ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿ ಉದ್ಯಮಕ್ಕೆ ಪ್ಯಾಶನ್ ಮತ್ತು ನೆಟವರ್ಕ್ ಸಂಪರ್ಕ ಅಗತ್ಯವಾಗಿದೆ. ಕೌಶಲ್ಯ ಮತ್ತು ಜ್ಞಾನದಿಂದ ಹೊಸ ಉದ್ಯಮ ಪ್ರಾರಂಭಿಸಬಹುದು ಎಂದು ಬೆಂಗಳೂರಿನ ಎಫ್‌ಕೆಸಿಸಿಐ ಹಿರಿಯ ಉಪಾಧ್ಯಕ್ಷರು ಹಾಗೂ ಉದ್ಯಮಿಗಳಾದ ಉಮಾ ರೆಡ್ಡಿ ಹೇಳಿದರು.ನಗರದ ಬಿವಿವಿ ಸಂಘದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ (ಬಿಮ್ಸ್)ನ 25ನೇ ವರ್ಷದ ರಜತ ಮಹೋತ್ಸವವ ಉದ್ಘಾಟಿಸಿ ಮಾತನಾಡಿ, ಎಂಬಿಎ ಪದವಿಯು ನಾಯಕತ್ವ ಮತ್ತು ವ್ಯವಸ್ಥಾಪಕ ಕೌಶಲ್ಯಗಳ ಮೇಲೆ ಕೇಂದ್ರಿಕರಿಸುವ ಒಂದು ವ್ಯಾಪಾರ ಮತ್ತು ನಿರ್ವಹಣಾ ಪದವಿಯಾಗಿದೆ. ಈ ಪದವಿ ಗಳಿಸುವ ಮೂಲಕ ನಿಮ್ಮ ವೃತ್ತಿ ವೇಗಗೊಳಿಸಲು ಹೊಸ ಕೈಗಾರಿಕೆಗಳಿಗೆ ಪರಿವರ್ತನೆ ಮಾಡಲು, ಸ್ವಂತ ವ್ಯವಹಾರ ಪಾರಂಭಿಸಲು ಸಹಕಾರಿಯಾಗಿದೆ. ಇಂದಿನ ವಿದ್ಯಾರ್ಥಿಗಳು ಯಶಸ್ವಿ ಉದ್ಯಮಿಯಾಗಲು ಶಿಸ್ತು, ಪರಿಶ್ರಮ, ಪಾಲುದಾರಿಕೆ, ಸಂಘಟನಾತ್ಮಕ ಕಾರ್ಯ, ಗುಣಮಟ್ಟ, ಪ್ಯಾಶನ್. ನೆಟವರ್ಕ್ ಮತ್ತು ಸಂವಹನ ಮುಖ್ಯವಾಗಿರುತ್ತದೆ ಎಂದರು.
ಸ್ವ ಇಚ್ಚಾಶಕ್ತಿಯಿಂದ ಸ್ವಂತ ಕನಸಿನೊಂದಿಗೆ ಹೊಸ ಉದ್ಯಮ ಸ್ಥಾಪನೆಗೆ ಮುಂದಾಗಬೇಕು. ಬಾಗಲಕೋಟೆ ಮೂಲಭೂತ ಸೌಕರ್ಯ ಹಾಗೂ ಶಿಕ್ಷಣದ ಸೌಲಭ್ಯ ಮತ್ತು ಉತ್ತಮ ಹಸಿರು ವಾತಾವರಣ ಮೂಲಕ ಅಭಿವೃದ್ಧಿ ಹೊಂದಿದ ಮಾದರಿ ನಗರವಾಗಿದೆ. ಬಾಗಲಕೊಟೆ ಅಭಿವೃದ್ಧಿಗೆ ಬಿವಿವಿ ಸಂಘದ ಕೊಡುಗೆ ದೊಡ್ಡದು. ಇಲ್ಲಿನ ಶಿಸ್ತು, ಸ್ವಚ್ಛತೆ, ಸೌಂದರ್ಯೀಕರಣದಿಂದಾಗಿ ನಗರ ಬಹಳಷ್ಟು ಮುಂದುವರೆದಿದೆ. ನಗರ ಅಭಿವೃದ್ಧಿಗೆ ಕಾರಣರಾದ ಡಾ.