ಚನ್ನಗಿರಿಯಲ್ಲಿ ಅನಧಿಕೃತ, ಕಂದಾಯ ಪಾವತಿಸದ ನಲ್ಲಿಗಳ ಸಂಪರ್ಕ ಕಡಿತ

| Published : Nov 23 2024, 12:30 AM IST

ಚನ್ನಗಿರಿಯಲ್ಲಿ ಅನಧಿಕೃತ, ಕಂದಾಯ ಪಾವತಿಸದ ನಲ್ಲಿಗಳ ಸಂಪರ್ಕ ಕಡಿತ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ಪಟ್ಟಣದ ಪುರಸಭೆ ವ್ಯಾಪ್ತಿಗೆ ಬರುವ ಮನೆಗಳಲ್ಲಿ ಅನಧಿಕೃತ ಮತ್ತು ಕಂದಾಯ ಪಾವತಿಸದೇ ಇರುವ ಕುಡಿಯುವ ನೀರಿನ ನೆಲ್ಲಿಗಳ ಸಂಪರ್ಕಗಳನ್ನು ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ಕಂದಾಯ ಅಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಕಡಿತಗೊಳಿಸುವ ಕಾರ್ಯಾಚರಣೆಗೆ ಶುಕ್ರವಾರ ಚಾಲನೆ ನೀಡಲಾಯಿತು.

- ಮುಖ್ಯಾಧಿಕಾರಿ, ಕಂದಾಯ ಅಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಪುರಸಭೆ ವ್ಯಾಪ್ತಿಗೆ ಬರುವ ಮನೆಗಳಲ್ಲಿ ಅನಧಿಕೃತ ಮತ್ತು ಕಂದಾಯ ಪಾವತಿಸದೇ ಇರುವ ಕುಡಿಯುವ ನೀರಿನ ನೆಲ್ಲಿಗಳ ಸಂಪರ್ಕಗಳನ್ನು ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ಕಂದಾಯ ಅಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಕಡಿತಗೊಳಿಸುವ ಕಾರ್ಯಾಚರಣೆಗೆ ಶುಕ್ರವಾರ ಚಾಲನೆ ನೀಡಲಾಯಿತು.

ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ಈ ವೇಳೆ ಮಾತನಾಡಿ, ಚನ್ನಗಿರಿ ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಪಟ್ಟಣದ ನಾಗರೀಕರು ಸರಿಯಾದ ಸಮಯಕ್ಕೆ ಕಂದಾಯಗಳನ್ನು ಪಾವತಿ ಮಾಡಬೇಕು. ಆ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕು. ಪ್ರತಿವರ್ಷ ಮಾರ್ಚ್‌ನಲ್ಲಿ ಆಸ್ತಿ ತೆರಿಗೆ, ಕುಡಿಯುವ ನೀರಿನ ಕಂದಾಯಗಳನ್ನು ಪಾವತಿ ಮಾಡಿದರೆ ಶೇ.5ರಷ್ಟು ರಿಯಾಯಿತಿ ದೊರೆಯಲಿದೆ. ಈ ಸೌಲಭ್ಯ ಪ್ರತಿಯೊಬ್ಬರೂ ಬಳಕೆ ಮಾಡಿಕೊಳ್ಳಬೇಕು. ನೆಲ್ಲಿ ಕಂದಾಯವನ್ನು ಪಾವತಿಸದೇ ಇರುವ ಮನೆಗಳ ಸಂಪರ್ಕಗಳನ್ನು ಮುಲಾಜಿಲ್ಲದೇ ಕಡಿತಗೊಳಿಸಲಾಗುವುದು ಎಂದರು.

ಕಂದಾಯ ಅಧಿಕಾರಿ ಮಂಜುನಾಥ್ ಮಾತನಾಡಿ, ಪಟ್ಟಣದಲ್ಲಿ 3651 ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯದ ನೆಲ್ಲಿಗಳಿವೆ. ಇವುಗಳಲ್ಲಿ ಅನಧಿಕೃತ ಮತ್ತು ಕಂದಾಯ ಪಾವತಿಸದೇ ಇರುವ ನೆಲ್ಲಿಗಳ ಸಂಪರ್ಕ ಸ್ಥಗಿತಗೊಳಿಸಲಾಗುತ್ತಿದೆ. ಈ ಕಾರ್ಯಾಚರಣೆ ಪಟ್ಟಣದ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿಯೋ ನಡೆಯಲಿದೆ. ಕಂದಾಯ ಪಾವತಿದಾರರು ತಮ್ಮ ಮನೆ ಕಂದಾಯ ಮತ್ತು ನೆಲ್ಲಿ ಕಂದಾಯ ಬಾಕಿ ಹಣವನ್ನು ಕೂಡಲೇ ಪಾವತಿಸಬೇಕು ಎಂದರು.

ಈ ಸಂದರ್ಭ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಪ್ರಭುದೇವ್, ಮಧು ಸೇರಿದಂತೆ ಕಚೇರಿ ಸಿಬ್ಬಂದಿ ಹಾಜರಿದ್ದರು.

- - - -22ಕೆಸಿಎನ್‌ಜಿ1:

ಚನ್ನಗಿರಿ ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಮತ್ತು ಕಂದಾಯ ಪಾವತಿಸದೇ ಇರುವ ಮನೆಗಳಿಗೆ ನೀಡಲಾದ ನಳ ಸಂಪರ್ಕವನ್ನು ಪುರಸಭೆ ಸಿಬ್ಬಂದಿ ಕಡಿತಗೊಳಿಸಿದರು.