಯವಲ್ಲ. ರಾಜ್ಯಮಟ್ಟ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವಹಿಸುವುದೇ ಹೆಮ್ಮೆಯ ವಿಷಯವಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ರಾಮನಗರ ಜಿಲ್ಲಾ ಉಪ ನಿರ್ದೇಶಕಿ ಎಂ.ಪಿ.ನಾಗಮ್ಮ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆಯು ಸ್ನೇಹ, ಸಾಮರಸ್ಯ ಮತ್ತು ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ನೆರವಾಗುತ್ತದೆ. ಕ್ರೀಡಾಪಟುಗಳಲ್ಲಿ ಸ್ಥಿತಪ್ರಜ್ಞತೆ ಬಲಗೊಳ್ಳುತ್ತದೆ ಎಂದು ಹೇಳಿದರು.
ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ.ಶಿವಣ್ಣ ಕೊತ್ತೀಪುರ, ಶ್ರೀ ಬಸವೇಶ್ವರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಧರ ಹೆಗಡೆ , ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎನ್.ವೇಣುಗೋಪಾಲ್, ಕಾರ್ಯಾಧ್ಯಕ್ಷ ಬಿ.ಉಮೇಶ್, ಜ್ಞಾನ ವಿಕಾಸ ವಿದ್ಯಾ ಸಂಘದ ಕಜಾಂಚಿ ಬಿ.ಎನ್.ಗಂಗಾಧರಯ್ಯ, ನಿರ್ದೇಶಕರಾದ ಎಲ್.ಸತೀಶ್ ಚಂದ್ರ, ಬಿ.ಆರ್.ನಾಗರಾಜು, ಸಿ ಲೋಕೇಶ್, ಸುಶೀಲಾ ಜೈನ್, ಕ್ರೀಡಾ ತರಬೇತುದಾರರಾದ ಕೆ.ಶರತ್ ಕುಮಾರ್, ಕೆ.ಆರ್.ಶ್ರೀನಿವಾಸ್, ನವೀನ್ ಕುಮಾರ್, ವೀಕ್ಷಕರಾದ ಶಿವರಾಜ್ ಗುಂಡೆ, ರಮೇಶ್ ಛಲವಾದಿ, ರಾಜಾನಾಯ್ಕ್ ಆರ್.ಕೆ. ಪ್ರಾಂಶುಪಾಲರುಗಳಾದ ಎಂ.ಎನ್.ಪ್ರದೀಪ್, ಹೇಮೇಗೌಡ, ರಾಜಣ್ಣ, ರೇಖಾ, ಓಂಕಾರಮೂರ್ತಿ, ರೇಖಾ, ಹನುಮಂತರಾಯಪ್ಪ, ಉಪನ್ಯಾಸಕರಾದ ಡಾ.ಕನ್ಯಾಕುಮಾರ್, ಎಂ.ಪ್ರದೀಪ್, ಚಿಕ್ಕಪುಟ್ಟಯ್ಯ, ರೂಪ, ಶಾರದಮ್ಮ, ಶರವಣ್, ಜ್ಞಾನವಿಕಾಸ ಪ್ರೌಢಶಾಲೆಯ ಗಿರೀಶ್ ಉಪಸ್ಥಿತರಿದ್ದರು.30ಕೆಆರ್ ಎಂಎನ್ 1.ಜೆಪಿಜಿ
ಬಿಡದಿಯಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕರು ಮತ್ತು ಬಾಲಕಿಯರು ರಾಜ್ಯಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಕ್ರೀಡಾಜ್ಯೋತಿ ಸ್ವೀಕಾರ ಮಾಡಿದರು.