ವೀರಣ್ಣ ಚರಂತಿಮಠಗೆ ಕೃತಜ್ಞತೆ ಎಂದ ಅವರು, ಎಲ್ಲ ರೀತಿ ಶಿಕ್ಷಣಕ್ಕೆ ಅವಕಾಶವಿರುವ ಈ ಸಂಸ್ಥೆ ಸದುಪಯೋಗ ಪಡೆದುಕೋಳ್ಳಬೇಕು. ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಬಿಮ್ಸ್ ಸಂಸ್ಥೆಗೆ ಶುಭಾಶಯ ತಿಳಿಸಿದರು.ಅಧ್ಯಕ್ಷತೆ ವಹಿಸಿದ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಈ ಕಾಲೇಜು 25 ವರ್ಷಗಳಲ್ಲಿ ಸಾಕಷ್ಟು ಪ್ರಗತಿ ಕಂಡಿದೆ. ಸಹಸ್ರಾರು ವಿದ್ಯಾರ್ಥಿಗಳು ಎಂಬಿಎ ಸ್ನಾತಕೋತ್ತರ ಪದವಿ ಪಡೆದು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ವಿವಿಧ ಕಂಪನಿಗಳಲ್ಲಿ, ಸರ್ಕಾರಿ, ಬ್ಯಾಂಕ್, ಸಹಕಾರ, ಖಾಸಗಿ ಮತ್ತು ಸ್ವಂತ ವ್ಯಾಪಾರ ಉದ್ದಿಮೆಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಬಿಮ್ಸ್ ಹಾಗೂ ಸಂಘದ ಹೆಮ್ಮೆಯಾಗಿದೆ. ಭಾರತದ ಪ್ರಗತಿ ಓಟದಲ್ಲಿ ನಾವು ಶ್ರಮವಹಿಸಿಬೇಕಾಗಿದೆ. ಮುಂಬರುವ ಯುವಶಕ್ತಿಗೆ ಉದ್ಯೋಗಾವಕಾಶ ಸಿಗುವಂತೆ ಅವರಿಗೆ ಮೂಲಭೂತ ಸೌಲಭ್ಯ ಒದಗಿಸಬೇಕಾಗಿದೆ. ಆ ನಿಟ್ಟಿನಲ್ಲಿ ಪ್ರಧಾನಿ ಅವರು ಯೋಜನೆ ರೂಪಿಸುತ್ತಿದ್ದಾರೆ. ಭಾರತದ ಸಂಸ್ಕೃತಿ ಎಲ್ಲರೊಡನೆ ಒಂದಾಗುವ ಶಕ್ತಿ ಇರುವುದರಿಂದ ಇಂದು ಜಗತ್ತಿನ ಬೇರೆ ದೇಶಗಳಲ್ಲಿ ಒಳ್ಳೆಯೆ ವೈದೈರು, ಎಂಜಿನಿಯರ್, ಉದ್ಯಮಿಗಳೆಲ್ಲಾ ಮೂಲ ಭಾರತದವರೆ ಇದ್ದಾರೆ. ಬೇರೆ ದೇಶಗಳಿಗಿಂತ ಭಾರತ ಯುವಕರಿಗೆ ಅತಿ ದೊಡ್ಡ ಶಕ್ತಿ ಇದೆ. ಇಂದಿನ ಯುವಶಕ್ತಿಗೆ ಜಾಗತಿಕವಾಗಿ ಸ್ಪರ್ಧೆ ಮಾಡುವಂತೆ ನಮ್ಮಲ್ಲಿ ಶಿಕ್ಷಣದ ಪಾಠಮಾಡುವ ವಿಧಾನ ಬದಲಾಗಬೇಕಿದೆ. ವಿದ್ಯಾರ್ಥಿಗಳು ನಮ್ಮ ಮೂಲ ಕಸಬು ಉತ್ತೇಜನಗೊಳಿಸುವ ಮೂಲಕ ಸ್ವಂತ ಉದ್ಯಮಿಗಳಾಗಲಿ ಎಂದರು.
ಕಾರ್ಯಕ್ರಮದಲ್ಲಿ 25ನೇ ವರ್ಷದ ಸ್ಮರಣೆಗಾಗಿ ಬಿಮ್ಸ್ ಆರೋಹಣ ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಬಿಮ್ಸ್ ಸಂಸ್ಥೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ವಿಶ್ರಾಂತ ನಿರ್ದೇಶಕರಿಗೆ ಹಾಗೂ ವಿಶ್ವವಿದ್ಯಾಲಯಕ್ಕೆ ರ್‍ಯಾಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ವೇದಿಕೆ ಮೇಲೆ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ ಇದ್ದರು. ಬಿಮ್ಸ ಸಂಸ್ಥೆ ನಿರ್ದೇಶಕ ಡಾ.ಪ್ರಕಾಶ ವಡವಡಗಿ ಸ್ವಾಗತಿಸಿದರು. ಕಾಲೇಜು ನಡೆದು ಬಂದ ದಾರಿ ಕುರಿತು ಡಾ.ಅಮರೇಶ ಚರಂತಿಮಠ ತಿಳಿಸಿದರು. ತೇಜಶ್ವಿನಿ ಹಾಗೂ ಸಂಗಡಿಗರು ಪ್ರಾರ್ಥಿಸಿ, ಪ್ರೊ.ಸಂತೋಷಕುಮಾರ ಪರಿಚಯಿಸಿ, ಡಾ.ಪವನ ಬೆನಕಟ್ಟಿ ವಂದಿಸಿ, ಕುಮಾರಿ ಶೃದ್ಧಾ ಸರದೇಸಾಯಿ ಮತ್ತು ವೈಭವಿ ಹರ್ಲಾಪುರ ನಿರೂಪಿಸಿದರು.ಕಾರ್ಯಕ್ರಮದ ನಂತರ ವಿವಿಧ ವಿಚಾರಗೋಷ್ಠಿ, ಹಳೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸುಮಾರು 500ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಗರ ಅಭಿವೃದ್ಧಿಗೆ ಬಿವಿವಿ ಸಂಘದ ಕೊಡುಗೆ ದೊಡ್ಡದು. ಇಲ್ಲಿನ ಶಿಸ್ತು, ಸ್ವಚ್ಛತೆ, ಸೌಂದರ್ಯೀಕರಣದಿಂದ ಬಾಗಲಕೋಟೆ ನಗರ ಬಹಳಷ್ಟು ಮುಂದುವರೆದಿದೆ. ನಗರ ಅಭಿವೃದ್ಧಿಗೆ ಕಾರಣರಾದ ಡಾ.ವೀರಣ್ಣ ಚರಂತಿಮಠಗೆ ಅಭಿನಂದನೆ.ಉಮಾ ರೆಡ್ಡಿ, ಉದ್ಯಮಿಗಳು ಉಪಾಧ್ಯಕ್ಷರು ಎಫ್‌ಕೆಸಿಸಿಐ
ಸಹಸ್ರಾರು ವಿದ್ಯಾರ್ಥಿಗಳು ಎಂಬಿಎ ಸ್ನಾತಕೋತ್ತರ ಪದವಿ ಪಡೆದು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ವಿವಿಧ ಕಂಪನಿಗಳಲ್ಲಿ, ಸರ್ಕಾರಿ, ಬ್ಯಾಂಕ್, ಸಹಕಾರ, ಖಾಸಗಿ ಮತ್ತು ಸ್ವಂತ ವ್ಯಾಪಾರ ಉದ್ದಿಮೆಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಬಿಮ್ಸ್ ಹಾಗೂ ಸಂಘದ ಹೆಮ್ಮೆಡಾ.ವೀರಣ್ಣ ಚರಂತಿಮಠ, ಕಾರ್ಯಾಧ್ಯಕ್ಷರು, ಬಿವಿವಿ ಸಂಘ ಬಾಗಲಕೋಟೆ